ಚಳಿಗಾಲಕ್ಕೆ ಹೇಳಿ ಮಾಡಿಸಿದಂತಿದೆ ಈ ಕಷಾಯ

ಬೇಕಾಗುವ ಸಾಮಗ್ರಿ: 3 ಸ್ಪೂನ್ ಜೀರಿಗೆ, 1 ಸ್ಪೂನ್ ಕಾಳು ಮೆಣಸು, 1ಸ್ಪೂನ್ ಕೊತ್ತೊಂಬರಿ ಕಾಳು, 1ಸ್ಪೂನ್ ಒಮಕಾಳು, ಅರ್ಧ ಸ್ಪೂನ್ ಶುಂಠಿಪುಡಿ ಅಥವಾ ತುರಿದ ಶುಂಠಿ, ಅರ್ಧ ಸ್ಪೂನ್ ಅರಶಿನಪುಡಿ, ಒಂದು ಸ್ಪೂನ್ ಬೆಲ್ಲ, ಒಂದು ದೊಡ್ಡ ಗ್ಲಾಸ್ ನೀರು.

ಮಾಡುವ ವಿಧಾನ: ಜೀರಿಗೆ, ಕಾಳುಮೆಣಸು, ಕೊತ್ತೊಂಬರಿ ಕಾಳು, ಒಮಕಾಳು ಸೇರಿಸಿ ಹುರಿದುಕೊಳ್ಳಿ. ಇದಕ್ಕೆ ನೀರು, ಶುಂಠಿಪುಡಿ, ಅರಶಿನಪುಡಿ ಹಾಕಿ 15-20 ನಿಮಿಷ ಕುದಿಸಿ, ಕೊನೆಗೆ ಬೆಲ್ಲ ಹಾಕಿ, ಅದು ಕರಗುವವರೆಗೂ ಕದಡಿ. ನಂತರ ಸೋಸಿ ಕುಡಿಯಿರಿ.

ಇದು ನೆಗಡಿ ಕೆಮ್ಮು ಇರುವವರು ತೆಗೆದುಕೊಳ್ಳಬಹುದು. ಅಥವಾ ವಾರಕ್ಕೆ ಒಮ್ಮೆ ಸೇವಿಸಬಹುದು. ಪ್ರತಿದಿನ ಈ ಕಷಾಯ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

ಬೆಳಿಗ್ಗೆ ಈ ಕಷಾಯ ಸೇವಿಸಿ, ಅರ್ಧಗಂಟೆ ಬಳಿಕ ತಿಂಡಿ ತಿನ್ನಬಹುದು. ಇಲ್ಲವೇ ರಾತ್ರಿ ಊಟವಾದ ಮೇಲೆ ಸ್ವಲ್ಪ ಹೊತ್ತು ಬಿಟ್ಟು ಮಲಗುವ ಮುನ್ನ ಸೇವಿಸಬಹುದು.