Top

ದೇವಸ್ಥಾನದಲ್ಲಿ ಪ್ರೇಮಿಗಳ ಮದುವೆಗೆ ನಿರ್ಬಂಧ?

ದೇವಸ್ಥಾನದಲ್ಲಿ ಪ್ರೇಮಿಗಳ ಮದುವೆಗೆ ನಿರ್ಬಂಧ?
X

ಪ್ರೇಮಿಗಳು ಹೆತ್ತವರಿಂದ ತಪ್ಪಿಸಿಕೊಂಡು ದೇವಸ್ಥಾನದಲ್ಲಿ ಮದುವೆ ಆಗುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ದೇವಸ್ಥಾನದಲ್ಲಿ ಪ್ರೇಮಿಗಳು ಮದುವೆ ಆಗುವುದಕ್ಕೆ ತಡೆ ಹಾಕಲು ರಾಜ್ಯ ಸರಕಾರ ಚಿಂತನೆ ನಡೆಸಿದೆ.

ದೇವಸ್ಥಾನಗಳಲ್ಲಿ ಪ್ರೇಮ ವಿವಾಹ ಮಾಡಬಾರದು ಎಂದು ಮುಜರಾಯಿ ಇಲಾಖೆ ಸುತ್ತೋಲೆ ಹೊರಡಿಸಲು ಚಿಂತನೆ ನಡೆಸಿದ್ದು, ಒಂದು ವೇಳೆ ಇಂತಹ ಮದುವೆಗಳು ನಡೆದಿದ್ದು ಕಂಡು ಬಂದರೆ ಪುರೋಹಿತರ ಮೇಲೆಯೇ ಪ್ರಕರಣ ದಾಖಲಾಗಲಿದೆ.

ನಿಯಮದ ಪ್ರಕಾರ ಯಾರು ಹೇಗೆ ಮದುವೆ ಆದರೂ ವಿವಾಹ ನೋಂದಣಿ ಮಾಡಿಸಿಕೊಳ್ಳಬೇಕು. ಅಥವಾ ವಿವಾಹ ನೋಂದಣಿ ಕಚೇರಿಯಲ್ಲಿ ವಿವಾಹ ಆಗಬೇಕು. ಆದರೆ ಈ ನಿಯಮಗಳನ್ನು ಬಹುತೇಕ ಮಂದಿ ಅನುಸರಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರಕಾರ ಪ್ರೇಮ ವಿವಾಹಗಳು ದೇವಸ್ಥಾನದಲ್ಲಿ ನಡೆಯುವುದನ್ನು ತಡೆಯಲು ಚಿಂತನೆ ನಡೆಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಸುಮಾರು 35 ಸಾವಿರ ದೇವಸ್ಥಾನಗಳು ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುತ್ತವೆ. ಒಂದೊಂದು ದೇವಸ್ಥಾನದಲ್ಲೂ ತಿಂಗಳಿಗೆ ಕನಿಷ್ಠ 5 ಮದುವೆಗಳು ನಡೆಯುತ್ತವೆ.

ರಾಜ್ಯದಲ್ಲಿ ದೇವಸ್ಥಾನದಲ್ಲಿ ಆದ ಪ್ರೇಮ ವಿವಾಹದಿಂದ ಸುಮಾರು 8 ಸಾವಿರ ಪ್ರಕರಣಗಳು ದಾಖಲಾಗುತ್ತಿವೆ. ಹಣದ ಆಮೀಷಕ್ಕಾಗಿ ಪುರೋಹಿತರು ತಾವೇ ಖುದ್ದು ನಿಂತು ಮದುವೆ ಮಾಡಿದ ಪ್ರಸಂಗಗಳೂ ಇವೆ. ಆದರೆ ಪ್ರಕರಣ ದಾಖಲಾದರೆ ಪುರೋಹಿತರು ವಿಚಾರಣೆಗೆ ಲಭ್ಯರಾಗುವುದಿಲ್ಲ.

ದಿನದಿಂದ ದಿನಕ್ಕೆ ದೇವಸ್ಥಾನಗಳಲ್ಲಿ ನಡೆಯುವ ಪ್ರೇಮ ವಿವಾಹ ಪ್ರಕರಣಗಳ ವಿಚಾರಣೆಗಾಗಿಯೇ ಸರಕಾರ ವಕೀಲರನ್ನು ನೇಮಿಸಬೇಕಿದ್ದು, ಇದಕ್ಕಾಗಿ ಅನವಶ್ಯಕವಾಗಿ ಕೋಟ್ಯಂತರ ರೂ. ವೆಚ್ಚ ಮಾಡಬೇಕಾದ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಸರಕಾರ ದೇವಸ್ಥಾನದಲ್ಲಿ ಪ್ರೇಮ ವಿವಾಹ ತಡೆಯಲು ಮುಂದಾಗಿದೆ ಎಂದು ಹೇಳಲಾಗಿದೆ.

Next Story

RELATED STORIES