Top

ಆಪ್ತಮಿತ್ರನಿಗೆ ಗಣ್ಯರಿಂದ ಅಂತಿಮ ವಿದಾಯ

ಆಪ್ತಮಿತ್ರನಿಗೆ ಗಣ್ಯರಿಂದ ಅಂತಿಮ ವಿದಾಯ
X

ಬದುಕಿನುದ್ದಕ್ಕೂ ಅಭಿಮಾನಿಗಳ ಪಾಲಿಗೆ ಅಚ್ಚುಮೆಚ್ಚಿನ ಅಣ್ಣನಾಗಿದ್ದ ಮಂಡ್ಯದ ಗಂಡು ಅಂಬರೀಶ್ ಅಂತ್ಯಕ್ರಿಯೆ ಕಂಠೀರವ ಸ್ಟುಡಿಯೋದಲ್ಲಿ ಶಾಸ್ತ್ರೋಸ್ತವಾಗಿ ನೆರವೇರಿತು.ರಾಜ್ಯದ ಮೂಲೆಮೂಲೆಗಳಿಂದ ಹೊರರಾಜ್ಯಗಳಿಂದ ಅಂಬರೀಶ್ ಸ್ನೇಹಿತರು, ಅಭಿಮಾನಿಗಳು ಬಂದು ಅಂಬರೀಶ್​ಗೆ ಅಂತಿಮ ನಮನ ಸಲ್ಲಿಸಿದರು.

ಇನ್ನು ಅಂಬರೀಶ್ ಪಾಲಿಗೆ ತಮ್ಮನಂತಿದ್ದ ಜಗ್ಗೇಶ್​ ಅಂಬಿಯನ್ನು ನೆನೆದು ಭಾವುಕರಾದರು. ನಟ ದರ್ಶನ್​ ಬೆಂಗಳೂರಿಗೆ ಬಂದಿಳಿಯುತ್ತಿದ್ದಂತೆ ಕಂಠೀರವ ಕ್ರೀಡಾಂಗಣದತ್ತ ಧಾವಿಸಿ ಬಂದರು. ನಟ ಯಶ್​ ಕಾಲ್ನಡಿಗೆಯಲ್ಲೇ ನಡೆದು ವಾಹನಗಳನ್ನು ನಿಯಂತಿಸಿದರು. ಕಂಠೀರವ ಸ್ಟುಡಿಯೋ ತಲುಪಿದ ಅಂಬರೀಶ್ ಪಾರ್ಥಿವ ಶರೀರಕ್ಕೆ ಗಣ್ಯಾತಿ ಗಣ್ಯರು ಕೊನೆಯದಾಗಿ ನಮಿಸಿ ಗೌರವ ಸಲ್ಲಿಸಿದರು.

ರವಿಚಂದ್ರನ್​, ಶಿವರಾಜ್​ಕುಮಾರ್, ಪುನೀತ್​ ರಾಜ್​ಕುಮಾರ್​, ಯಶ್​, ಜಗ್ಗೇಶ್​, ದರ್ಶನ್, ಧ್ರುವಸರ್ಜಾ, ನಟಿ ರಾಗಿಣಿ, ಮಾಲಾ ಶ್ರೀ, ಸೇರಿದಂತೆ ಅನೇಕ ಕಲಾವಿದರು ಅಂಬರೀಶ್​ಗೆ ಅಂತಿಮ ನಮನ ಸಲ್ಲಿಸಿದರು.

ರಾಜಕೀಯ ಗಣ್ಯರಾದ ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ಹೆಚ್. ಡಿ. ದೇವೆಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ, ಡಿಕೆ ಶಿವಕುಮಾರ್​ ಸೇರಿದಂತೆ ಹಲವು ರಾಜಕೀಯ ಗಣ್ಯರು ಶ್ರೀಗಂಧ,​ ಕರ್ಪೂರಗಳನ್ನು ಅಂಬರೀಶ್ ಚಿತೆಗೆ ಸಮರ್ಪಿಸಿದರು.

ಇನ್ನು ಕೊನೆಯದಾಗಿ ನೆಚ್ಚಿನ ನಟನನ್ನು ಕೊನೇ ಕ್ಷಣದಲ್ಲಾದರು ಕಣ್ತುಂಬಿಕೊಳ್ಳಲು ಅಭಿಮಾನಿಗಳಿಗಾಗ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದರು.

ಅಂಬರೀಶ್ ಅಂತಿಮ ಸಂಸ್ಕಾರಕ್ಕೆಂದು ಆಗಮಿಸಿದ್ದ ಲಕ್ಷಾಂತರ ಅಭಿಮಾನಿಗಳು ಮಂಡ್ಯದ ಗಂಡಿಗೆ ಜೈಕಾರಗಳನ್ನು ಕೂಗಿ ತಮ್ಮ ವಿದಾಯವನ್ನು ಸಲ್ಲಿಸಿದರು. ಸಂಜೆ 6 ಗಂಟೆಗೆ ಪುತ್ರ ಅಭಿಷೇಕ್ ಅಂಬರೀಶ್ ಚಿತೆಗೆ ಅಗ್ನಿ ಸ್ಪರ್ಶ ಮಾಡಿ ಅಂಬಿಯ ಕೊನೇ ಕಾರ್ಯವನ್ನು ಮುಗಿಸಿದರು.

Next Story

RELATED STORIES