Top

ಸ್ಟ್ರಾಬೇರಿ ಹಣ್ಣು ತಿನ್ನೊಕ್ಕೂ ಮುನ್ನ ಎಚ್ಚರ..!

ಸ್ಟ್ರಾಬೇರಿ ಹಣ್ಣು ತಿನ್ನೊಕ್ಕೂ ಮುನ್ನ ಎಚ್ಚರ..!
X

ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್‌ನ ಮಾರ್ಕೆಟ್ ಒಂದರಲ್ಲಿ ಖರೀದಿಸಿದ ಸ್ಟ್ರಾಬೇರಿ ಹಣ್ಣಿನಲ್ಲಿ ಸೂಜಿ ಪತ್ತೆಯಾಗಿದೆ. ಎರಡನೇ ಬಾರಿ ಸ್ಟ್ರಾಬೇರಿಯಲ್ಲಿ ಈ ರೀತಿ ಸೂಜಿ ಪತ್ತೆಯಾಗಿದ್ದು, ಎರಡು ತಿಂಗಳ ಹಿಂದೆಯಷ್ಟೇ ಆಸ್ಟ್ರೇಲಿಯಾದ ಮಾರುಕಟ್ಟೆಯಲ್ಲಿ ಮಾರಾಟವಗಿದ್ದ ಸ್ಟ್ರಾಬೇರಿ ಹಣ್ಣಿನಲ್ಲಿ ಸೂಜಿ ಪತ್ತೆಯಾಗಿತ್ತು.

ಇನ್ನು ಹಣ್ಣು ಮಾರಾಟ ಮಾಡಿದ ಸೂಪರ್‌ ಮಾರ್ಕೇಟ್ ಮಾಲೀಕ ಗ್ಯಾರಿ ಶೀಡ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ತಾನು ಖರೀದಿಸಿದ್ದ ಸ್ಟ್ರಾಬೇರಿ ಹಣ್ಣು ಆಸ್ಟ್ರೇಲಿಯಾದಿಂದ ಬಂದದ್ದೋ ಅಥವಾ ನ್ಯೂಜಿಲ್ಯಾಂಡ್‌ನಿಂದ ಬಂದಿದ್ದೋ ಗೊತ್ತಿಲ್ಲವೆಂದಿದ್ದಾರೆ.

ಇನ್ನು ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆದಿದೆ. ಅಲ್ಲದೇ ಪ್ರಕರಣ ಬೆಳಕಿಗೆ ಬಂದ ಸೂಪರ್‌ ಮಾರ್ಕೇಟ್‌ನಲ್ಲಿ ಸ್ಟ್ರಾಬೇರಿಗಳ ಮಾರಾಟ ನಿಲ್ಲಿಸಲಾಗಿದೆ.

Next Story

RELATED STORIES