ಮಂಡ್ಯ ಬಸ್ ದುರಂತಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಸಂತಾಪ

ಮಂಡ್ಯ ಬಸ್ ದುರಂತದ ಹಿನ್ನೆಲೆಯಲ್ಲಿ ಇಂದು ರಿಲೀಸ್ ಆಗಬೇಕಿದ್ದ ಆರೇಂಜ್ ಸಿನಿಮಾ ಟ್ರೇಲರ್ ರಿಲೀಸ್ ಆಗ್ತಾ ಇಲ್ಲ. ಮಂಡ್ಯ ಕಣಗಾನಮರಡಿ ಬಸ್ ದುರಂತಕ್ಕೆ ಸಂತಾಪ ಸೂಚಿಸಿರೋ ಗೋಲ್ಡನ್ ಸ್ಟಾರ್ ಗಣೇಶ್, ಟ್ರೇಲರ್ ರಿಲೀಸ್ ಮುಂದೂಡಲಾಗಿದೆ ಅಂತ ತಿಳಿಸಿದ್ದಾರೆ.
ದುಃಖದಲ್ಲಿ ಪಾಲುದಾರನಾಗಿ ತಮ್ಮ ಸಿನಿಮಾ ಆರೇಂಜ್ನ ಟ್ರೇಲರ್ ರಿಲೀಸ್ ಕಾರ್ಯಕ್ರಮವನ್ನು ಮುಂದಕ್ಕೆ ಹಾಕಿದ್ದಾರೆ.
ಇನ್ನೂ ದುರಂತದಿಂದ ಆಘಾತಕ್ಕೆ ಒಳಗಾಗಿರುವ ಗಣೇಶ್ ಟ್ವಿಟ್ಟರ್ ಮೂಲಕ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಮಂಡ್ಯ ಜಿಲ್ಲೆಯ ಕನಗನಮರಡಿಯಲ್ಲಿ ಬಸ್ ದುರಂತ ನಿಜಕ್ಕೂ ದುರದೃಷ್ಟಕರ.ವಿಧಿಯ ಕ್ರೌರ್ಯಕ್ಕೆ ಬಲಿಯಾದ ಮುಗ್ಧ ಜೀವಗಳ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಮೃತರ ಕುಟುಂಬಗಳಿಗೆ ದುಃಖ ಬರಿಸುವ ಶಕ್ತಿಯನ್ನು ದೇವರು ನೀಡಲಿ'' ಎಂದು ಸಂತಾಪ ಸೂಚಿಸಿದ್ದಾರೆ.
ಇಂದು ಸಂಜೆ 6ಕ್ಕೆ ಪ್ರಶಾಂತ್ ರಾಜ್ ನಿರ್ದೇಶನದ ಆರೇಂಜ್ ಸಿನಿಮಾ ಟ್ರೇಲರ್ ರಿಲೀಸ್ ಆಗಬೇಕಿತ್ತು. ಸಿನಿಮಾದ ನಿರ್ದೇಶಕ ಪ್ರಶಾಂತ್ ರಾಜ್ ಕೂಡ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಸಂತಾಪ ಸೂಚಿಸಿದ್ದಾರೆ. ಇದೇ ಡಿಸೆಂಬರ್ 7ಕ್ಕೆ ಆರೇಂಜ್ ಸಿನಿಮಾ ತೆರೆಗೆ ಬರಲಿದೆ.ಆರೆಂಜ್ ಪ್ರಶಾಂತ್ ರಾಜ್ ನಿರ್ದೇಶನದ ಸಿನಿಮಾವಾಗಿದೆ.