Top

ಬಸ್ ಪಲ್ಟಿ: ಪ್ರಯಾಣಿಕರು ಪವಾಡಸದೃಶ ಪಾರು

ಬಸ್ ಪಲ್ಟಿ: ಪ್ರಯಾಣಿಕರು ಪವಾಡಸದೃಶ ಪಾರು
X

ಮಂಡ್ಯದ ಖಾಸಗಿ ಬಸ್ ದುರಂತ ಮರೆಯಾಗುವ ಮುನ್ನವೇ ಹಾಸನದಲ್ಲಿ ಖಾಸಗಿ ಬಸ್ ಪಲ್ಟಿಯಾಗಿದೆ‌. ಪವಾಡ ಸದೃಶವಾಗಿ ಬಸ್​ನಲ್ಲಿದ್ದ 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ.

ಬಸ್ ಹಳ್ಳಕ್ಕೆ ಬಿದ್ದು ಕರೆಂಟ್ ವಯರ್ ತಗುಲಿ ಭಸ್ಮವಾಗುವ ಎಲ್ಲಾ ಸಾಧ್ಯತೆ ಇತ್ತು. ಆದರೆ ಯಾವುದೇ ಅನಾಹುತ ಆಗದೇ ಇರುವುದರಿಂದ ಜನರು ನಿಟ್ಟುಸಿರುಬಿಟ್ಟಿದ್ದಾರೆ.

ಕೊಡಗಿನ ಸೋಮವಾರ ಪೇಟೆಯಿಂದ ಹಾಸನ ಅರಕಲಗೂಡಿನ ರಾಮನಾಥಪುರಕ್ಕೆ ಆಗಮಿಸುತ್ತಿದ್ದ ಖಾಸಗಿ ಬಸ್ ಅರಕಲಗೂಡಿನ ಉಳ್ಳೇನಹಳ್ಳಿ ಸೇತುವೆ ಬಳಿ ಗದ್ದೆಗೆ ಉರುಳಿಬಿದ್ದ ಘಟನೆ ನಡೆದಿದೆ. ಎಸುರಿನಿಂದ ಬರುತ್ತಿದ್ದ ವಾಹನ ತಪ್ಪಿಸಲು ಹೋಗಿ ಈ ಘಟನೆ ಸಂಭವಿಸಿದೆ ಅಂತ ಹೇಳಲಾಗಿದ್ದರೂ ಬಸ್ ಅತಿಯಾದ ವೇಗವೇ ಈ ಅಫಘಾತಕ್ಕೆ ಕಾರಣ ಎಂದು ಹೇಳಲಾಗಿದೆ.

ಸುಮಾರು 50 ಮಂದಿ ಬೀಗರ ಊಟಕ್ಕಾಗಿ ಆಗಮಿಸುತ್ತಿದ್ದರೆನ್ನಲಾಗಿದೆ. ಇನ್ನು ಈ ಅಪಘಾತ ಕೆಲದೂರದಲ್ಲಿ ಆಗಿದ್ದರೆ ಬಸ್ ಹಳ್ಳಕ್ಕೆ ಬೀಳುತ್ತಿತ್ತು. ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದರೂ ದೊಡ್ಡ ಅನಾಹುತ ಸಂಭವಿಸುತ್ತಿತ್ತು ಎಂದು ಸ್ಥಳೀಯ ಶಾಸಕ ಎ.ಟಿ ರಾಮಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.

30 ಮಂದಿ ಗಾಯಾಳುಗಳನ್ನ ಕೊಣನೂರು ಆಸ್ಪತ್ರೆ ಗೆ ನಂತರ ಅಲ್ಲಿಂದ ಹಾಸನ ಹಿಮ್ಸ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.

Next Story

RELATED STORIES