Top

ಆಪ್ತಮಿತ್ರನ ಅಂತಿಮ ದರ್ಶನ ಪಡೆದ ರಜನಿಕಾಂತ್

ಆಪ್ತಮಿತ್ರನ ಅಂತಿಮ ದರ್ಶನ ಪಡೆದ ರಜನಿಕಾಂತ್
X

ಬೆಂಗಳೂರು: ಅನಾರೋಗ್ಯದಿಂದ ಬಳಲಿ, ಚಿಕಿತ್ಸೆ ಫಲಿಸದೇ ಅಂಬರೀಶ್ ಸಾವನ್ನಪ್ಪಿದ್ದು, ಹಲವು ಗಣ್ಯರು ಬೆಂಗಳೂರಿಗೆ ಆಗಮಿಸಿ, ಅಂಬರೀಶ್ ಅಂತಿಮ ದರ್ಶನ ಪಡೆದರು.

ಸೂಪರ್‌ಸ್ಟಾರ್ ರಜನಿಕಾಂತ್ ಕೂಡ ಅಂಬರೀಶ್ ಅಂತಿಮ ದರ್ಶನ ಪಡೆದಿದ್ದು, ಕಂಬನಿ ಮಿಡಿದಿದ್ದಾರೆ. ಅಂಬಿ ಬಗ್ಗೆ ಭಾವುಕ ನುಡಿಗಳನ್ನಾಡಿದ ರಜನಿಕಾಂತ್, ನಮ್ಮದು ನಲವತ್ತು ವರ್ಷದ ಗೆಳೆತನ, ಅಂಬಿ ಅಗಲಿಕೆ ನೋವು ತಂದಿದೆ ಎಂದಿದ್ದಾರೆ.

ಅಲ್ಲದೇ, ನಾನು ಬೆಂಗಳೂರು ಬಂದಾಗೆಲ್ಲ ಅಂಬಿ ಮನೆಗೆ ಹೋಗಿ ಊಟ ಮಾಡುತ್ತಿದ್ದೆ. ವಾರದ ಹಿಂದೆ ಬೆಂಗಳೂರು ಬಂದಿದ್ದೆ. ಆದರೆ ಅಂಬಿ ಮನೆಗೆ ಹೋಗೋಕೆ ಆಗಿಲ್ಲ. ಕಾಲ್ ಮಾಡಿದ್ದೆ. ನಂಗೆ ಬೈದ, ಬಡ್ಡಿ ಮಗನೆ ಸಾಯಿಸಿಬಿಡ್ತೀನಿ ಅಂದ. ಅಂಬಿ ಗೆಳೆತನದ ಸ್ವರೂಪ. ಅಂಬಿಗೆ ಅಂಬಿಯೇ ಸಾಕ್ಷಿ. ಅವನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ರಜನಿಕಾಂತ್ ಸಂತಾಪ ವ್ಯಕ್ತಪಡಿಸಿದ್ದಾರೆ.

Next Story

RELATED STORIES