Top

ನಿಮಿಷ 10, ವಾರ್ತೆ 50

ನಿಮಿಷ 10, ವಾರ್ತೆ 50
X

1.ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಭದ್ರತೆಯಲ್ಲಿ ಪದೇ ಪದೇ ಲೋಪವಾಗುತ್ತಿದೆ. ಜೀವಂತ ಗುಂಡು ಇಟ್ಟುಕೊಂಡು ಕೇಜ್ರಿವಾಲ್​ ಭೇಟಿಯಾಗಲು ಬಂದಿದ್ದ ಮಸೀದಿಯ ಮೌಲ್ವಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. 39 ವರ್ಷದ ಮಹಮದ್​ ಇಮ್ರಾನ್​ ಎಂಬಾತ ಅರೆಸ್ಟ್‌ ಆಗಿದ್ದು, ದೆಹಲಿ ಮಸೀದಿಯೊಂದರ ಮೇಲುಸ್ತುವಾರಿ ನೋಡಿಕೊಳ್ಳುತ್ತಾನೆ. ಈತ 12 ಜನರೊಂದಿಗೆ ಮುಖ್ಯಮಂತ್ರಿಯ ಜನತಾ ದರ್ಬಾರ್​ಗೆ ಆಗಮಿಸಿದ್ದ. ಆದ್ರೆ, ಕೇಜ್ರಿವಾಲ್​ ನಿವಾಸದ ಭದ್ರತಾ ಸಿಬ್ಬಂದಿ ಪರಿಶೀಲಿಸಿದಾಗ ಆತನ ಪರ್ಸ್​ನಲ್ಲಿ ಜೀವಂತ ಗುಂಡುಗಳು ಪತ್ತೆಯಾದವು. ತಕ್ಷಣ ಅರೆಸ್ಟ್‌ ಮಾಡಿದ ಪೊಲೀಸರು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಸ್ವಲ್ಪ ದಿನಗಳ ಹಿಂದೆಯಷ್ಟೇ ಕೇಜ್ರಿವಾಲ್​ ಮೇಲೆ ವ್ಯಕ್ತಿಯೊಬ್ಬ ಖಾರದ ಪುಡಿ ಎರಚಿದ್ದ. ಅದಾದ ಬಳಿಕ ತಮಗೆ ರಕ್ಷಣೆ ಸಾಕಾಗುತ್ತಿಲ್ಲವೆಂದು ಅರವಿಂದ್​ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

2.ವೈರಲ್ ಆಗುತ್ತಿದೆ. ಟಿಕ್ ಟಾಕ್ ಪ್ರಸಾರ ಆಪ್ ಯುವಜನಾಂಗದಲ್ಲಿ ಹೊಸ ಕ್ರೇಜ್ ಸೃಷ್ಟಿಸಿದ್ದು, ಎಲೆಗಳನ್ನು ತೋರಿಸುತ್ತಾ ಹಳೆಯ ಗೀತೆಗೆ ಸ್ಟೆಪ್ ಹಾಕುತ್ತಾರೆ. ಬಸ್, ಸ್ಕೂಟರ್ ಮತ್ತಿತರ ವಾಹನಗಳ ಮುಂದೆ ಎಲೆ ತೋರಿಸುತ್ತಾ ಡ್ಯಾನ್ಸ್ ಮಾಡಿ ನಿಲ್ಲಿಸುತ್ತಾರೆ. ಹಾಸ್ಯ ಎನಿಸಿದ್ದರೂ ಇಂತಹ ವರ್ತನೆ ಅಪಾಯಕಾರಿ. ವಾಹನಗಳ ಮುಂದೆ ಡ್ಯಾನ್ಸ್ ಮಾಡುತ್ತಾ ಸಂಚಾರಕ್ಕೆ ತೊಂದರೆ ಕೊಡಲು ಪ್ರಯತ್ನಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

3. ಕಬ್ಬಿಗೆ ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ರೈತರನ್ನು ಗೂಂಡಾ, ದರೋಡೆಕೋರರು ಎಂದು ಉಲ್ಲೇಖಿಸಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ರೈತ ಮಹಿಳೆ ಜಯಶ್ರೀ ಗುರನ್ನವರ ತಿರುಗೇಟು ನೀಡಿದ್ದಾರೆ. ಮುಧೋಳದಲ್ಲಿ ನಡೆದ ಕೃತಜ್ಞತಾ ಸಭೆಯಲ್ಲಿ ಮಾತನಾಡಿರುವ ಅವರು, 'ರಾಮಕೃಷ್ಣ ಹೆಗಡೆಯವರು ಸಿಎಂ ಹುದ್ದೆಯಲ್ಲಿದ್ದಾಗ ಇದೇ ದೇವೇಗೌಡರು ವಿಧಾನಸೌಧದ ಬೀಗ ಒಡೆದಿದ್ದರು. ನೀವು ರೈತರನ್ನು ಗೂಂಡಾ, ದರೋಡೆಕೋರರ ಎಂದು ಕರೆದ ಮೇಲೆ ದೇವೇಗೌಡರನ್ನು ಏನೆಂದು ಕರೆಯುತ್ತೀರಾ? ಎಂದು ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದ್ದಾರೆ.

4.ಸಾರ್ಕ್‌ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪಾಕಿಸ್ತಾನಕ್ಕೆ ಆಹ್ವಾನಿಸಲಾಗುವುದು ಎಂದು ಅಲ್ಲಿನ ವಿದೇಶಾಂಗ ಇಲಾಖೆ ವಕ್ತಾರ ಡಾ.ಮೊಹಮ್ಮದ್ ಫೈಸಲ್ ಹೇಳಿದ್ದಾರೆ. ಇಸ್ಲಾಮಾಬಾದ್‌ನಲ್ಲಿ ನಡೆದ ಸಮಾವೇಶವೊಂದರಲ್ಲಿ ಈ ಮಾಹಿತಿ ನೀಡಿದ್ದಾರೆ. ಕರ್ತಾರಪುರ ಕಾರಿಡಾರ್‌ ಸಮಾರಂಭಕ್ಕೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅವರಿಗೆ ಆಹ್ವಾನ ನೀಡಿದ ಬೆನ್ನಲ್ಲೇ ಫೈಸಲ್ ಅವರು ಮೋದಿಗೆ ಆಹ್ವಾನ ನೀಡುವ ಹೇಳಿಕೆ ನೀಡಿದ್ದಾರೆ.

5.ಪೈಲಟ್​ ನಿದ್ರೆಗೆ ಜಾರಿದ ಪರಿಣಾಮ ವಿಮಾನವೊಂದು ನಿಗದಿತ ಗುರಿ ತಲುಪದೇ ಹೆಚ್ಚುವರಿ 46 ಕಿಲೋ ಮೀಟರ್‌ ಹಾರಾಟ ನಡೆಸಿರುವ ಘಟನೆ ಆಸ್ಟ್ರೇಲಿಯಾದ ಕ್ಯಾನ್​ಬೆರಾದಲ್ಲಿ ನಡೆದಿದೆ. ಈ ವಿಮಾನದಲ್ಲಿ ಪೈಲಟ್​ ಮಾತ್ರ ಪ್ರಯಾಣಿಸುತ್ತಿದ್ದ. ಆಸ್ಟ್ರೇಲಿಯಾದ ಡೆವನ್​ಪೋರ್ಟ್​ನಿಂದ ತಾಸ್ಮಾನಿಯಾದ ಕಿಂಗ್​ ಐಲ್ಯಾಂಡ್ ಕಡೆಗೆ ನವೆಂಬರ್​ 8ರಂದು ಪ್ರಯಾಣ ಬೆಳೆಸಿತ್ತ.

