Top

ಕೇಜ್ರಿವಾಲ್ ಭೇಟಿಗೆ ಬಂದವನ ಬಳಿ ಜೀವಂತ ಗುಂಡು ಪತ್ತೆ

ಕೇಜ್ರಿವಾಲ್ ಭೇಟಿಗೆ ಬಂದವನ ಬಳಿ ಜೀವಂತ ಗುಂಡು ಪತ್ತೆ
X

ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಮಂಗಳವಾರ ನಡೆಸುತ್ತಿದ್ದ ಜನತಾ ದರ್ಶನಕ್ಕೆ ಬಂದಿದ್ದ ಯುವಕನೊಬ್ಬನ ಬಳಿ ಜೀವಂತ ಗುಂಡುಗಳು ಪತ್ತೆಯಾಗಿದೆ. ಇದರಿಂದ ಕ್ರೇಜಿವಾಲ್ ಹತ್ಯೆಗೆ ಮತ್ತೊಂದು ಯತ್ನ ನಡೆದ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಆತಂಕ ಸೃಷ್ಟಿಸಿದೆ.

ಮಸೀದಿಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ ಇಮ್ರಾನ್​ ಬಂಧಿತ ಯುವಕನಾಗಿದ್ದು, ಜನತಾ ದರ್ಶನದ ವೇಳೆ ತಪಾಸಣೆ ಮಾಡಿದಾಗ ಈತ ಬಳಿ ಇದ್ದ ಪೆಟ್ಟಿಗೆಯಲ್ಲಿ ಜೀವಂತ ಗುಂಡುಗಳು ಪತ್ತೆಯಾಗಿವೆ. ಕೂಡಲೇ ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದಾರೆ.

ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಯುವಕನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದಾಗ ವೇತನ ಹೆಚ್ಚಳ ಕುರಿತು ಮುಖ್ಯಮಂತ್ರಿ ಬಳಿ ಮಾತನಾಡಲು ಈತ ಬಂದಿದ್ದಾಗಿ ತಿಳಿಸಿದ್ದಾನೆ.

ವಾರದ ಹಿಂದೆಯಷ್ಟೇ ಕ್ರೇಜಿವಾಲ್ ಕಚೇರಿಯಲ್ಲಿ ವ್ಯಕ್ತಿಯೊಬ್ಬ ಖಾರದ ಪುಡಿ ಎರಚಿ ದಾಳಿ ನಡೆಸಲು ಮುಂದಾಗಿದ್ದ. ಈ ವೇಳೆ ರಾಜಕೀಯ ಎದುರಾಳಿಗಳಿಂದ ಜೀವಭಯವಿದೆ. ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅರವಿಂದ್​ ಕೇಜ್ರಿವಾಲ್​ ಆರೋಪಿಸಿದ್ದರು. ಇದರ ಬೆನ್ನಲ್ಲೆ ಮತ್ತೊಂದು ದಾಳಿ ಯತ್ನ ಅವರ ಮೇಲೆ ನಡೆದಿದೆ.

ಅವರು ನನ್ನನ್ನು ಕೊಲಲ್ಲು ಯತ್ನಿಸುತ್ತಿದ್ದಾರೆ. ನಾನು ಸಿಎಂ ಆಗಬಾರದು ಎಂದು ಅವರ ಇಚ್ಛೆ. ಇದೇ ಕಾರಣಕ್ಕಾಗಿ ಎರಡು ವರ್ಷದಲ್ಲಿ ನನ್ನ ಮೇಲೆ ನಾಲ್ಕು ಬಾರಿ ದಾಳಿ ನಡೆದಿದೆ ಎಂದು ದೆಹಲಿ ಮುಖ್ಯಮಂತ್ರಿ ಆರೋಪಿಸಿದ್ದರು.

ದೆಹಲಿ ಮುಖ್ಯಮಂತ್ರಿಗಳಿಗೆ ಭದ್ರತೆ ಒದಗಿಸಲು ಸಾಧ್ಯವಾಗಿಲ್ಲ ಎಂದರೆ ನಿಮ್ಮ ಹುದ್ದೆಯಿಂದ ಕೆಳಗಿಳಿಯಿರಿ ಎಂದು ಆಮ್​ ಆದ್ಮಿ ಮುಖ್ಯಸ್ಥ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸವಾಲ್​ ಹಾಕಿದ್ದರು. ಖಾರದ ಪುಡಿ ದಾಳಿ ಹಿಂದೆ ಬಿಜೆಪಿ ಷಡ್ಯಂತ್ರವಿದೆ ಎಂದು ಕೂಡ ಅವರು ಆರೋಪಿಸಿದ್ದರು.

Next Story

RELATED STORIES