Top

3ಕೋಟಿ 60ಲಕ್ಷಕ್ಕೆ KGF ಆಡಿಯೋ ಸೋಲ್ಡ್ ಔಟ್: ಬಾಹುಬಲಿ ಮೀರಿಸಿದ KGF

3ಕೋಟಿ 60ಲಕ್ಷಕ್ಕೆ KGF ಆಡಿಯೋ ಸೋಲ್ಡ್ ಔಟ್: ಬಾಹುಬಲಿ ಮೀರಿಸಿದ KGF
X

ಕೆಜಿಎಫ್ ಕೆಜಿಎಫ್ ಕೆಜಿಎಫ್. ಎಲ್ಲೆಲ್ಲೂ ಕೆಜಿಎಫ್​ದೇ ಸದ್ದು. ರಾಕಿಂಗ್ ಸ್ಟಾರ್ ಯಶ್​ದೇ ಹವಾ. ಹೀಗಿರುವಾಗ್ಲೇ ಕೆಜಿಎಫ್ ಟೀಂನಿಂದ ಮತ್ತೊಂದು ಬಿಗ್ ಬ್ರೇಕಿಂಗ್ ನ್ಯೂಸ್ ಬಂದಿದೆ. ಈ ಬ್ಯಾಂಗಿಂಗ್ ನ್ಯೂಸ್​ಗೆ ಇಡೀ ಭಾರತೀಯ ಚಿತ್ರರಂಗ ಬೆಚ್ಚಿ ಬೆರಗಾಗಿದೆ.

ದಾಖಲೆ ಮೊತ್ತಕ್ಕೆ ಕೆಜಿಎಫ್ ಆಡಿಯೋ ರೈಟ್ಸ್ ಸೋಲ್ಡ್ ಔಟ್

ಬಾಹುಬಲಿಯನ್ನ ಮೀರಿಸಿದ ರಾಕಿಂಗ್ ಸ್ಟಾರ್ ಯಶ್ KGF

KGF Audio Songs

ಹೌದು... ಇದು ಅಕ್ಷರಶಃ ನಿಜ. ಕನ್ನಡ ಚಿತ್ರರಂಗದಲ್ಲಿ ಟಿಲ್ ಡೇಟ್ ಎಲ್ಲಾ ಆಡಿಯೋ ದಾಖಲೆಗಳನ್ನ ಬ್ರೇಕ್ ಮಾಡಿದಂತಹ ಕೀರ್ತಿ ಹೆಗ್ಗಳಿಕೆ ಯಶ್ ಕೆಜಿಎಫ್​ಗಿದೆ. ಸೌತ್ ಸಿನಿದುನಿಯಾದ ಪ್ರತಿಷ್ಠಿತ ಆಡಿಯೋ ಕಂಪನಿ ಲಹರಿ ಮುಡಿಗೆ ಕೆಜಿಎಫ್ ಆಡಿಯೋ ರೈಟ್ಸ್ ಸಂದಿದೆ. ಅದೂ ದಾಖಲೆಯ ಮೊತ್ತಕ್ಕೆ ಅನ್ನೋದು ವಿಶೇಷ.

ಟ್ರೈಲರ್​ನಿಂದಲೇ ಎಲ್ಲಿಲ್ಲದ ಕ್ಯೂರಿಯಾಸಿಟಿ ಮೂಡಿಸಿದ್ದ ಕೆಜಿಎಫ್ ಏಟಿಗೆ ಇಡೀ ಇಂಡಿಯನ್ ಇಂಡಸ್ಟ್ರಿ ಬೆಚ್ಚಿ ಬಿದ್ದಿತ್ತು. ವಿತರಣೆಗಾಗಿ ನಾಮುಂದು ತಾಮುಂದು ಅಂತ ದೊಡ್ಡ ದೊಡ್ಡ ಡಿಸ್ಟ್ರಿಬ್ಯೂಷನ್ ಕಂಪೆನಿಗಳು ಮುಗಿಬಿದ್ದಿದ್ದು ಗೊತ್ತೇಯಿದೆ. ಅದ್ರಂತೆ ಈಗ ಆಡಿಯೋ ರೈಟ್ಸ್ ಕೂಡ ಎಲ್ಲರು ಹುಬ್ಬೇರಿಸೋ ರೇಂಜ್​ಗೆ ಸೇಲ್ ಆಗಿದೆ. ಅದೂ ರಾಜಮೌಳಿಯ ಬಾಹುಬಲಿಯನ್ನ ಮೀರಿಸೋ ರೇಂಜ್​ಗೆ ಕೆಜಿಎಫ್ ಆಡಿಯೋ ರೈಟ್ಸ್ ಸೋಲ್ಡ್ ಔಟ್ ಆಗಿರೋದು ಹೊಸ ಮೈಲಿಗಲ್ಲು ಅನಿಸಿದೆ. ಇದು ಸಂಗೀತ ನಿರ್ದೇಶಕ ರವಿಬಸ್ರೂರು ಕರಿಯರ್​ನ ಪ್ರೌಡ್ ಮೊಮೆಂಟ್.