6.ಆ್ಯಂಬಿಡೆಂಟ್ ವಂಚನೆ ಪ್ರಕರಣದ ಆರೋಪಿಗಳಾದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹಾಗೂ ಅಲಿಖಾನ್ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಸಿಸಿಬಿ ಪೊಲೀಸರಿಗೆ ಹೈಕೋರ್ಟ್ ಸೂಚಿಸಿದೆ. ಎಫ್ಐಆರ್ ರದ್ದು ಕೋರಿ ಜನಾರ್ದನ ರೆಡ್ಡಿ ಹಾಗೂ ಅಲಿಖಾನ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ ಈ ಸೂಚನೆ ನೀಡಿದೆ. ಜನಾರ್ದನ ರೆಡ್ಡಿ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ.ನಾಗೇಶ್, ಅರ್ಜಿದಾರರು ಚಿಟ್ ಫಂಡ್ ಕಾಯ್ದೆ ಉಲ್ಲಂಘನೆ ಆರೋಪಕ್ಕೆ ಒಳಪಡುವುದಿಲ್ಲ. ಪೊಲೀಸರು ದುರುದ್ದೇಶದಿಂದ ಸಿಲುಕಿಸಿದ್ದಾರೆ.

7.ಸಾಕಷ್ಟು ಟೀಕೆಗಳ ನಡುವೆಯೇ ಪಂಜಾಬ್‌ ಸಚಿವ ನವಜೋತ್‌ ಸಿಂಗ್ ಸಿಧು ಮತ್ತೆ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಪಾಕ್‌ ಸೇನಾ ಮುಖ್ಯಸ್ಥರಿಗೆ ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಎಚ್ಚರಿಕೆ ನೀಡಿದ ಬೆನ್ನಲ್ಲೇ ಸಿಧು ಭೇಟಿ ಸಾಕಷ್ಟು ಮಹತ್ವ ಪಡೆದಿದೆ. ಕಾರ್ತರ್‌ಪುರ್‌ ಕಾರಿಡಾರ್‌ ಯೋಜನೆಗೆ ಶೀಲನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ವಿದೇಶಾಂಗ ಸಚಿವಾಲಯದಿಂದ ಬಂದಿದ್ದ ಆಹ್ವಾನದ ಮೇರೆಗೆ ಪಾಕಿಸ್ತಾನಕ್ಕೆ ಹೋಗಿದ್ದಾರೆ. ವಾಘಾ ಗಡಿಯಲ್ಲಿ ಅವರನ್ನು ಪಾಕಿಸ್ತಾನದ ಅಧಿಕಾರಿಗಳು ಸ್ವಾಗತಿಸಿದರು.

8.ನೆರೆ ರಾಜ್ಯ ತೆಲಂಗಾಣದಲ್ಲೂ ವಿಧಾನಸಭೆ ಚುನಾವಣೆ ಕಾವೇರುತ್ತಿದೆ. ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಬಳಿಕ ಇಂದು ತೆಲಂಗಾಣದಲ್ಲಿ ಪ್ರಧಾನಿ ಮೋದಿ ಚೊಚ್ಚಲ ಭಾಷಣ ಮಾಡಿದ್ದಾರೆ. ನಿಜಮಾಬಾದ್‌ನಲ್ಲಿ ಚುನಾವಣಾ ಪ್ರಚಾರ ನಡೆಸಿದ ಮೋದಿ, ಕಾಂಗ್ರೆಸ್‌ ಮತ್ತು ಟಿಆರ್‌ಎಸ್ ಕುಟುಂಬ ರಾಜಕಾರಣದ ವಿರುದ್ಧ ಕಿಡಿಕಾರಿದ್ದಾರೆ. ತೆಲಂಗಾಣದಲ್ಲಿ ಕಾಂಗ್ರೆಸ್‌ ಮತ್ತು ಟಿಆರ್‌ಎಸ್‌ ಪಕ್ಷ ಸೌಹಾರ್ದ ಪಂದ್ಯ ಆಡುತ್ತಿವೆ ಎಂದು ಟೀಕಿಸಿದ್ದಾರೆ.

9.ರಾಜ್ಯ ಸರ್ಕಾರದ ಬಹುಮಹತ್ವಾಕಾಂಕ್ಷೆಯ ಮೇಕೆದಾಟು ಯೋಜನೆಗೆ ಕೇಂದ್ರ ಜಲಮಂಡಳಿ ಒಪ್ಪಿಗೆ ನೀಡುವ ಮೂಲಕ ಬೆಂಗಳೂರಿನ ನಾಗರೀಕರಿಗೆ ಖುಷಿಯನ್ನ ನೀಡಿದೆ..ಆದ್ರ ಇದರ ಬೆನ್ನಲ್ಲೇ ತಮಿಳುನಾಡು ಸರ್ಕಾರ ಯೋಜನೆ ವಿರೋಧಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಮುಂದಾಗಿದೆ..ಒಂದು ಕಡೆ ನೆನೆಗುದಿಗೆ ಬಿದ್ದಿದ್ದ ಯೋಜನೆಗೆ ಚಾಲನೆ ಸಿಕ್ಕಿದ ಖುಷಿ ಇದ್ರೆ,ಮತ್ತೊಂದು ಕಡೆ ಮತ್ತೆ ಕಾನೂನು ಸಮರ ಎದುರಿಸುವ ತೊಡಕು ಸರ್ಕಾರಕ್ಕೆ ಎದುರಾಗಿದೆ.

10.ನಟ ಅಂಬರೀಶ್​ ಅಂತ್ಯಸಂಸ್ಕಾರ ನಡೆದ ಮಾರನೇ ದಿನವೂ ಪ್ರೀತಿಯಿಂದ ಕರೆಯುತ್ತಿದ್ದ ಅಪ್ಪಾಜಿ ಗುಂಗಿನಲ್ಲೇ ಇದ್ದ ನಟ ದರ್ಶನ್ ಮಂಗಳವಾರ ಸಮಾಧಿಗೆ ಆಗಮಿಸಿ ನಮಿಸಿದರು. ಈ ಮೂಲಕ ಅವರ ಮೇಲಿನ ವಿಶೇಷ ಅಭಿಮಾನ ವ್ಯಕ್ತಪಡಿಸಿದರು.

11.ಪಕ್ಷ ಹಾಗೂ ಸಮ್ಮಿಶ್ರ ಸರ್ಕಾರಕ್ಕೆ ಸಂಕಷ್ಟ ಪರಿಸ್ಥಿತಿ ಎದುರಾದಾಗಲೆಲ್ಲ ಆಪಧ್ಬಾಂದವನಾಗಿ ನಿಂತವರು ಜಲಸಂಪನ್ಮೂಲ ಸಚಿವ ಡಿಕೆಶಿ. ಬಿಜೆಪಿ ನಾಯಕರ ಆಫರೇಷನ್ ಕಮಲವನ್ಮ ಠುಸ್ ಮಾಡಿ ಸರ್ಕಾರ ಸೇಫ್ ಮಾಡಿದವರು ಇದೇ ಡಿಕೆಶಿ.ಬೈ ಎಲೆಕ್ಷನ್ ನಲ್ಲೂ ಬಿಎಸ್ವೈ ರಾಮುಲುಗೆ ತೊಡೆ ತಟ್ಟಿ ಅಭ್ಯರ್ಥಿಯನ್ನ ಗೆಲ್ಲಿಸಿಕೊಂಡು ಬಂದವರು ಇದೇ ಜಲಸಂಪನ್ಮೂಲ ಸಚಿವರು..ಪದೇ ಪದೇ ತಮಗೆ ಇದೇ ಟ್ರಬಲ್ ಶೂಟರ್ ಡಿಕೆಶಿ ವಿಘ್ನ ತಂದೊಡ್ಡಿದ್ದಾರೆಂದು ಭಾವಿಸಿ ಐಟಿ,ಇಡಿ ಮೂಲಕ ಹಣಿಯೋಕೆ ರಾಜ್ಯ ಬಿಜೆಪಿ ನಾಯಕರು ಮುಂದಾಗಿದ್ದರು.

