Top

'ಅಪ್ಪಾಜಿ' ಅಂತ್ಯಸಂಸ್ಕಾರಕ್ಕೆ ಸ್ವೀಡನ್‌ನಿಂದ ಬಂದ ದಚ್ಚು

ಅಪ್ಪಾಜಿ ಅಂತ್ಯಸಂಸ್ಕಾರಕ್ಕೆ ಸ್ವೀಡನ್‌ನಿಂದ ಬಂದ ದಚ್ಚು
X

ಬೆಂಗಳೂರು: ಅಂಬರೀಶ್ ವಿಧಿವಶರಾದ ಹಿನ್ನೆಲೆ ಯಜಮಾನ ಚಿತ್ರದ ಶೂಟಿಂಗನ್ನ ಅರ್ಧಕ್ಕೆ ನಿಲ್ಲಿಸಿದ ದರ್ಶನ್ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಸ್ವೀಡನ್‌ನಲ್ಲಿ ಶೂಟಿಂಗ್ ನಡೆಸಲು ತೆರಳಿದ್ದ ದರ್ಶನ್, ಅಂಬಿ ಸಾವಿನ ಸುದ್ದಿ ಕೇಳಿದ ಮೇಲೆ ಶೂಟಿಂಗ್ ನಿಲ್ಲಿಸಿ, ಅಂಬಿ ಅಂತ್ಯಸಂಸ್ಕಾರಕ್ಕೆ ಬರಲು ನಿರ್ಧರಿಸಿದ್ದರು.

ಆದರೆ ಟಿಕೆಟ್ ಸಿಗದ ಕಾರಣ ಪರದಾಡಿದ್ದ ದರ್ಶನ್, ಕೊನೆಗೂ ಸ್ವೀಡನ್‌ನಿಂದ ದುಬೈಗೆ ಬಂದು, ದುಬೈನಿಂದ ಬೆಂಗಳೂರಿಗೆ ಬಂದಿಳಿದಿದ್ದಾರೆ. ಇಂದು ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿರುವ ಅಂಬಿ ಅಂತ್ಯಸಂಸ್ಕಾರದಲ್ಲಿ ದರ್ಶನ್ ಭಾಗಿಯಾಗಲಿದ್ದಾರೆ.

ಅಂಬಿಯನ್ನು ದಚ್ಚು ಪ್ರೀತಿಯಿಂದ ಅಪ್ಪಾಜಿ ಎಂದು ಕರೆಯುತ್ತಿದ್ದು, ಅಂಬಿ ಸಾವಿನಿಂದ ದಚ್ಚು ದಿಗ್ಭ್ರಾಂತರಾಗಿದ್ದರು. ದರ್ಶನ್ ಜೀವನದಲ್ಲಿ ಬಂದ ಹೆಚ್ಚಿನ ಸಮಸ್ಯೆಗಳನ್ನು ಸಂಧಾನ ನಡೆಸುವ ಮೂಲಕ ಬಗೆಹರಿಸಿದ್ದೇ ಅಂಬಿ. ಈ ಕಾರಣಕ್ಕಾಗಿ ದರ್ಶನ್ ಅಂಬಿಗೆ ತಂದೆಯ ಸ್ಥಾನ ನೀಡಿದ್ದರು.

Next Story

RELATED STORIES