Top

ಅಂಬರೀಶ್​ಗೆ ಮೈಸೂರು ರಾಜವಂಶಸ್ಥರಿಂದ ವಿಶೇಷ ಗೌರವ!

ಅಂಬರೀಶ್​ಗೆ ಮೈಸೂರು ರಾಜವಂಶಸ್ಥರಿಂದ ವಿಶೇಷ ಗೌರವ!
X

ನಟ ಹಾಗೂ ರಾಜಕಾರಣಿ ಅಂಬರೀಶ್ ನಿಧನಕ್ಕೆ ಮೈಸೂರು ರಾಜ ಮನೆತನ ಶೋಕ ವ್ಯಕ್ತಪಡಿಸಿದ್ದು, ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಿದೆ.

ಮೈಸೂರಿನಲ್ಲಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಅಂಬರೀಶ್ ನಿಧನಕ್ಕೆ ಕಂಬನಿ ಮಿಡಿದಿದ್ದು, ಅವರ ಗೌರವಾರ್ಥವಾಗಿ ಬೆಂಗಳೂರಿನ ಖಾಸಗಿ ಅರಮನೆ ವೀಕ್ಷಣೆ ರದ್ದುಗೊಳಿಸಿದ್ದಾರೆ.

ಅಂಬರೀಶ್ ನಮ್ಮ ಕುಟುಂಬಕ್ಕೆ ಉತ್ತಮ ಮಾರ್ಗದರ್ಶಕರಾಗಿದ್ದರು. ನನ್ನ ಪತಿಗೆ ಅತ್ಯಂತ ಆತ್ಮಿಯ ಗೆಳೆಯರೂ ಆಗಿದ್ದರು. ಎಲ್ಲಾ ಸಂದರ್ಭಗಳಲ್ಲೂ ನಮ್ಮ ಜೊತೆ ಕೈ ಜೊಡಿಸಿದ್ದರು. ಪ್ರತಿ ಸಂಧರ್ಬದಲ್ಲಿ ನಿಮಗೆ ಸಹಾಯ ಬೇಕಾದರೆ ಕೇಳಿ ಎಂದು ಹೇಳುತ್ತಿದ್ದರು ಎಂದು ಪ್ರಮೋದಾದೇವಿ ನೆನಪಿಸಿಕೊಂಡಿದ್ದಾರೆ.

ಅಂಬರೀಶ್ ಅವರದ್ದು ಒಂದು ವಿಶಿಷ್ಟ ವ್ಯಕ್ತಿತ್ವ. ಅವರಂತೆ ಇನ್ನೊಬ್ಬರು ಇರಲು ಸಾಧ್ಯವಿಲ್ಲ. ನಮಗೂ ಸಹ ಇಷ್ಟು ಮೃದುವಾಗಿ ಇರಬೇಡಿ ಎಂದು ಸಲಹೆ ನೀಡುತ್ತಿದ್ದರು. ಕೊನೆಯ ಬಾರಿ ರೆಸ್ಟೋರೆಂಟ್‌ ವೊಂದರಲ್ಲಿ ಭೇಟಿಯಾಗಿದ್ದೆವು ಎಂದು ಪ್ರಮೋದಾದೇವಿ ನುಡಿದರು.

ನಮ್ಮ ಕುಟುಂಬಕ್ಕೆ ಅವರ ಸ್ನೇಹ ಅಮರವಾಗಿಯೇ ಇದೆ. ಅಂಬರೀಶ್ ಸಾವು ನಮಗೆ ವೈಯುಕ್ತಿಕವಾಗಿ ದುಃಖ ತಂದಿದೆ. ಅವರ ಕುಟುಂಬಕ್ಕೆ ಶಾಂತಿ ದೊರಕಲಿ. ಕಾರ್ಯಕ್ರಮಗಳ ನಿಮಿತ್ತ ಅಂತಿಮ ದರ್ಶನಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ಪ್ರಮೋದಾದೇವಿ ಒಡೆಯರ್ ವಿಷಾದ ವ್ಯಕ್ತಪಡಿಸಿದರು.

Next Story

RELATED STORIES