12.ಹಿರಿಯ ನಟ ಅಂಬರೀಶ್ ಹೆಸರನ್ನು ಬೆಂಗಳೂರಿನ ರೇಸ್ ಕೋರ್ಸ್​ ರಸ್ತೆಗೆ ಅಂಬರೀಶ್ ರಸ್ತೆ ಎಂದು ಹೆಸರಿಡುವಂತೆ ಫಿಲ್ಮ್ ಚೇಂಬರ್ ಕಾರ್ಯದರ್ಶಿ ಭಾಮ ಹರೀಶ್ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿಗೆ ಮನವಿ ಮಾಡಿದ್ದಾರೆ.

13.ಮಾಜಿ ಪ್ರಧಾನಿ ದೇವೇಗೌಡರು ಅಂದು ವಿಧಾನಸೌಧ ಬೀಗ ಒಡೆದರು. ಆದರೆ ಇಂದು ಆ ಕೆಲಸವನ್ನು ರೈತರು ಮಾಡಿದ್ದರೆ, ಗುಂಡಾ, ದರೋಡೆಕೋರರು, ರೌಡಿಗಳು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಕರೆಯುತ್ತಾರಲ್ಲ ಹಾಗದರೆ ನಿಮ್ಮ ಅಪ್ಪ ದೇವೇಗೌಡರು ಮಾಡಿದದ್ದಾರು ಏನು ಎಂದು ರೈತ ಮಹಿಳೆ ಜಯಶ್ರೀ ಗುರನ್ನವರ ಮುಖ್ಯಮಂತ್ರಿಗಳನ್ನು ಪ್ರಶ್ನೆ ಮಾಡಿದರು.

14.ಸಾಲಮನ್ನಾ ಯೋಜನೆ ಜಾರಿಗೆ ಸರ್ಕಾರ ಎಲ್ಲ ಸಿದ್ಧತೆಗಳನ್ನೂ ಪೂರ್ಣಗೊಳಿಸಿದೆ. ಅನುಷ್ಠಾನದ ಸಂದರ್ಭದಲ್ಲಿ ಮಧ್ಯವರ್ತಿಗಳು ಈ ಹಣವನ್ನು ದುರುಪಯೋಗ ಪಡಿಸಿಕೊಳ್ಳದಂತೆ ಎಚ್ಚರ ವಹಿಸಿ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

15.ಬೆಳಗಾವಿಯಲ್ಲಿ ಹಾಡುಹಗಲೇ ಮಗುವನ್ನು ಬೈಕ್​ನಲ್ಲಿ ಕೂರಿಸಿಕೊಂಡು ಅಪಹರಣ ಮಾಡಲಾಗಿದ್ದ ಪ್ರಕರಣವನ್ನು ಪೊಲೀಸರು ಮೂರೇ ದಿನದಲ್ಲಿ ಭೇದಿಸುವ ಮೂಲಕ ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದಾರೆ.5 ವರ್ಷದ ಮಗು ನಾನಪ್ಪನನ್ನು ಬೈಕ್​ನಲ್ಲಿ ಕೂರಿಸಿಕೊಂಡು ಹಾಡುಹಗಲೇ ಅಪಹರಿಸಲಾಗಿತ್ತು. ಸಿಸಿಟಿವಿ ದೃಶ್ಯವನ್ನು ಆಧರಿಸಿ ತನಿಖೆ ನಡೆಸಿದ ಪೊಲೀಸರು ಭಾನುವಾರ ಬೆಳಗ್ಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

16.ಮಂಡ್ಯದಲ್ಲಿ ರಾಜಕೀಯಕ್ಕೆ ಸ್ಪರ್ಧಿಸಿದ್ದಾಗ ರಮ್ಯಾಗೆ ಸಪೋರ್ಟ್ ಮಾಡಿ, ಆಕೆಯ ಗೆಲುವಿಗೆ ಕಾರಣರಾಗಿದ್ದ ಅಂಬರೀಶ್ ಸಾವನ್ನಪ್ಪಿದಾಗ ರಮ್ಯಾ ಅಂತಿಮ ದರ್ಶನ ಪಡೆಯಲು ಸಹ ಬರಲಿಲ್ಲವೆಂದು, ಅಂಬಿ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕಾರಣಕ್ಕಾಗಿ ರಮ್ಯಾ ಇನ್‌ಸ್ಟಾಗ್ರಾಂನಲ್ಲಿ ತಮಗೆ ಇರುವ ಅಪರೂಪದ ಖಾಯಿಲೆಯ ಬಗ್ಗೆ ಹೇಳಿಕೊಂಡಿದ್ದಾರೆ.

17.ಒಂದು ಕಾಲದಲ್ಲಿ ಸ್ಯಾಂಡಲ್‌ವುಡ್ ಆಳಿದ ನಟರಲ್ಲಿ ಒಬ್ಬರಾಗಿದ್ದ ಕನ್ವರ್ ಲಾಲ್ ಖ್ಯಾತಿಯ ಅಂಬಿ ಇಂದು ನಮ್ಮೊಂದಿಗಿಲ್ಲ.ಆದರೆ ಅವರ ನೆನಪು ಮಾತ್ರ ಅಜರಾಮರ.ಅಂಬಿ ಸಾವಿಗೂ ಮುನ್ನ ಪುತ್ರನೊಂದಿಗೆ ಹಾಡೊಂದಕ್ಕೆ ಹೆಜ್ಜೆ ಹಾಕಿದ ವೀಡಿಯೋವನ್ನ ಸ್ಯಾಂಡಲ್‌ವುಡ್ ಕೋರಿಯೋಗ್ರಾಫರ್ ಇಮ್ರಾನ್ ಸರ್ದಾರಿಯಾ ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

18.ಕುಂದಾನಗರಿಯಲ್ಲಿ ಹಾಡುಹಗಲೇ ಐದು ವರ್ಷದ ಮಗು ಕಿಡ್ನಾಪ್ ಆದ ಪ್ರಕರಣ ಸುಖಾಂತ್ಯವಾಗಿದೆ. ಮೂರು ದಿನಗಳ ಬಳಿಕ ಮಿಸ್ಸಿಂಗ್ ಆಗಿದ್ದ ನಾನಪ್ಪ ತಾಯಿ ಮಡಿಲು ಸೇರಿದ್ದಾನೆ. ಮಕ್ಕಳಿಲ್ಲಾ ಎಂಬ ಕಾರಣಕ್ಕೆ ಕೆ.ಎಸ.ಆರ.ಟಿ.ಸಿ ಡ್ರೈವರ್ ಮಗುವನ್ನ ಕಿಡ್ನಾಪ್ ಮಾಡಿದನೋ.ಮಳುತ್ತಾ ನಿಂತ ಮಗುವನ್ನ ಮನೆಗೆ ಕರೆದುಕೊಂಡು ಹೋದನು ಎಂಬುದು ಪೊಲೀಸ್ ತನಿಖೆಯಿಂದ ಗೊತ್ತಾಗಬೇಕಿದೆ.

