ಗಾಳಿಪಟ ಭಾವನಾಗೆ ಮದ್ವೆ ಮಾಡಿಸಿದ ತುಪ್ಪದ ಬೆಡಗಿ ರಾಗಿಣಿ..!

ಮೈಸೂರಿನಲ್ಲಿ ಜೋಗಿ ಪ್ರೇಮ್, ರಾಗಿಣಿ ದ್ವಿವೇದಿ, ಅರುಂಧತ್ತಿನಾಗ್ ಅಭಿನಯದ, ರಘು ಹಾಸನ್ ನಿರ್ದೇಶನದ ಗಾಂಧಿಗಿರಿ ಚಿತ್ರದ ಶೂಟಿಂಗ್ ಭರದಿಂದ ಸಾಗ್ತಿದೆ. ವಿಶೇಷ ಎಂದರೇ, ಶನಿವಾರ ಮದುವೆಯ ಸನ್ನಿವೇಷದ ಚಿತ್ರೀಕರಣ ನಡೀತಿದೆ. ಈ ಸನ್ನಿವೇಷದಲ್ಲಿ ಪುಟ್ಟಗೌರಿ ಖ್ಯಾತಿಯ ರಕ್ಷಿತ್ ಮತ್ತು ಭಾವನಾರಾವ್ಗೆ ಮದುವೆಯಾಗಿದ್ದಾರೆ.
ಇದು ರಿಯಲ್ಲಾಗಿ ನಡೆದಿರೋ ಮದುವೆಯಲ್ಲ. ಜೋಗಿ ಪ್ರೇಮ್ ಅಭಿನಯಿಸ್ತಿರೋ ರಘು ಹಾಸನ್ ನಿರ್ದೇಶ್ತಿರೋ ಗಾಂಧಿಗಿರಿ ಚಿತ್ರದ ಮದುವೆ ಸನ್ನಿವೇಷದ ಚಿತ್ರೀಕರಣದಲ್ಲಿ ಕ್ಲಿಕ್ಕಿಸಿರೋ ಫೋಟೋ. ನಟಿ ರಾಗಿಣಿ ದ್ವಿವೇದಿ, ಹಾಗೇ ಸುಮ್ಮನೇ ಸೆಟ್ನಲ್ಲಿ ತೆಗೆದುಕೊಂಡ ಫೋಟೋಗಳ ಝಲಕ್, ಈಗ ಎಲ್ಲೆಡೆ ವೈರಲ್ ಆಗ್ತಿವೆ.
ಜೋಗಿ ಪ್ರೇಮ್ ಸೆಟ್ನಲ್ಲಿ ರಾಗಿಣಿ ಮಸ್ತ್ ಹಂಗಾಮ
ಮೈಸೂರಿನಲ್ಲಿ ಜೋಗಿ ಪ್ರೇಮ್, ರಾಗಿಣಿ ದ್ವಿವೇದಿ, ಅರುಂಧತ್ತಿನಾಗ್ ಅಭಿನಯದ, ರಘು ಹಾಸನ್ ನಿರ್ದೇಶನದ ಗಾಂಧಿಗಿರಿ ಚಿತ್ರದ ಶೂಟಿಂಗ್ ಭರದಿಂದ ಸಾಗ್ತಿದೆ. ವಿಶೇಷ ಅಂದ್ರೆ, ಇವತ್ತು ಮದುವೆಯ ಸನ್ನಿವೇಷದ ಚಿತ್ರೀಕರಣ ನಡೀತಿದೆ. ಈ ಸನ್ನಿವೇಷದಲ್ಲಿ ಪುಟ್ಟಗೌರಿ ಖ್ಯಾತಿಯ ರಕ್ಷಿತ್ ಮತ್ತು ಭಾವನಾರಾವ್ಗೆ ಮದುವೆಯಾಗ್ತಾರೆ.
ಸನ್ನಿವೇಷದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಜೋಗಿ ಪ್ರೇಮ್, ರಂಗಾಯಣ ರಘು, ಕುರಿಪ್ರತಾಪ್, ಅರುಂದತ್ತಿನಾಗ್, ಭಾವನಾರಾವ್, ರಕ್ಷಿತ್ಎಲ್ಲಾರೊಟ್ಟಿಗೂ ರಾಗಿಣಿ ಸೆಲ್ಫಿ ತೆಗೆದುಕೊಂಡಿದ್ದಾರೆ. ಜೊತೆಗೆ ಒಂದಷ್ಟು ಫೋಟೋಗಳನ್ನ ಕ್ಲಿಕ್ಕಿಸಿದ್ದಾರೆ. ಗಾಂಧಿಗಿರಿ ಚಿತ್ರದ ಶೂಟಿಂಗ್ ಸ್ಪಾಟ್ನ ಈ ಫೋಟೋಗಳೀಗ ಎಲ್ಲೆಲ್ಲೂ ವೈರಲ್ ಆಗಿವೆ.