Top

ಅಂಬಿ ಸಮಾಧಿಗೆ ಬಂದ ದರ್ಶನ್ ಮಾಡಿದ್ದೇನು ಗೊತ್ತಾ?

ಅಂಬಿ ಸಮಾಧಿಗೆ ಬಂದ ದರ್ಶನ್ ಮಾಡಿದ್ದೇನು ಗೊತ್ತಾ?
X

ನಟ ಅಂಬರೀಶ್​ ಅಂತ್ಯಸಂಸ್ಕಾರ ನಡೆದ ಮಾರನೇ ದಿನವೂ ಪ್ರೀತಿಯಿಂದ ಕರೆಯುತ್ತಿದ್ದ ಅಪ್ಪಾಜಿ ಗುಂಗಿನಲ್ಲೇ ಇದ್ದ ನಟ ದರ್ಶನ್ ಮಂಗಳವಾರ ಸಮಾಧಿಗೆ ಆಗಮಿಸಿ ನಮಿಸಿದರು. ಈ ಮೂಲಕ ಅವರ ಮೇಲಿನ ವಿಶೇಷ ಅಭಿಮಾನ ವ್ಯಕ್ತಪಡಿಸಿದರು.

ಬುಧವಾರ ಹಾಲು-ತುಪ್ಪ ಕಾರ್ಯ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸಮಾಧಿ ಬಳಿ ಸಿದ್ಧತೆಯನ್ನು ಪರಿಶೀಲಿಸಲು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಜೊತೆ ಆಗಮಿಸಿ ಚರ್ಚಿಸಿದರು.

ಸಮಾಧಿಯಿಂದ ನೇರವಾಗಿ ದರ್ಶನ್, ಜೆ.ಪಿ ನಗರದಲ್ಲಿರುವ ಅಂಬರೀಶ್ ಮನೆಗೆ ತೆರಳಿದರು, ಸುಮಲತಾ ಮತ್ತು ಅಂಬರೀಶ್ ಮಗ ಅಭಿಷೇಕ್​ಗೆ ಸಂತ್ವಾನವನ್ನು ಹೇಳಿದರು.

ಇನ್ನೂ ಅಂಬರೀಶ್ ಸಮಾಧಿ ಮುಂದೆ ಸಾವಿರಾರು, ಸಹಸ್ರಾರು ಅಭಿಮಾನಿ ವೃಂಧ ಕಂಠೀರವ ಸ್ಟುಡಿಯೋಗೆ ಆಗಮಿಸುತ್ತಾ ಇದೆ. ರಾಜ್ಯದ ನಾನಾ ಭಾಗದಿಂದ ಅಂಬಿ ಅಭಿಮಾನಿ ಬಳಗ ಸಮಾಧಿಗೆ ಅಗಮಿಸ್ತಿದ್ದಾರೆ. ಕೆಲ ಅಂಬಿಗೆ ಜೈ ಕಾರ ಹಾಕಿದರು ಇನ್ ಕೆಲವರು ಜಲೀಲನನ್ನು ನೆನೆದು ಕಣ್ಣೀರು ಹಾಕಿದರು.

ಅಂಬರೀಶ್ ಆಪ್ತ ರಾಕ್ ಲೈನ್ ವೆಂಕಟೇಶ್ ಅಂಬರೀಶ್ ಸ್ನೇಹಿತ ದೊಡ್ಡಣ್ಣ, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅಂಬರೀಶ್ ಆಪ್ತ ಸಹಾಯಕ ಸೀನಣ್ಣ ಖುದ್ದಾಗಿ ಬಂದು ನಾಳಿನ ಕಾರ್ಯಕ್ಕೆ ಎಲ್ಲಾ ಸಿದ್ಧತೆ ಮಾಡಿದ್ದಾರೆ.

ಇಷ್ಟು ದಿನ ಕಂಠೀರವ ಸ್ಟುಡಿಯೋಗೆ ಶೂಟಿಂಗ್ ಹಾಗು ರಾಜ್ ಕುಮಾರ್ ಸಮಾಧಿ ನೋಡಲು ಬರ್ತಿದ್ದ ಜನ ಈಗ ಅಂಬರೀಶ್ ಸಮಾಧಿಗೂ ಬರುವಂತಾಗಿದೆ.

Next Story

RELATED STORIES