Top

ಕೆಸರಲ್ಲಿ ಸಿಲುಕಿದ ತಾಯಿ ಆನೆ: ಮರಿ ಆನೆ ಪಡಿಪಾಟಲು

ಕೆಸರಲ್ಲಿ ಸಿಲುಕಿದ ತಾಯಿ ಆನೆ: ಮರಿ ಆನೆ ಪಡಿಪಾಟಲು
X

ನೀರು ಕುಡಿಯಲು ಹೋದ ತಾಯಿ ಆನೆಯೊಂದು ಕೆಸರಿನಲ್ಲಿ ಸಿಲುಕಿಕೊಂಡು ಹೊರಬರಲು ಆಗದೇ ಪರದಾಡುತ್ತಿದ್ದರೆ ಮರಿ ಆನೆ ಸಂಕಟ ಪಡುತ್ತಿರುವ ಮಲಕಲಕುವ ಘಟನೆ ಸಕಲೇಶಪುರ ತಾಲ್ಲೂಕಿನ ಮಾರನಹಳ್ಳಿ ಬಳಿಯ ಕಡದರಹಳ್ಳಿ ಗ್ರಾಮದಲ್ಲಿ ನಡೆದಿದೆ.

ತಾಯಿ ಆನೆಯ ನಾಲ್ಕು ಕಾಲುಗಳು ಕೆಸರಿನಲ್ಲಿ ಹೂತುಹೋಗಿದ್ದು ಹೊರಬರಲಾಗದೇ ನರಳಾಡುತ್ತಿದೆ. ತಾಯಿ ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದರೂ ಯಾವುದೇ ನೆರವು ನೀಡಲು ಆಗದೇ ಮರಿ ಆನೆ ಮರುಗುತ್ತಿದೆ.

ಕಳೆದ ನಾಲ್ಕು ದಿನಗಳಿಂದ ಕೆಸರಿನಲ್ಲೇ ಸಿಕ್ಕಿ ಹಾಕಿಕೊಂಡಿರುವ ತಾಯಿ ಆನೆಯನ್ನು ಬಿಟ್ಟು ಕದಲದ ಮರಿ ಆನೆಯನ್ನು ಗಮನಿಸಿದ ಸ್ಥಳೀಯರು ತಾಯಿ ಆನೆಯನ್ನು ಹೊರತೆಗೆಯಲು ಹರಸಾಹಸ ಪಡುತ್ತಿದ್ದಾರೆ.

ಆನೆ ಕೆಸರಲ್ಲಿ ಸಿಲುಕಿರುವ ಘಟನೆ ತಡವಾಗಿ ಸ್ಥಳೀಯರ ಗಮನಕ್ಕೆ ಬಂದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಜೆಸಿಬಿ ಬಳಸಿ ಹೂಳು ತೆಗೆಯುವ ಮೂಲಕ ಆನೆಯನ್ನು ರಕ್ಷಿಸುವ ಕೆಲಸ ಮಾಡುತ್ತಿದ್ಧಾರೆ.

ಕಾಡಾನೆ ಹಾವಳಿ ನಿಯಂತ್ರಿಸಲು ಅರಣ್ಯ ವಿಫಲವಾಗಿದ್ದು, ಮೇವು ಅರಸಿ ಕಾಡು ಬಿಟ್ಟು ನಾಡಿನತ್ತ ಬರುತ್ತಿರುವ ಆನೆಗಳು ನಾನಾ ಸಮಸ್ಯೆಗಳಿಗೆ ಗುರಿಯಾಗುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Next Story

RELATED STORIES