Top

ಬಿಹಾರದಲ್ಲಿ ತಲೆ ಎತ್ತಿದ 70 ಅಡಿ ಎತ್ತರದ ಬುದ್ಧ ಪ್ರತಿಮೆ

ಬಿಹಾರದಲ್ಲಿ ತಲೆ ಎತ್ತಿದ 70 ಅಡಿ ಎತ್ತರದ ಬುದ್ಧ ಪ್ರತಿಮೆ
X

ಬುದ್ಧನ 70 ಅಡಿ ಎತ್ತರದ ಪ್ರತಿಮೆಯನ್ನು ಬಿಹಾರದ ಮುಖ್ಯಮಂತ್ರಿ ನಿತಿಶ್ ಕುಮಾರ್ ನಳಂದ ಜಿಲ್ಲೆಯ ರಾಜ್​ಗಿರ್ ಜಿಲ್ಲೆಯಲ್ಲಿ ಅನಾವರಣಗೊಳಿಸಿದರು.

ಇದು ದೇಶದ ಎರಡನೇ ಅತಿ ಎತ್ತರದ ಬುದ್ಧನ ಪ್ರತಿಮೆಯಾಗಿದೆ. ಘೋರ ಕಟೋರ ನದಿಯ ಮಧ್ಯದಲ್ಲಿ ಪ್ರತಿಮೆ ನಿರ್ಮಿಸಲಾಗಿದ್ದು, ತಿಳಿಗೆಂಪು ಬಣ್ಣದ ಕಲ್ಲು ಹಾಗೂ ಮಣ್ಣನ್ನು ಮಾತ್ರ ಬಳಸಿ ವಿಶೇಷವಾಗಿ ನಿರ್ಮಿಸಲಾಗಿದೆ.

ಮೆಹಬೂದಿ ದೇವಸ್ಥಾನಗಳ ಮುಖ್ಯಸ್ಥ ಸನ್ಯಾಸಿ ಬಾಂಟೆ ಚಲಿಂಡಾ, ಸಿಎಂ ನಿತೀಶ್ ಕುಮಾರ್ ಸೇರಿದಂತೆ ಹಲವು ಮುಖಂಡರು ದೋಣಿಯಲ್ಲಿ ಸಾಗಿ ಪ್ರತಿಮೆಯನ್ನು ಅನಾವರಣಗೊಳಿಸಿದರು.

ಐತಿಹಾಸಿಕ ಘೋರ ಕಟೋರ ನದಿಯ ಸುತ್ತ 5 ಪರ್ವತಗಳು ಸುತ್ತುವರಿದಿದೆ. ಈ ನದಿಯನ್ನು ವೀಕ್ಷಿಸಲು ಆಗಮಿಸುವ ಪ್ರವಾಸಿಗರು ಬುದ್ಧನ ಪ್ರತಿಮೆಯನ್ನು ವೀಕ್ಷಿಸಬಹುಸು. ಇದು ವೀಕ್ಷಿಸಲು ಕೂಡ ಮನೋಹರವಾಗಿದೆ ಎಂದು ನಿತೀಶ್ ಕುಮಾರ್ ಹೇಳಿದರು.

ಇಲ್ಲಿ ಉದ್ಯಾನವನ ನಿರ್ಮಿಸಲಾಗುವುದು. ಪೆಟ್ರೋಲ್ ಮತ್ತು ಡೀಸೆಲ್ ವಾಹನ ಪ್ರವೇಶ ನಿಷೇಧಿಸಲಾಗುವುದು. ಪ್ರವಾಸಿಗರು ನಿರ್ದಿಷ್ಟ ಸ್ಥಳದವರೆಗೆ ಆಗಮಿಸಿದ ನಂತರ ಕಾಲುದಾರಿ ಅಥವಾ ಟಾಂಗಾ ಬಳಸಬೇಕಾಗುತ್ತದೆ. ಈ ಮೂಲಕ ಈ ಪರಿಸರವನ್ನು ಶುಚಿಯಾಗಿ ಇಡುವ ಜೊತೆಗೆ ಪ್ರಾಕೃತಿಕ ಸೌಂದರ್ಯ ವೀಕ್ಷಣೆಗೆ ಮಹತ್ವ ನೀಡಲಾಗುವುದು ಎಂದು ನಿತೀಶ್ ಕುಮಾರ್ ವಿವರಿಸಿದರು.

Next Story

RELATED STORIES