Top

ಮಂಡ್ಯ ಬಸ್ ದುರಂತ :ಸಿದ್ದರಾಮಯ್ಯ ಸಂತಾಪ

ಮಂಡ್ಯ ಬಸ್ ದುರಂತ :ಸಿದ್ದರಾಮಯ್ಯ ಸಂತಾಪ
X

ಪಾಂಡವಪುರ ಸಮೀಪದ ಕನಗನಮರಡಿ ಗ್ರಾಮದ ಹತ್ತಿರ ವಿ.ಸಿ. ನಾಲೆಗೆ ಖಾಸಗಿ ಬಸ್‌ ಉರುಳಿ ಮೃತಪಟ್ಟ ಘಟನಾ ಸ್ಥಳಕ್ಕೆ ಮಾಜಿ ಸಿಎಂ‌ ಸಿದ್ದರಾಮಯ್ಯ ಭೇಟಿ ನೀಡಿದರು.

ಶವಗಳ ಕಂಡು ಬೇಸರವಾಗುತ್ತೀದೆ, ದೇವರು ಮೃತಪಟ್ಟ ಕುಟುಂಬದ ಮನೆಯವರಿಗೆ ದುಖಃ ಭರಿಸುವ ಶಕ್ತಿಯನ್ನು ನೀಡಲಿ, ಮುಂದೆ ಈ ರೀತಿಯ ಘಟನೆಗಳು ಮತ್ತೇ ಸಂಭವಿಸದಿರಲಿ, ದೇವರಲ್ಲಿ ಕೇಳಿಕೊಳ್ಳುತ್ತೇನೆ ಎಂದು ಸಿದ್ದರಾಮಯ್ಯ ಕಣ್ಣೀರು ಹಾಕಿದರು.

ಮೈಸೂರು ಜಿಲ್ಲಾ ಪ್ರವಾಸದಲಿದ್ದೇನೆ ಸುದ್ದಿ ತಿಳಿದ ತಕ್ಷಣ ಮೈಸೂರಿನಿಂದ ಕನಗನಮರಡಿ ಗ್ರಾಮಕ್ಕೆ ಬಂದೆ ಎಂದು ಹೇಳಿದರು. 'ರಾಜ್‌ಕುಮಾರ್' ಹೆಸರಿನ ಬಸ್‌ನ ಸ್ಟೇರಿಂಗ್ ತುಂಡಾದ ಪರಿಣಾಮ ಬಸ್ ನಾಲೆಗೆ ಬಿದ್ದು 25 ಮಂದಿ ಸಾವಿಗೀಡಾಗಿದ್ದಾರೆ.ಇನ್ನೂ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಹಗ್ಗ ಮತ್ತು ಕ್ರೇನ್‌ ಸಹಾಯದಿಂದ ಈವರೆಗೆ 23 ಶವಗಳನ್ನು ಹೊರ ತೆಗೆಯಲಾಗಿದೆ ಎಂದರು.

ಇನ್ನು ಘಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ತಕ್ಷಣ ಧಾವಿಸಿ ಕುಟುಂಬಸ್ಥರು ಮತ್ತು ಸಂಬಧಿಕರಿಗೆ ಸಂತ್ವನವನ್ನು ಹೇಳಿದರು ಮತ್ತು ಶವಗಳನ್ನ ನೋಡಿ ಕಣ್ಣೀರಿಟ್ಟು, ಈ ದುರ್ಘಟನೆ ನಡೆಯಬಾರದಿತ್ತೆಂದು ಎಂದು ಮರುಕ ಪಟ್ಟರು.

Next Story

RELATED STORIES