19. ಚಾಮರಾಜನಗರದಲ್ಲಿ ಶೇ 53 ರಷ್ಟು ಅರಣ್ಯ ಪದ್ರೇಶವೇ ಇದೆ ಅನ್ನೋದು ಸಂತೋಷದ ಸಂಗತಿಯಾದ್ರೆ ಮತ್ತೊಂದು ಕಡೆ ಕಾಡಂಚಿನ ಗ್ರಾಮಗಳಲ್ಲಿ ರೈತರು ಬೆಳೆದ ಫಸಲು ಮಾತ್ರ ರೈತನಿಗೆ ಸಿಗೋದಿಲ್ಲ ಅನ್ನೋದು ನೋವಿನ ಸಂಗತಿ. ಅಂದಹಾಗೆ ಇಂಥ ಪರಿಸ್ಥಿತಿ ಇರೋದು ಚಾಮರಾಜನಗರದ ಬಂಡಿಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಗೆ ಬರುವ ಕಾಡಂಚಿನ ಗ್ರಾಮಗಳಾದ ಅರಕಲವಾಡಿ, ಯಾನಗುಂಬ, ಯರಗನಹಳ್ಳಿ, ಕುಂದುಕೆರೆ, ಬಾಚಹಳ್ಳಿ ಮಂಗಲ ಸೇರಿದಂತೆ ಹಲವಾರು ಗ್ರಾಮಗಳಲ್ಲಿ. ಈ ಬಾರಿ ಉತ್ತಮ ಮಳೆ ಏನೋ ಆಗಿದೆ ಬಿತ್ತಿದ ಬೆಳೆಗಳು ಕೂಡ ಉತ್ತಮವಾಗಿಯೇ ಇದೆ. ಆದ್ರೆ, ಕಾಡು ಪ್ರಾಣಿಗಳಾದ ಜಿಂಕೆ, ಕಡವೆ, ಆನೆ, ಹಂದಿ ಮುಂತಾದ ಪ್ರಾಣಿಗಳು ಫಸಲಿಗೆ ರಾತ್ರೋ ರಾತ್ರಿ ಲಗ್ಗೆ ಇಟ್ಟು ಲೂಟಿ ಮಾಡಿ ಹೋಗುತ್ತವೆ.

20.ದಾವಣಗೆರೆ ಜಿಲ್ಲೆಯ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಇದೀಗ ಮತ್ತೋಂದು ಹೋರಾಟಕ್ಕೆ ಮುಂದಾಗಿದ್ದಾರೆ.ಹೊನ್ನಾಳಿ ತಾಲೂಕಿನಲ್ಲಿ ಸಾಮಾನ್ಯ ಜನಕ್ಕೆ ಮುಕ್ತವಾಗಿ ಮರಳು ಸಿಗ್ತಿಲ್ಲವೆಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಕಳೆದ ಸೋಮವಾರ ತುಂಗಭದ್ರಾ ನದಿಗೆ ಇಳಿದು ಮರಳು ಎತ್ತುವ ಮೂಲಕ ಜಿಲ್ಲಾಡಳಿತಕ್ಕೆ ಸವಾಲು ಹಾಕಿದ್ರು.ಎರಡನೇ ಹಂತವಾಗಿ ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ಮತ್ತೊಮ್ಮೆ ಜಿಲ್ಲಾ ಉಸ್ತುವಾರಿ, ಜಿಲ್ಲಾಡಳಿ ಮತ್ತು ಪೊಲೀಸ್ ಇಲಾಖೆ ವಿರುದ್ಧ ರೇಣುಕಾಚಾರ್ಯ ಗುಡುಗಿದ್ದಾರೆ.

21.ಧಾರವಾಡದ ಹಳೆಯ ಬಸ್ ನಿಲ್ದಾಣದಿಂದ ಗ್ರಾಮೀಣ ಸರಕಾರಿ ಸಾರಿಗೆ ಬಸ್ ಸಂಚಾರಕ್ಕೆ ಪ್ರಾಯೋಗಿಕವಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಶಾಸಕ ಅರವಿಂದ ಬೆಲ್ಲದ ಚಾಲನೆ ನೀಡಿದರು. ಸತತ ಆರು ವರ್ಷದಿಂದ ನಡೆಯುತ್ತಿದ್ದ ಬಸ್ ನಿಲ್ಧಾಣ ಕಾಮಗಾರಿ ಇನ್ನೂ ಸ್ವಲ್ಪ ಪ್ರಮಾಣದ ಕಾಮಗಾರಿ ಬಾಕಿ ಇರುವುದರಿಂದ ಪ್ರಾಯೋಗಿಕವಾಗಿ ಕೊನೆಗೂ ಹಳೇಯ ಬಸ್ ನಿಲ್ಧಾಣ ಉದ್ಘಾಟನೆ ಭಾಗ್ಯ ಕಂಡಿದೆ. ೨೦೧೪ರಲ್ಲಿ ಹಳೇ ಬಸ್ ನಿಲ್ದಾಣ ಕಾಮಗಾರಿ ಪ್ರಾರಂಭವಾಗಿತ್ತು. ೧೭.೯ ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಹಳೆಯ ಬಸ್ ನಿಲ್ಧಾಣ ಸಿದ್ದಗೊಂಡಿದೆ.

22.ಡಾ. ಎಂ.ಎಂ.ಕಲ್ಬುರ್ಗಿ ಹತ್ತೆಯಾಗಿ ಎರಡು ವರ್ಷಕ್ಕೂ ಹೆಚ್ಚು ದಿನ ಕಳೆದಿದೆ. ಆದರೆ ಇಲ್ಲಿಯವರೆಗೆ ಹಂತಕರ ಪತ್ತೆಯಾಗಿಲ್ಲ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ‌ ನೀಡಲು ತಯಾರಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ‌ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಸಮಾಧಾನ ಹೊರ ಹಾಕಿದ್ದಾರೆ. ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.ಕಲ್ಬುರ್ಗಿ ಅವರ ಹತ್ಯೆ ಪ್ರಕರಣೆ ಕುರಿತು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದ್ದಲ್ಲದೇ, ಒಂದು ವಾರದೊಳಗೆ ಪ್ರಕರಣದ ವರದಿಯನ್ನು ನೀಡಲು ಹೇಳಿದೆ.

23.ಧಾರವಾಡ ಜಿಲ್ಲಾಡಳಿತಕ್ಕೆ ಅದರಲ್ಲೂ ಕೃಷಿ ತೋಟಗಾರಿಕೆ ಇಲಾಖೆಗೆ ಹೇಳಿ ಮಾಡಿಸಿದಂತಿದೆ. ಹೌದು. ರೈತರು ಅತಿವೃಷ್ಠಿ, ಅನಾವೃಷ್ಠಿಯಿಂದ ತೊಂದರೆಗೆ ಒಳಗಾದಾಗ ಬೆಳೆವಿಮೆ ರೈತರನ್ನು ಬದುಕಿಸಲು ಸಹಾಯಕ್ಕೆ ಬರುತ್ತದೆ. ಈ ಉದ್ದೇಶದಿಂದ ಸರ್ಕಾರವೇ ಈ ಕೆಲಸ ಮಾಡಿದೆ. ಆದರೆ ಹೊಸ ತಾಲೂಕು ರಚನೆ ವೇಳೆ ಅಧಿಕಾರಿಗಳು ಮಾಡಿದ ಪ್ರಮಾದದಿಂದ ಧಾರವಾಡ ಜಿಲ್ಲೆಯ 10ಕ್ಕೂ ಹೆಚ್ಚು ಗ್ರಾಮ ಪಂಚಾಯತನ ರೈತರು ಸರ್ಕಾರ ಒದಗಿಸುವ ಬೆಳೆ ವಿಮೆ ಸೌಲಭ್ಯದಿಂದ ವಂಚಿತವಾಗುತ್ತಿವೆ.

