Top

ರೆಬಲ್ ಸ್ಟಾರ್ ಅಂಬಿಗೆ ಜಾತಕದಲ್ಲಿ ಕಂಟಕವಿತ್ತಾ?

ರೆಬಲ್ ಸ್ಟಾರ್ ಅಂಬಿಗೆ ಜಾತಕದಲ್ಲಿ ಕಂಟಕವಿತ್ತಾ?
X

ಬೆಂಗಳೂರು: ರೆಬೆಲ್ ಸ್ಟಾರ್ ಅಂಬಿ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ನವರಸ ನಾಯಕ ಜಗ್ಗೇಶ್ ಯಾರಿಗೂ ಗೊತ್ತಿರದ ವಿಚಾರ ಒಂದನ್ನ ಹೇಳಿದ್ದಾರೆ. ಈ ಮೂಲಕ ಅಂಬಿಗೆ ಜಾತಕದಲ್ಲಿ ಕಂಟಕವಿತ್ತೆಂಬ ವಿಚಾರ ಗೊತ್ತಾಗಿದೆ.

ಖ್ಯಾತ ಜ್ಯೋತಿಷಿ ಪ್ರಕಾಶ್ ಮಣ್ಯ ಈ ಮೊದಲೇ ಅಂಬಿಗೆ ಎಚ್ಚರಿಕೆ ನೀಡಿದ್ದು, ಅಂಬಿ ಜಾತಕದಲ್ಲಿ ತೊಂದರೆ ಇದೆ, ಆರೋಗ್ಯದಲ್ಲಿ ವ್ಯತ್ಯಯವಾಗಲಿದೆ. ಹೋಮ ಮಾಡಿಸಬೇಕೆಂದು ಹೇಳಿದ್ದರು.

ಇದೇ ತಿಂಗಳ 12ರಂದು ಅಂಬಿ ಮನೆಯಲ್ಲಿ ಹೋಮ ಕಾರ್ಯ ನಿಗದಿಯಾಗಿತ್ತು. ಆದ್ರೆ ಕೇಂದ್ರ ಸಚಿವ ಅನಂತ್ ಕುಮಾರ್ ನಿಧನ ಹಿನ್ನೆಲೆ , ಹೋಮವನ್ನು ಮುಂದೂಡಲಾಗಿತ್ತು. ಅಂಬಿ ಸ್ವಲ್ಪ ದಿನಗಳ ನಂತರ ಹೋಮ ಮಾಡಿಸೋಣ ಎಂದಿದ್ದರು.

ಆದರೆ ಜ್ಯೋತಿಷಿ ಪ್ರಕಾಶ್ ಮಣ್ಯ ನನ್ನ ಮನಸ್ಸಿಗೆ ಯಾಕೋ ನೆಮ್ಮದಿ ಇಲ್ಲ. ಹೋಮ ಮಾಡಿಸಬೇಕಿತ್ತು ಎಂದು ಜಗ್ಗೇಶ್ ಬಳಿ ಹೇಳಿಕೊಂಡಿದ್ದರಂತೆ. ಆದರೆ ಅಷ್ಟರಲ್ಲೇ ಅಂಬರೀಶ್ ನಮ್ಮನ್ನು ಅಗಲಿದ್ದಾರೆಂದು ನಟ ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

Next Story

RELATED STORIES