Top

ಅಂಬಿ ಅಂತಿಮ ಯಾತ್ರೆ: ಸಾಲುಗಟ್ಟಿ ನಿಂತ ಜನಸಾಗರ

ಅಂಬಿ ಅಂತಿಮ ಯಾತ್ರೆ: ಸಾಲುಗಟ್ಟಿ ನಿಂತ ಜನಸಾಗರ
X

ಮಂಡ್ಯದಲ್ಲಿ ಅಭಿಮಾನಿಗಳ ಅಂತಿಮ ದರ್ಶನದ ನಂತರ ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ಹೆಲಿಕಾಫ್ಟರ್ ಮೂಲಕ ವಾಪಸ್ ತರಲಾಗಿದ್ದು, ಸಾವಿರಾರು ಅಭಿಮಾನಿಗಳು ಹಾಗೂ ಕಲಾವಿದರ ನಡುವೆ ಅಂತಿಮ ಯಾತ್ರೆ ನಡೆಯಿತು.

ಬೆಂಗಳೂರಿನ ಎಚ್​ಎಎಲ್​ ವಿಮಾನ ನಿಲ್ದಾಣಕ್ಕೆ ಹೆಲಿಕಾಫ್ಟರ್ ಮೂಲಕ ಬಂದ ನಂತರ ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಕಂಠೀರವ ಕ್ರೀಡಾಂಗಣದವರೆಗೂ ವಾಹನದ ಮೂಲಕ ತರಲಾಯಿತು.

ಕಂಠೀರವ ಮೈದಾನದಿಂದ 13 ಕಿ.ಮೀ. ದೂರದ ಡಾ.ರಾಜ್​ಕುಮಾರ್ ಸಮಾಧಿವರೆಗೂ ವಿಶೇಷ ವಾಹನದಲ್ಲಿ ಮೆರವಣಿಗೆ ಮೂಲಕ ಸಾಗಿತು. ಹೂವುಗಳಿಂದ ವಿಶೇಷವಾಗಿ ಅಲಂಕೃತ ವಾಹನ, ಹಡ್ಸನ್ ರಸ್ತೆ, ಮೈಸೂರು ಬ್ಯಾಂಕ್ ರಸ್ತೆ, ಮೆಜೆಸ್ಟಿಕ್, ಭಾಷ್ಯಂ ಸರ್ಕಲ್ ಮೂಲಕ ಡಾ.ರಾಜ್​ಕುಮಾರ್ ಸಮಾಧಿವರೆಗೂ ವಾಹನ ಸಾಗಿತು.

ಸುಮಾರು 13 ಕಿ.ಮೀ.ದೂರದವರೆಗೂ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದು. ವಾಹನದ ಸುತ್ತ ಪೊಲೀಸರ ಭದ್ರತೆ ಏರ್ಪಡಿಸಲಾಗಿತ್ತು. ವಿಶೇಷ ವಾಹನದಲ್ಲಿ ನಟ ದರ್ಶನ್, ರವಿಶಂಕರ್​ ಸೇರಿದಂತೆ ಹಲವಾರು ಕಲಾವಿದರು ಹಾಗೂ ಕುಟುಂಬಸ್ಥರು ಇದ್ದರು.

Next Story

RELATED STORIES