24.ಸ್ಟೇರಿಂಗ್ ಕಟ್ಟಾಗಿ ಸ್ಕೂಲ್ ಬಸ್ ಪಲ್ಟಿಯಾಗಿರುವಂತಹ ಘಟನೆ ಗದಗ ತಾಲೂಕಿನ ಕಲ್ಲೂರ ಗ್ರಾಮದ ಬಳಿ ನಡೆದಿದೆ. ಗದಗ ತಾಲೂಕಿನ ಹೊಸಳ್ಳಿ ಬೂದೀಶ್ವರ ವಿದ್ಯಾಪೀಠಕ್ಕೆ ಸೇರಿದ ಶಾಲಾ ಬಸ್ ಇದಾಗಿದೆ. ಪ್ರತಿದಿನ ಕಲ್ಲೂರು, ಚಿಂಚಲಿ, ಅಂತೂರ-ಬೆಂತೂರ ಸೇರಿದಂತೆ ಅನೇಕ ಗ್ರಾಮಗಳ ಮಕ್ಕಳನ್ನ ಶಾಲೆಗೆ ಕರೆದುಕೊಂಡು ಹೊಗುತ್ತಿತ್ತು. ಸ್ಟೀರಿಂಗ್ ಕಟ್ ಆದ ಪರಿಣಾಮ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಪಕ್ಕ ಉರುಳಿದೆ. ಬಸ್ ನಲ್ಲಿದ್ದ ೧೨ ಜನ ವಿದ್ಯಾರ್ಥಿಗಳು ಕ್ಷಣಾರ್ಧದಲ್ಲಿ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.

25.ಕಲಬುರಗಿಯಲ್ಲಿಂದು ಸಂಸತ್ತಿನ ಲೆಕ್ಕಪತ್ರ ಪರಿಶೋಧನ ಸಮಿತಿ ಸಭೆ ನಡೆಯಲಿದೆ..ಲೋಕಸಭೆ ಕೈ ನಾಯಕ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾಗಿರೋ ಈ ಸಮಿತಿ ಸಭೆ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ನಡೆಯಲಿದೆ.. ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಕಚೇರಿಯಲ್ಲಿ ಎರಡು ದಿನ ಸಭೆ ನಡೆಯಲಿದ್ದು ಸಮಿತಿ ಸದಸ್ಯರಾಗಿರೋ 14 ಸಂಸದರು ಸಭೆಯಲ್ಲಿ ಭಾಗಿಯಾಗಲಿದ್ದಾರೆ.

26.ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಆಮದಳ್ಳಿ ಗ್ರಾಮದಲ್ಲಿ. ಅಷ್ಟಕ್ಕೂ ಇಲ್ಲಿನ ಜನರ ಆತಂಕ್ಕೆ ಕಾರಣ ಅವೈಜ್ಞಾನಿಕ ಸ್ಪೋಟ. ಹೌದು ಗ್ರಾಮದ ಸಮೀಪದ ಮುದಗಾ ಎನ್ನುವ ಗುಡ್ಡದಲ್ಲಿ ರಸ್ತೆ ಅಗಲೀಕರಣ ಕಾರ್ಯ ನಡೆಯುತ್ತಿದೆ. ಇನ್ನು ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣವನ್ನ ಮಾಡುತ್ತಿದ್ದು ಕಳೆದ ಮೂರ್ನಾಲ್ಕು ದಿನಗಳಿಂದ ಬೃಹತ್ ಪ್ರಮಾಣದಲ್ಲಿ ಸ್ಪೋಟವನ್ನ ಮಾಡಿ ಅಗಲೀಕರಣ ಕಾರ್ಯ ಮಾಡಲಾಗುತ್ತಿದೆ. ಇನ್ನು ದೊಡ್ಡ ಪ್ರಮಾಣದಲ್ಲಿ ಸ್ಪೋಟ ಮಾಡಿರುವುದರಿಂದ ಗ್ರಾಮದಲ್ಲಿನ ಹಲವು ಮನೆಗಳಿಗೆ ಹಾನಿಯಾಗಿದೆ. ಮನೆಗಳ ಗೋಡೆಗಳು ಸ್ಪೋಟದಿಂದ ಬಿರುಕು ಬಿಟ್ಟಿದ್ದು ಇನ್ನು ಕೆಲವೆಡೆ ಹಂಚುಗಳು ಉದುರಿ ಬಿದ್ದಿದೆ.

27.ಕುಡಿಯುವ ನೀರನ್ನು ಪೂರೈಸುವಂತೆ ಆಗ್ರಹಿಸಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೆಲೆಕೇರಿ ಗ್ರಾಮಸ್ಥರು ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ರು. ಬೆಲೆಕೇರಿಯ ಸೀಬರ್ಡ್ ನಿರಾಶ್ರಿತ ಕೇಂದ್ರದಲ್ಲಿ ಕಳೆದ ಎರಡು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಆದ್ರೆ ಈ ಬಗ್ಗೆ ಹಲವಾರು ಬಾರಿ ಸ್ಥಳೀಯ ಗ್ರಾಮ ಪಂಚಾಯತ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಇನ್ನೂ ನಿರ್ಲಕ್ಷ್ಯ ದೋರಣೆ ತೋರುತ್ತಿದ್ದಾರೆ. ಅಲ್ಲದೆ ತಹಸೀಲ್ದಾರ ಗಮನಕ್ಕೂ ತರಲಾಗಿತ್ತು ಯಾವುದೇ ಪ್ರಯೋಜನವಾಗಿಲ್ಲಾ ಅಂತಾ ಆಕ್ರೋಷ ವ್ಯಕ್ತಪಡಿಸಿದ್ರು. ಇನ್ನಾದ್ರೂ ಆದಷ್ಟು ಬೇಗ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಿದರು.

28.ಹಾವೊಂದು 108 ಅಂಬ್ಯುಲೆನ್ಸ್ ಒಳಗೆ ಹೊಕ್ಕಿ ಆತಂಕ ಸೃಷ್ಟಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದಲ್ಲಿ ನಡೆದಿದೆ. ನಗರದ ಟ್ರಾಫಿಕ್ ಪೊಲೀಸ್ ಠಾಣೆಯ ಬಳಿ ನಿಲ್ಲಿಸಿದ್ದ 108 ವಾಹನದಲ್ಲಿ ಹಾವೊಂದು ಸೇರಿಕೊಂಡಿರುವುದನ್ನ ಸ್ಥಳೀಯರು ಗಮನಿಸಿದ್ದಾರೆ. ಹಾವು ವಾಹನದಲ್ಲಿ ಸೇರಿಕೊಂಡಿದೆ ಎನ್ನುವ ವಿಷಯ ತಿಳಿದು ವಾಹನದಲ್ಲಿದ್ದ ಸಿಬ್ಬಂದಿಗಳು ಆತಂಕಕ್ಕೆ ಒಳಗಾಗಿದ್ದರು. ಇನ್ನು ಸ್ಥಳಕ್ಕೆ ಉರಗ ಪ್ರೇಮಿ ಮಹೇಶ್ ನಾಯ್ಕ್ ಆಗಮಿಸಿ ಹಾವನ್ನ ಹುಡುಕಾಡಿದರು ಸಿಕ್ಕಿಲ್ಲ.

29.ಮಂಗಳೂರಿನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣ ಮತ್ತೊಮ್ಮೆ ನಿರ್ಭಾಯ ಪ್ರಕರಣವನ್ನು ಮರುಕಳಿಸುವಂತೆ ಮಾಡಿದೆ. ಒಂದು ವಾರದ ಹಿಂದೆ ನಡೆದ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಪ್ರಕರಣ ಮಂಗಳೂರಿನ ಬೆಂಗ್ರೆಯಲ್ಲಿ ನಡೆದಿದ್ದು ಪೊಲೀಸರು ೬ ಮಂದಿಯನ್ನು ಬಂಧಿಸಿದ್ದಾರೆ.

30. ನೇಣುಬಿಗಿದುಕೊಂಡು ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಸಿಡಿಲು ಮಲ್ಲಿಕಾರ್ಜುನ ಬೆಟ್ಟದಲ್ಲಿ ನಡೆದಿದೆ. ವೀರಭದ್ರನ ಗುಡಿ ಸಮೀಪದ ಮರವೊಂದಕ್ಕೆ ನೇಣುಬಿಗಿದುಕೊಂಡು ವೀಣಾ ಹಾಗೂ ಕೆ.ಎನ್.ಸ್ವಾಮಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನೂ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದನ್ನ ವಾಕಿಂಗ್ ಹೋಗುವ ವೇಳೆ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಕಣ್ಣಿಗೆ ಬಿದ್ದಿದೆ.

31.ನಮ್ಮ ಕಾರ್ಯಕ್ರಮಕ್ಕೆ ಬನ್ನಿ ಎಂದು ಕೈ ಕಾರ್ಯಕರ್ತರೇ ಶಾಸಕ ಡಾ.ಯತೀಂದ್ರ ಕಾರಿಗೆ ಮುತ್ತಿಗೆ‌ ಹಾಕಿ ಆಕ್ರೋಶ ಹೊರ ಹಾಕಿರುವ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಹುಣಸೂರು ಗ್ರಾಮದಲ್ಲಿ ನಡೆದಿದೆ. ಒಂದೇ ದಿನ ಎರಡು ಕಡೆ ಕಾಂಗ್ರೆಸ್‌ ಸೇರ್ಪಡೆ ಹಾಗೂ ಸನ್ಮಾನ ಕಾರ್ಯಕ್ರಮವನ್ನ ಗ್ರಾಮಸ್ಥರು ಆಯೋಜಿಸಿದ್ರು. ಆದರೆ ಕಿರಸಗೂರು ಗ್ರಾಮದ ಕಾರ್ಯಕ್ರಮದಲ್ಲಿ ಭಾಗಿಯಾದ ಯತೀಂದ್ರ ಇದೇ ತಾಲೂಕಿನ ಹುಣಸೂರು ಗ್ರಾಮಕ್ಕೆ ಹೋಗದೆ ವಾಪಾಸ್ ಆಗಿದ್ದಾರೆ.

32.ಶ್ರೀಲಂಕಾದ ಮಾಜಿ ಕ್ರಿಕೆಟಿಗೆ ಸನತ್ ಜಯಸೂರ್ಯ ಬೇನಾಮಿ ಕಂಪನಿ ತೆರೆದು ಆ ಕಂಪನಿಯ ಮೂಲಕ ಮಲೇಷ್ಯಾದಿಂದ ಅಡಕೆ ಖರೀದಿಸಿ ಆ ಅಡಕೆಯನ್ನು ಭಾರತಕ್ಕೆ ರಫ್ತು ಮಾಡಿ ಕೋಟ್ಯಂತರ ರೂಪಾಯಿ ಆಮದು ಸುಂಕ ನಷ್ಟ ಮಾಡಿರುವ ಬಗ್ಗೆ ದೂರು ದಾಖಲಾಗಿರುವ ಬೆನ್ನ ಹಿಂದೆಯೇ ಅದೇ ಮಾದರಿಯ ಅವ್ಯವಹಾರ ಶಿವಮೊಗ್ಗದಲ್ಲೂ ನಡೆದಿದ್ದು, ಜಯಸೂರ್ಯ ಕಂಪನಿಗೂ ಶಿವಮೊಗ್ಗಕ್ಕೂ ಲಿಂಕ್ ಇರಬಹುದೇ ಎಂಬ ಅನುಮಾನಗಳು ಆರಂಭಗೊಂಡಿವೆ.

33.ಹೆತ್ತ ತಂದೆ ತಾಯಿಯನ್ನೇ ಪಾಪಿ ಮಗನೋರ್ವ ಮನೆಯಿಂದ ಹೊರಹಾಕಿರೋ ಕರುಣಾಜನಕ ಘಟನೆಯೊಂದು ತುಮಕೂರಿನಲ್ಲಿ ನಡೆದಿದೆ. ತುಮಕೂರು ತಾಲ್ಲೂಕಿನ ಲಕ್ಕೇನಹಳ್ಳಿಯ ರಿಯಲ್ ಎಸ್ಟೇಟ್ ಉದ್ಯಮಿಯಾದ ನರಸಿಂಹಮೂರ್ತಿ ಎಂಬಾತ ತನ್ನ ವೃದ್ದ ತಂದೆ ವೆಂಕಟಪ್ಪ ಹಾಗೂ ತಾಯಿ ಗಂಗಮ್ಮನನ್ನ ದಿನನಿತ್ಯ ಹಿಂಸಿಸಿ ಮನೆಯಿಂದ ಹೊರದಬ್ಬಿದ್ದಾನೆ..ಬೀದಿಗೆ ಬಂದ ಹೆತ್ತವರು ಸೂರಿಲ್ಲದೇ ರಸ್ತೆಯಲ್ಲೇ ಕಾಲಕಳೆಯುವಂತಾಗದೆ

34.ಕುಂದಾನಗರಿಯಲ್ಲಿ ಹಾಡುಹಗಲೇ ಐದು ವರ್ಷದ ಮಗು ಕಿಡ್ನಾಪ್ ಆದ ಪ್ರಕರಣ ಸುಖಾಂತ್ಯವಾಗಿದೆ.ಮೂರು ದಿನಗಳ ಬಳಿಕ ಮಿಸ್ಸಿಂಗ್ ಆಗಿದ್ದ ನಾನಪ್ಪ ತಾಯಿ ಮಡಿಲು ಸೇರಿದ್ದಾನೆ.ಮಕ್ಕಳಿಲ್ಲಾ ಎಂಬ ಕಾರಣಕ್ಕೆ ಕೆ.ಎಸ.ಆರ.ಟಿ.ಸಿ ಡ್ರೈವರ್ ಮಗುವನ್ನ ಕಿಡ್ನಾಪ್ ಮಾಡಿದನೋ. ಮಳುತ್ತಾ ನಿಂತ ಮಗುವನ್ನ ಮನೆಗೆ ಕರೆದುಕೊಂಡು ಹೋದನು ಎಂಬುದು ಪೊಲೀಸ್ ತನಿಖೆಯಿಂದ ಗೊತ್ತಾಗಬೇಕಿದೆ.

35.ಬಳ್ಳಾರಿಯಲ್ಲಿ ಕಾಂಗ್ರೆಸ್ಗೆ ಶುರುವಾಗಿದೆ ಹೊಸ ತಲೆನೋವು.ಉಗ್ರಪ್ಪರಿಂದ ತೆರವಾದ MLC ಸ್ಥಾನಕ್ಕೆ ಲಾಬಿ ಆರಂಭಗೊಂಡಿದೆ.ಯಾರಿಗೆ ಟಿಕೆಟ್ ನೀಡಬೇಕು.ಅನ್ನೋ ಗೊಂದಲದಲ್ಲಿ ಕೈ ಹೈಕಮಾಂಡಿದೆ.ಗಣಿ ಜಿಲ್ಲೆಯಲ್ಲಿ ಟಿಕೆಟ್ ಲಾಭಿ ಮಾತ್ರ ಜೋರಾಗಿದೆ

36.ಕಲಬುರಗಿಯಲ್ಲಿಂದು ಸಂಸತ್ತಿನ ಲೆಕ್ಕಪತ್ರ ಪರಿಶೋಧನ ಸಮಿತಿ ಸಭೆ ನಡೆಯಲಿದೆ.ಲೋಕಸಭೆ ಕೈ ನಾಯಕ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾಗಿರೋ ಈ ಸಮಿತಿ ಸಭೆ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ನಡೆಯಲಿದೆ.

