Top

ಅಂಬರೀಶ್ ಅಂತ್ಯಕ್ರಿಯೆ: ಪೊಲೀಸರ ಕರ್ತವ್ಯಕ್ಕೆ ಸಿಎಂ ಸಲಾಂ

ಅಂಬರೀಶ್ ಅಂತ್ಯಕ್ರಿಯೆ: ಪೊಲೀಸರ ಕರ್ತವ್ಯಕ್ಕೆ ಸಿಎಂ ಸಲಾಂ
X

ಹಿರಿಯ ನಟ ಅಂಬರೀಶ್ ಮತ್ತು ಮಾಜಿ ಕೇಂದ್ರ ಸಚಿವ ಜಾಫರ್ ಷರೀಫ್ ಅಂತ್ಯಕ್ರಿಯೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ ಬೆಂಗಳೂರು ಪೊಲೀಸರಿಗೆ ಮುಖ್ಯಮಂತ್ರಿ ಹೆಚ್.ಡಿ ಸ್ವಾಮಿ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.

ಅಂಬರೀಶ್ ಮತ್ತು ಜಾಫರ್ ಷರೀಫ್ ಪಂಚಭೂತಗಳಲ್ಲಿ ಲೀನವಾದ ಹಿನ್ನೆಲೆಯಲ್ಲಿ ಮಂಗಳವಾರ ಕುಮಾರಸ್ವಾಮಿ ಟ್ವೀಟ್ ಮಾಡುವ ಮೂಲಕ ಹಗಲಿರುಳು ಶ್ರಮಿಸಿದ ಅಧಿಕಾರಿ ವರ್ಗ, ಪೊಲೀಸ್ ಇಲಾಖೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಅತ್ಯಂತ ಕಡಿಮೆ ಅವಧಿಯಲ್ಲಿ ತಮ್ಮ ನೆಚ್ಚಿನ ನಾಯಕನ ಅಂತಿಮ ದರ್ಶನಕ್ಕೆ ಅತ್ಯುತ್ತಮ ವ್ಯವಸ್ಥೆ ಮಾಡಿದ ಮಂಡ್ಯ ಜಿಲ್ಲಾಡಳಿತಗಳ ಕಾರ್ಯತತ್ಪರತೆ ಶ್ಲಾಘನೀಯ ಇನ್ನೂ ರಾಜ್ಯದ ಜನತೆಗೆ, ಸಿನಿಮಾ ತಂತ್ರಜ್ಞರಿಗೆ, ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ, ಸಚಿವರುಗಳಿಗೆ, ಮಾಧ್ಯಮದವರಿಗೆ, ಕೇಂದ್ರ ಸರ್ಕಾರದ ರಕ್ಷಣಾ ಸಚಿವರಿಗೆ ಧನ್ಯವಾದಗಳನ್ನು ಅರ್ಪಿಸಿದ ಹೆಚ್.ಡಿ‌.ಕುಮಾರಸ್ವಾಮಿ ಅರ್ಪಿಸಿದರು.

ಒಟ್ಟಾರೆ ಬಂದೋಬಸ್​ಗೆ 15 ಸಾವಿರ ಪೊಲೀಸರನ್ನು ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ನೇತೃತ್ವದಲ್ಲಿ ಬಂದೋಬಸ್ತ್ ಗೆ ವ್ಯವಸ್ಥೆ ಮಾಡಲಾಗಿದ್ದು, ಪೊಲೀಸ್ ಇಲಾಖೆ ಹಗಲಿರುಳು ಶ್ರಮವಹಿಸಿದೆ. ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು.

ಇನ್ನೂ ನನ್ನ ಬೆನ್ನಿಗೆ ನಿಂತ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರ ಸಹಕಾರಕ್ಕೂ ಧನ್ಯವಾದಗಳು. ನಿಧನದ ಸುದ್ದಿ ತಿಳಿದಾಗಿನಿಂದಲೂ ಅಂತ್ಯ ಸಂಸ್ಕಾರದವರೆಗೂ ಸಹಕರಿಸಿದ ಮಾಧ್ಯಮದವರಿಗೂ ಧನ್ಯವಾದಗಳು.ನನ್ನ ಸಂಪುಟದ ಸಚಿವರುಗಳಿಗೂ ಧನ್ಯವಾದಗಳು. ಅಂಬರೀಷ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಆಗಮಿಸಿದ ರಾಜ್ಯದ ಜನತೆ ಹಾಗೂ ಸಿನಿಮಾ ಜಗತ್ತಿನ ಗಣ್ಯರಿಗೂ ಸರ್ಕಾರದ ಪರವಾಗಿ ಧನ್ಯವಾದಗಳು ಎಂದು ಹೆಚ್.ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

Next Story

RELATED STORIES