ಆಸ್ಟ್ರೇಲಿಯಾ ವಿಶ್ವ ವನಿತೆಯರ ಟಿ-20 ಚಾಂಪಿಯನ್

ಆಸ್ಟ್ರೇಲಿಯಾ ತಂಡ 8 ವಿಕೆಟ್​ಗಳಿಂದ ಇಂಗ್ಲೆಂಡ್ ತಂಡವನ್ನು ಬಗ್ಗುಬಡಿದು 4ನೇ ಬಾರಿಗೆ ವನಿತೆಯರ ವಿಶ್ವ ಟಿ-20 ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಭಾನುವಾರ ನಡೆದ ಫೈನಲ್​ನಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವನ್ನು 19.4 ಓವರ್ ಗಳಲ್ಲಿ 105 ರನ್​ಗಳಿಗೆ ಆಲೌಟ್ ಮಾಡಿದ ಆಸ್ಟ್ರೇಲಿಯಾ 15.1 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.

ಆಸ್ಟ್ರೇಲಿಯಾಗೆ ಇದು ನಾಲ್ಕನೇ ಬಾರಿ ಒಲಿದ ವಿಶ್ವ ಚಾಂಪಿಯನ್ ಪಟ್ಟವಾಗಿದೆ. ಇದಕ್ಕೂ ಮುನ್ನ 2010, 2012, 2014ರಲ್ಲಿ ಪ್ರಶಸ್ತಿ ಗೆದ್ದಿತ್ತು.

ಆಲ್​ರೌಂಡರ್ ಅಶ್ಲೆಘ್ ಗಾರ್ಡನರ್ ಮಿಂಚಿನ ಪ್ರದರ್ಶನ ತಂಡದ ಗೆಲುವಿನ ಹಾದಿ ಸುಲಭಗೊಳಿಸಿತು. ಗಾರ್ಡನರ್ ಬೌಲಿಂಗ್​ನಲ್ಲಿ 3 ವಿಕೆಟ್ ಕಿತ್ತರೆ, ಬ್ಯಾಟಿಂಗ್​ಗೆ ಇಳಿದು 28 ಎಸೆತಗಳಲ್ಲಿ 1 ಬೌಂಡರಿ ಹಾಗೂ 3 ಸಿಕ್ಸರ್ ಸೇರಿ ಅಜೇಯ 33 ರನ್ ಸಿಡಿಸಿದರು.

  • ಸಂಕ್ಷಿಪ್ತ ಸ್ಕೋರ್
  • ಇಂಗ್ಲೆಂಡ್ 19.4 ಓವರ್ 105 (ವೇಟ್ 43, ನೈಟ್ 25, ಗಾರ್ಡನರ್ 22/3, ವರೆಹಮ್ 11/2, ಸ್ಕಟ್ 13/2).
  • ಆಸ್ಟ್ರೇಲಿಯಾ 15.1 ಓವರ್ 2 ವಿಕೆಟ್ 106 (ಗಾರ್ಡನರ್ ಅಜೇಯ 33, ಲ್ಯಾನಿಂಗ್ ಅಜೇಯ 28, ಹ್ಯಾಲಿ 22).