37.ಅಮೂಲ್ಯವಾದ ಬಹು ಮೌಲ್ಯದ ಸರ್ಕಾರಿ ಕೆರೆಯ ಜಾಗ. ಅದು ಕಂಡವರ ಪಾಲಾಗಿದೆ. ಒತ್ತುವರಿ ತೆರವುಗೊಳಿಸಿ ಕ್ರೀಡಾಂಗಣ ನಿರ್ಮಿಸಬೇಕು ಅಂತಾ ಸ್ವತಃ ಸುಪ್ರೀಂ ಕೋರ್ಟ್ ಕೂಡಾ ಆದೇಶ ಮಾಡಿದೆ. ಆದ್ರೆ, ಮಹಾನಗರ ಪಾಲಿಕೆ ಕೋರ್ಟ್ ಆದೇಶಕ್ಕೂ ಕ್ಯಾರೆ ಎನ್ನದೇ ಕೆರೆ ಜಾಗದಲ್ಲೇ ಗೋಲ್ ಮಾಲ್ ಮಾಡಿದೆ.

38.ಹಾಸನ ಜಿಲ್ಲೆ ಯಾವುದಕ್ಕೆ ಫೇಮಸ್ ಇಲ್ಲ ಹೇಳಿ, ಪ್ರಧಾನಿ,ಮುಖ್ಯಮಂತ್ರಿ, ಎಲ್ಲವನ್ನು ಕೊಟ್ಟಂತ ಹೆಗ್ಗಳಿಕೆ, ಅದರೇ ಇನ್ನೂ ರಾಜ್ಯವೇ ಸಿಹಿ ಹಂಚಿ ತಿನ್ನುವ ಸುದ್ದಿ ಈ ಗ್ರಾಮದಿಂದ ಸಿಕ್ಕಿದೆ...ಅದರೇ ಆ ಗ್ರಾಮದವರಿಗೆ ಕಹಿ ಅನುಭವವಂತೆ, ಎಲ್ಲಿ ನಮ್ಮ ಭೂಮಿ ಮನೆ ಮಠ ಎಲ್ಲವನ್ನು ಎಲ್ಲಿ ಕಳೆದುಕೊಂಡು ಬಿಡುತ್ತೆವೂ ಎಂಭ ಭಯ ಕಾಡುತ್ತಿದೆ.

39.ಅದ್ಯಾಕೋ ಏನೂ ಗಡಿನಾಡಿನ ಆ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಇನ್ನು ಗ್ರಹಣ ಬಿಟ್ಟಿಲ್ಲಾ ಅನ್ಸುತ್ತೆ. ಅಳಿವಿನ ಅಂಚಿನಲ್ಲಿದ್ದ ಆ ಸಕ್ಕರೆ ಕಾರ್ಖಾನೆಗೆ ಸರ್ಕಾರ 20 ಕೋಟಿ ಗ್ರ್ಯಾಂಟ್ ಘೋಷಿಸಿದ್ರು. ಇನ್ನು ಘೊಷಣೆಯಾಗಿಯೇ ಉಳಿದಿದೆ.ಮತ್ತೊಂದು ಕಡೆ ಕಾರ್ಖಾನೆಯನ್ನ ಸೂಪರ್ ಸೀಡ್ ಮಾಡಿದ್ದನ್ನು ಹೈಕೋರ್ಟ್ ತಡೆಹಿಡಿದಿದೆ.

40.ಜೋಡಿ ಸರಿಯಾಗಿಲ್ಲ, ಹುಡುಗಿ ಹುಡುಗನಿಗಿಂತ ಎತ್ತರ ಇದ್ದಾಳೆ, ಹುಡುಗಿಯ ವಯಸ್ಸು ಜಾಸ್ತಿ ಎಂಬ ಕಾರಣವನ್ನ ಮುಂದಿಟ್ಟುಕೊಂಡು ಪ್ರೀತಿಸಿ ಮದುವೆಯಾದ ಜೋಡಿಗೆ ಪೋಷಕರೇ ಕಿರುಕುಳ ನೀಡುತ್ತಿರುವ ಬಗ್ಗೆ ಆರೋಪ ಕೇಳಿಬಂದಿದೆ.

41.ಡಾ. ಎಂ.ಎಂ.ಕಲ್ಬುರ್ಗಿ ಹತ್ತೆಯಾಗಿ ಎರಡು ವರ್ಷಕ್ಕೂ ಹೆಚ್ಚು ದಿನ ಕಳೆದಿದೆ. ಆದರೆ ಇಲ್ಲಿಯವರೆಗೆ ಹಂತಕರ ಪತ್ತೆಯಾಗಿಲ್ಲ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ನೀಡಲು ತಯಾರಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಸಮಾಧಾನ ಹೊರ ಹಾಕಿದ್ದಾರೆ.

42.ಕುಡಿಯುವ ನೀರನ್ನು ಪೂರೈಸುವಂತೆ ಆಗ್ರಹಿಸಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೆಲೆಕೇರಿ ಗ್ರಾಮಸ್ಥರು ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

43. ನ್ಯಾಯವಾಗಿ ದುಡಿಯುವ ಮನಸ್ಸು ಮಾಡಿದ ಟಿಪ್ಪರ್ ಮಾಲಿಕರಿಗೆ ಪೊಲೀಸರ ಕಾಟಮಾತ್ರ ತಪ್ಪಿಲ್ಲ. ನ್ಯಾಯವಾಗಿ ರಾಜಧನ(ರಾಯಲ್ಟಿ) ಕಟ್ಟಿ ಒಂದು ಟ್ರಿಪ್ ಮರಳು ಹೊಡಯಲು ಪೊಲೀಸರೆ ಬಿಡುತ್ತಿಲ್ಲ. ನೀವು ಅಕ್ರಮ ಆದ್ರು ಮಾಡಿ, ರಾಯಲ್ಟಿ ಆದ್ರು ಕಟ್ಟಿ ಮರಳು ತೆಗೆದುಕೊಂಡು ಹೋಗಿ, ಆದ್ರೆ ನಮಗೆ ಮಾತ್ರ ಒಂದು ಟಿಪ್ಪರ್​​ಗೆ ಇಂತಿಷ್ಟು ಅಂತ ಮಾಮೂಲಿ ಕೊಡಲೇಬೇಕು ಅಂತ ಪೊಲೀಸರು ಕಿರುಕುಳ ನೀಡುತ್ತಿದ್ದಾರಂತೆ.

44.ಪೊಡವಿಗೊಡೆಯ ಅಲಂಕಾರ ಪ್ರಿಯ ಉಡುಪಿಯ ಶ್ರೀ ಕೃಷ್ಣನಿಗೆ ಇನ್ನೊಂದು ವೈಭವದ ಸೇವೆ ಸಮರ್ಪಣೆಯಾಗಲಿದೆ. ಸುಮಾರು ೩೨ ಕೋಟಿ ವೆಚ್ಚದಲ್ಲಿ ಕೃಷ್ಣನ ಗರ್ಭಗುಡಿಗೆ ಚಿನ್ನದ ಹೊದಿಕೆ ಹಾಸಲಾಗುತ್ತದೆ. ಈ ಸೇವೆಯಲ್ಲಿ ದೇಶ ವಿದೇಶದ ಸಾವಿರಾರು ಭಕ್ತರು ಭಾಗಿಯಾಗಿದ್ದಾರೆ.

