Top

ಪತಿಗೆ ಕಣ್ಣೀರಿನಲ್ಲೇ ವಿದಾಯ ಹೇಳಿದ ಸುಮಲತಾ ಅಂಬರೀಶ್

ಪತಿಗೆ ಕಣ್ಣೀರಿನಲ್ಲೇ ವಿದಾಯ ಹೇಳಿದ ಸುಮಲತಾ ಅಂಬರೀಶ್
X

27 ವರ್ಷಗಳ ಕಾಲ ಜೊತೆಯಾಗಿ ಸಂಸಾರ ನಡೆಸಿದ ಅಂಬರೀಶ್ ಪ್ರೀತಿಯ ಮಡದಿ ಸುಮಲತಾರನ್ನು ಬಿಟ್ಟು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.

ಕೈ ಹಿಡಿದ ಪತಿ ಇನ್ನಿಲ್ಲ ಎನ್ನುವ ನೋವು ಸುಮಲತಾ ಅವರನ್ನು ಶೋಕಸಾಗರದಲ್ಲಿ ಮುಳುಗುವಂತೆ ಮಾಡಿದೆ.

ಅಂಬರೀಶ್ ಅಗಲಿಕೆಯ ನೋವಿನಲ್ಲಿರೋ ಸುಮಲತಾ ಕಳೆದ ಮೂರು ದಿನಗಳಿಂದ ಊಟ ಮಾಡಿಲ್ಲ. ನಿದ್ದರೆ ಮಾಡಿಲ್ಲ, ಪತಿಯನ್ನೇ ನೆನೆದು ನೋವು ತಿಂತಿದ್ದಾರೆ. ಪತಿಯ ಪಾರ್ಥಿವ ಶರೀರದ ಮುಂದೆ ಕುಳಿದು ಅಳ್ತಿದ್ದ ದೃಶ್ಯ ಎಲ್ಲರ ಮನಕಲಕುವಂತೆ ಇತ್ತು.

ಕಂಠೀರವ ಕ್ರೀಡಾಂಗಣದಿಂದ ಅಂಬರೀಶ್ ಅಂತಿಮ ಯಾತ್ರೆ ಶುರುವಾಯ್ತು ಚಿರಶಾಂತಿ ವಾಹನದಲ್ಲೇ ಸುಮ, ಮಗ ಅಭಿಷೇಕ ಅಂಬರೀಶ್ ಪಾರ್ಥಿವ ಶರೀರದ ಜೊತೆ ಸಾಗಿದರು. 12 ಕಿಲೋ ಮೀಟರ್ ಸಾಗಿದ ಚಿರಶಾಂತಿ ವಾಹನ ಕಂಠೀರವ ಸ್ಟುಡಿಯೋ ಪ್ರವೇಶಿಸ್ತು. ಕಂಠೀರವ ಸ್ಟುಡಿಯೋಗೆ ಬರ್ತಿದ್ದಂತೆ ಸುಮಲತಾ ಪ್ರಜ್ಞೆ ತಪ್ಪಿ ಬಿದರು.

ಸುಮಲತಾ ಕುಸಿದು ಬೀಳ್ತಿದ್ದಂತೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಹಾಗೂ ನಟ ಯಶ್ ಸೇರಿದಂತೆ ಹಲವು ರಕ್ಷಣೆಗೆ ಧಾವಿಸಿದರು,ತೆಲುಗು ನಟ ಮೋಹನ್ ಬಾಬು ಕುಟುಂಬಸ್ಥರು ದೌಡಾಯಿಸಿ ಸುಮಾಲತ ಅವರಿಗೆ ಆರೈಕೆ ಮಾಡಿದರು.

ಇನ್ನು ಗಣ್ಯಾತಿಗಣ್ಯರು ಅಂಬರೀಶ್​ಗೆ ಗೌರವ ಸಲ್ಲಿಸ್ತಿದರು ಈ ವೇಳೆಯೂ ಸುಮಲತಾ ಮುಖದಲ್ಲಿ ದುಃಖ ಮಡುಗಟ್ಟಿತ್ತು. ಅಂತ್ಯ ಸಂಸ್ಕಾರದ ವಿಧಿ ವಿಧಾನಗಳು ಶುರುವಾಗ್ತಿದ್ದಂತೆ ಕಣ್ಣೀರ ಆಕ್ರಂದನ ಮುಗಿಲು ಮುಟ್ಟಿತ್ತು. ಸಂಬಂಧ ಕಳೆದುಕೊಳ್ಳಲು ಅಂಬರೀಶ್ ಬಾಯಿಗೆ ಅಕ್ಕಿ ಹಾಕಿದ ಸುಮಾ ಪ್ರೀತಿಯ ಪತಿಯನ್ನು ಬಿಗಿದಪ್ಪ ಮುತ್ತಿಟ್ಟರು.

Next Story

RELATED STORIES