3ಕೋಟಿ 60ಲಕ್ಷ ದಾಖಲೆ ಮೊತ್ತಕ್ಕೆ ಕೆಜಿಎಫ್ ಆಲ್ಬಮ್..!!

ಬಾಹುಬಲಿಯ 2ಕೋಟಿ 25ಲಕ್ಷ ರೆಕಾರ್ಡ್​ ಉಡೀಸ್..!!

ಯೆಸ್.... ಲಹರಿ ಆಡಿಯೋ ಸಂಸ್ಥೆ ಈವರೆಗೂ ಖರೀದಿ ಮಾಡಿರದ ರೇಟ್​ಗೆ ಕೆಜಿಎಫ್ ರೈಟ್ಸ್​ನ ಖರೀದಿ ಮಾಡಿದೆ. ಅಂದ್ರೆ, ಬರೋಬ್ಬರಿ 3ಕೋಟಿ, 60ಲಕ್ಷ ಬೃಹತ್ ಮೊತ್ತಕ್ಕೆ ಕೆಜಿಎಫ್​ನ ತಮ್ಮ ಅಕೌಂಟ್​ಗೆ ಹಾಕಿಕೊಂಡಿದೆ ಲಹರಿ ಸಂಸ್ಥೆ. ಇನ್ನು ಲಹರಿ ಕಂಪೆನಿ ಇಲ್ಲಿಯವರೆಗೂ 1992ರಲ್ಲಿ ದಳಪತಿ ಚಿತ್ರಕ್ಕೆ 75 ಲಕ್ಷ ಕೊಟ್ಟು ಆಡಿಯೋ ಖರೀದಿಸಿತ್ತು. ಅದಾದ ಬಳಿಕ ಇತ್ತೀಚೆಗೆ ರಾಜಮೌಳಿಯ ಬಾಹುಬಲಿ ಚಿತ್ರಕ್ಕೆ 2ಕೋಟಿ 25ಲಕ್ಷ ನೀಡಿತ್ತು. ಆದ್ರೀಗ ಬಾಹುಬಲಿಯನ್ನೂ ಮೀರಿಸುವಂತಹ ಬೆಲೆಗೆ ಅಂದ್ರೆ 3ಕೋಟಿ 60 ಲಕ್ಷಕ್ಕೆ ಯಶ್ ಕೆಜಿಎಫ್ ಆಡಿಯೋ ಖರೀದಿಸಿದೆ.

ಈ ಕುರಿತು TV5 ಜೊತೆ ಮಾತನಾಡಿದ ಲಹರಿ ಆಡಿಯೋ ಸಂಸ್ಥೆಯ ಮುಖ್ಯಸ್ಥ ಲಹರಿ ವೇಲು, ಇದು ನಮ್ಮ ಸಂಸ್ಥೆಯ ಹೆಮ್ಮೆ ಅನ್ನೋದಕ್ಕಿಂತ ಹೆಚ್ಚಾಗಿ ಕನ್ನಡ ಚಿತ್ರರಂಗದ ಹೆಮ್ಮೆ ಅಂತ ಸಂತಸ ಹಂಚಿಕೊಂಡರು.

ಇದು ಪ್ರತಿಯೊಬ್ಬ ಕ್ನನಡಿಗ ಹೆಮ್ಮೆ ಪಡಬೇಕಾದ ವಿಷ್ಯ ಅನ್ನೋದಕ್ಕಿಂತ ಹೆಚ್ಚಾಗಿ, ನಮ್ಮ ಕನ್ನಡ ಚಿತ್ರರಂಗದ ಮಾರುಕಟ್ಟೆ ದಿನದಿಂದ ದಿನಕ್ಕೆ ವಿಸ್ತಾರವಾಗ್ತಿದೆ. ಊಹೆಗೂ ನಿಲುಕದ ರೇಂಜ್​ಗೆ ಬೆಳೆಯುತ್ತಿದೆ ಅನ್ನೋದು ಖುಷಿಯ ವಿಚಾರ. ಸದ್ಯ ಹಿಂದಿ ಹೊರತುಪಡಿಸಿ, ತೆಲುಗು, ಕನ್ನಡ, ತಮಿಳು ಹಾಗೂ ಮಲಯಾಳಂ ಆಡಿಯೋ ಹಕ್ಕುಗಳನ್ನ ಮುಡಿಗೇರಿಸಿಕೊಂಡಿರೋ ಲಹರಿ ಕಂಪೆನಿ, ಇದೇ ನವೆಂಬರ್ 30ಕ್ಕೆ ಕೆಜಿಎಫ್ ಆಲ್ಬಮ್​ನ ಮೊದಲ ಸಾಂಗ್ ಲಾಂಚ್ ಮಾಡೋ ಸ್ವೀಟ್ ನ್ಯೂಸ್ ಕೊಟ್ಟಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್, ಟಿವಿ5

Next Story

RELATED STORIES