Top

ಆತ್ಮಹತ್ಯೆ ಮಾಡಿಕೊಂಡ ಮತ್ತೊಬ್ಬ ಅಂಬಿ ಅಭಿಮಾನಿ!

ಆತ್ಮಹತ್ಯೆ ಮಾಡಿಕೊಂಡ ಮತ್ತೊಬ್ಬ ಅಂಬಿ ಅಭಿಮಾನಿ!
X

ಮಂಡ್ಯದ ಜನರ ಅಪಾರ ಅಭಿಮಾನ ಗಳಿಸಿರುವ ನಟ ಹಾಗೂ ರಾಜಕಾರಣಿ ಅಂಬರೀಶ್ ಅಂತಿಮ ದರ್ಶನ ಪಡೆದ ಬೆನ್ನಲ್ಲೇ ಅಭಿಮಾನಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಅಂಬರೀಶ್ ನಿಧನ ನಂತರ ಆತ್ಮಹತ್ಯೆಗೆ ಶರಣಾದ ಎರಡನೇ ಅಭಿಮಾನಿ ಸುರೇಂದ್ರ ಜಿ.ಎಸ್​ (46) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಭಾನುವಾರ ರೈಲಿಗೆ ತಲೆಕೊಟ್ಟು ಹೊಟ್ಟೆ ಗೌಡನದೊಡ್ಡಿಯಲ್ಲಿ ತಮ್ಮಯ್ಯ ಎಂಬ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದರು.

ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಗೊರವನಹಳ್ಳಿ ಗ್ರಾಮದ ಸುರೇಂದ್ರ ಭಾನುವಾರ ಸಂಜೆ ಅಂಬರೀಶ್ ಅವರ ಅಂತಿಮ ದರ್ಶನ ಪಡೆದ ನಂತರ ಮನೆಗೆ ಮರಳಿದ ಬೆನ್ನಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮದ್ದೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಸುರೇಂದ್ರ, ಭಾನುವಾರ ರಾತ್ರಿ ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಂಬಿ ದರ್ಶನ ಪಡೆದಿದ್ದರು. ಅಂಬಿ ನಿಧನದಿಂದ ತೀವ್ರ ನೊಂದಿದ್ದ ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಅಂಬಿ ಮೇಲಿನ ಅಭಿಮಾನದಿಂದ ಹಲವು ವರ್ಷಗಳ ಹಿಂದೆಯೇ ತನ್ನ ಕೈ ಮೇಲೆ ಅಂಬಿ ಹೆಸರನ್ನು ಸುರೇಂದ್ರ ಹಚ್ಚೆ ಹಾಕಿಸಿಕೊಂಡಿದ್ದು, ಮದ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Next Story

RELATED STORIES