Top

ದಾಖಲೆಯ 6ನೇ ಬಾರಿ ಮೇರಿಕೋಮ್ ಬಾಕ್ಸಿಂಗ್ ಚಾಂಪಿಯನ್

ದಾಖಲೆಯ 6ನೇ ಬಾರಿ ಮೇರಿಕೋಮ್ ಬಾಕ್ಸಿಂಗ್ ಚಾಂಪಿಯನ್
X

ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಬಾಕ್ಸರ್ ಮೇರಿ ಕೋಮ್ ದಾಖಲೆಯ 6ನೇ ಬಾರಿಗೆ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಭಾನುವಾರ ನಡೆದ ವನಿತೆಯರ 48 ಕೆಜಿ ವಿಭಾಗದ ಫೈನಲ್​ನಲ್ಲಿ ಮೇರಿಕೋಮ್ 5-0 ಅಂಕಗಳಿಂದ ಉಕ್ರೇನ್​ನ ಹನಾನಾ ಒಕಾಟ ಅವರನ್ನು ಸೋಲಿಸಿದರು. ಈ ಮೂಲಕ ನಿವೃತ್ತಿ ನಂತರ ಮರಳಿದ ಮೇರಿಕೋಮ್​ ತಮ್ಮಲ್ಲಿ ಇನ್ನೂ ಬಾಕ್ಸಿಂಗ್ ಇದೆ ಎಂಬುದನ್ನು ನಿರೂಪಿಸಿದರು.

ಮೇರಿಕೋಮ್ 5 ಬಾರಿ ವಿಶ್ವ ಚಾಂಪಿಯನ್ ಆದ ನಂತರ ಲಂಡನ್ ಒಲಿಂಪಿಕ್ಸ್​ ನಲ್ಲಿ ಕಂಚಿನ ಪದಕ ಗೆದ್ದ ನಂತರ ಬಾಕ್ಸಿಂಗ್​ಗೆ ವಿದಾಯ ಹೇಳಿದ್ದರು. ಆದರೆ ಇತ್ತೀಚೆಗೆ ನಿವೃತ್ತಿ ನಿರ್ಧಾರ ವಾಪಸ್ ಪಡೆದಿದ್ದೂ ಅಲ್ಲದೇ ಮರಳಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಮೇರಿಕೋಮ್ 48 ಕೆಜಿ ವಿಭಾಗದಲ್ಲಿ ಜಯ ಸಾಧಿಸಿದ್ದರೂ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸುವುದು ಅನುಮಾನ. ಏಕೆಂದರೆ ಮುಂಬರುವ ಒಲಿಂಪಿಕ್ಸ್​ನಲ್ಲಿ ಈ ವಿಭಾಗ ಇನ್ನೂ ಸೇರ್ಪಡೆಯಾಗಿಲ್ಲ.

Next Story

RELATED STORIES