45.ಹೆತ್ತ ತಂದೆ ತಾಯಿಯನ್ನೇ ಪಾಪಿ ಮಗನೋರ್ವ ಮನೆಯಿಂದ ಹೊರಹಾಕಿರೋ ಕರುಣಾಜನಕ ಘಟನೆಯೊಂದು ತುಮಕೂರಿನಲ್ಲಿ ನಡೆದಿದೆ.

46.ಸ್ಟೇರಿಂಗ್ ಕಟ್ಟಾಗಿ ಸ್ಕೂಲ್ ಬಸ್ ಪಲ್ಟಿಯಾಗಿರುವಂತಹ ಘಟನೆ ಗದಗ ತಾಲೂಕಿನ ಕಲ್ಲೂರ ಗ್ರಾಮದ ಬಳಿ ನಡೆದಿದೆ. ಗದಗ ತಾಲೂಕಿನ ಹೊಸಳ್ಳಿ ಬೂದೀಶ್ವರ ವಿದ್ಯಾಪೀಠಕ್ಕೆ ಸೇರಿದ ಶಾಲಾ ಬಸ್ ಇದಾಗಿದೆ.

47.ಬೆಂಗಳೂರಿನಿಂದ ಹೈದರಾಬಾದಿಗೆ ರಾಷ್ಟ್ರೀಯ ಹೆದ್ದಾರಿ ಏಳರಲ್ಲಿ ಪ್ರಯಾಣ ಬೆಳೆಸಿದ್ರೆ ರಾಜಧಾನಿಯಿಂದ ಅರ್ಧ ಗಂಟೆ ಜರ್ನಿ ಮಾಡ್ತಿದ್ದಂಗೆ ನಮ್ಮ ಬಲಭಾಗದಲ್ಲಿ ಕಾಣಿಸುವ ಸುಂದರ ಕೋಟೆ ಇದು. ಸುಮಾರು 1501 ರಲ್ಲಿ ಪಾಳೇಗಾರರು ತಮ್ಮ ಆಡಳಿತಾವಧಿಯಲ್ಲಿ ರಕ್ಷಣೆಗಾಗಿ ನಿರ್ಮಿಸಿಕೊಂಡ ಸುಂದರ ಕೋಟೆ ಇದು. ತದನಂತರ 1729 ರಲ್ಲಿ ಹೈದರಾಲಿ ಹಿಡಿತಕ್ಕೆ ಬಂದ ಈ ಕೋಟೆಯನ್ನು ಮತ್ತಷ್ಟು ದುರಸ್ತಿಗೊಳಿಸಿ ರಕ್ಷಣಾತ್ಮಕವಾಗಿ ಮತ್ತಷ್ಟು ಭದ್ರಪಡಿಸಿದ ಕೀರ್ತಿ ಸಲ್ಲುತ್ತೆ. ಆದ್ರೆ ಇಂತಹ ಹಳೆಯ ಕೋಟೆಯ ಸ್ಥಿತಿ ಈಗ ಅವನತಿಯತ್ತ ಸಾಗಿದೆ.

48.ಬೆಂಗಳೂರು ಹೊರವಲಯ ಆವಲಹಳ್ಳಿಯ ಕಮಲ ಎಂಬುವರು ನಾಲ್ಕು ವರ್ಷಗಳಿಂದ ಸಾಕಿಕೊಂಡಿದ್ದರು. ಇತ್ತೀಚೆಗೆ ಕೆಲ ಕಿಡಿಗೇಡಿಗಳು ಈ ಶ್ವಾನವನ್ನು ಕಬ್ಬಿಣದ ಸಲಾಕೆಯಿಂದ ಹೊಡೆದು ಗಾಯಗೊಳಿಸಿದ್ದರಿಂದ ಅನಾರೋಗ್ಯಕ್ಕೊಳಗಾಗಿ ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿದೆ. ಕಮಲ ರವರಿಗೆ ಇಬ್ಬರು ಗಂಡು ಮಕ್ಕಳಿದ್ದು ಹೆಣ್ಣು ಮಕ್ಕಳಿರದಿದ್ದರಿಂದ ಜಾನು ನನ್ನು ತನ್ನ ಮಗಳಂತೆ ಪ್ರೀತಿಯಿಂದ ಸಾಕಿದ್ದರು, ಕೆ.ಆರ್.ಪುರ ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುವ ಇವರು ಮನೆಯಲ್ಲಿನ ಪ್ರತಿಯೊಂದು ಕೆಲಸದಲ್ಲು ಜೊತೆಯಾಗಿರುತ್ತಿದ್ದ ಈ ಜಾನು ಉಳಿದ ಸಮಯದಲ್ಲಿ ಕಮಲ ರವರ ಇಬ್ಬರು ಮಕ್ಕಳು ಹಾಗೂ ಮನೆಯಲ್ಲಿದ್ದ ಎರಡು ಬೆಕ್ಕುಗಳ ಜೊತೆ ಆಟವಾಡಿಕೊಂಡು ಕಾಲ ಕಳೆಯುತ್ತಿತ್ತು, ಯಾರೋ ಕಿಡಿಗೇಡಿಗಳು ಮಾಡಿರುವ ಕೃತ್ಯದಿಂದ ಈ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.

49.ಮುಸುಕುದಾರಿ ಕಳ್ಳರ ಗುಂಪೊಂದು ಖಾಸಗಿ ಶಾಲೆಯಲ್ಲಿ ಕಳ್ಳತನ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನಲ್ಲಿ ನಡೆದಿದೆ.ಹೊಸಕೋಟೆ ತಾಲೂಕಿನ ತಿಮ್ಮಸಂದ್ರ ಗ್ರಾಮದ ಸನ್ ವ್ಯಾಲಿ ಶಾಲೆಯ ಅಪೀಸ್ ರೂಮ್ ನ ಬೀರು ಬೀಗ ಹೊಡೆದಿರುವ ಖದೀಮರು ಬೀರುವಿನಲ್ಲಿದ್ದ 28 ಸಾವಿರ ನಗದು ಹಾಗೂ 16 ಸಾವಿರ ಬೆಳೆಬಾಳುವ ಡಿವಿಆರ್ ಕಳವು ಮಾಡಿ ಎಸ್ಕೇಪ್ ಆಗಿದ್ದಾರೆ. ಕಳ್ಳರ ಕೈಚಳಕ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಸಂಬಂದ ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

50.ಸಾಲಮನ್ನಾ ಯೋಜನೆ ಜಾರಿಗೆ ಸರ್ಕಾರ ಎಲ್ಲ ಸಿದ್ಧತೆಗಳನ್ನೂ ಪೂರ್ಣಗೊಳಿಸಿದೆ. ಅನುಷ್ಠಾನದ ಸಂದರ್ಭದಲ್ಲಿ ಮಧ್ಯವರ್ತಿಗಳು ಈ ಹಣವನ್ನು ದುರುಪಯೋಗ ಪಡಿಸಿಕೊಳ್ಳದಂತೆ ಎಚ್ಚರ ವಹಿಸಿ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಮ್ಮೇಳನದಲ್ಲಿ ಈ ಸೂಚನೆ ನೀಡಿದರು.

Next Story

RELATED STORIES