ಹೆಚ್ಚು ಟಿವಿ ನೋಡುವುದರಿಂದ ಆಯಸ್ಸು ಕಡಿಮೆಯಾಗುತ್ತಂತೆ..!?

ದಿನಕ್ಕೆ 2ಗಂಟೆ 12ನಿಮಿಷಕ್ಕಿಂತ ಹೆಚ್ಚು ಗಂಟೆ ಟಿವಿ ನೋಡುವವರ ಆಯಸ್ಸು ಕಡಿಮೆಯಾಗುತ್ತದೆ ಎಂದು ವರದಿಯೊಂದು ಸಾಬೀತುಪಡಿಸಿದೆ.

ಪ್ರತಿದಿನ ಮೂರು ಗಂಟೆಗಳ ಕಾಲ ಟಿವಿ ನೋಡುವುದು ಆರೋಗ್ಯಕ್ಕೆ ಹೆಚ್ಚು ಅಪಾಯಕಾರಿ ಎನ್ನಲಾಗಿದೆ. ಲ್ಯಾನ್ಸೆಟ್ ಪಬ್ಲಿಕ್ ಹೆಲ್ತ್ ಜರ್ನಲ್‌ ನಡೆಸಿದ ಅಧ್ಯಯನದ ಪ್ರಕಾರ, ಟಿವಿ ಮುಂದೆ ಕೂತು ಧೂಮಪಾನ, ಮದ್ಯಪಾನ ಮಾಡುವುದು ಮತ್ತು ಜಂಕ್ ಫುಡ್‌ಗಳನ್ನ ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾ ಹಾನಿಕಾರಕ ಎನ್ನಲಾಗಿದೆ. ಅಲ್ಲದೇ ಈ ಕಾರಣದಿಂದ ಹೃದ್ರೋಗ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.

ಅಲ್ಲದೇ 7ಗಂಟೆಗಿಂತ ಕಡಿಮೆ ಮತ್ತು 9ಗಂಟೆಗಿಂತ ಹೆಚ್ಚು ನಿದ್ದೆ ಮಾಡುವುದರಿಂದಲೂ ಆಯಸ್ಸು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಸಾಬೀತಾಗಿದೆ.