Top

ಬೆಂಗಳೂರಿಗೆ ನುಸುಳಿದ್ದಾರಾ ಜೈಶೆ ಉಗ್ರರು?

ಬೆಂಗಳೂರಿಗೆ ನುಸುಳಿದ್ದಾರಾ ಜೈಶೆ ಉಗ್ರರು?
X

ಭಾರತದ ಗಡಿಯೊಳಗೆ ನುಸುಳಿರುವ 6 ಉಗ್ರರ ಪೈಕಿ ಇಬ್ಬರು ಬೆಂಗಳೂರಿಗೆ ಆಗಮಿಸಿದ್ದಾರೆ ಎಂಬ ಗುಪ್ತಚರ ಇಲಾಖೆ ಮಾಹಿತಿ ಹಿನ್ನೆಲೆಯಲ್ಲಿ ರಾಜ್ಯದ ಪೊಲೀಸರು ಅಲರ್ಟ್ ಆಗಿದ್ದಾರೆ.

ದೆಹಲಿಗೆ ಆಗಮಿಸಿದ್ದ 6 ಉಗ್ರರ ತಂಡದ ಪೈಕಿ ಇಬ್ಬರು ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶದ ಎಟಿಎಸ್ ಮತ್ತು ದೆಹಲಿ‌ ಪೊಲೀಸರು ಬೆಂಗಳೂರಿಗೆ ಆಗಮಿಸಿದ್ದಾರೆ.

ಬೆಂಗಳೂರು ಪೊಲೀಸರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆದಿದ್ದು, ಪರಪ್ಪನ ಅಗ್ರಹಾರದ ಜೈಲಿಗೆ ಭೇಟಿ ನೀಡಿ ತನಿಖೆ ಆರಂಭಿಸಿದೆ.

ಬೆಂಗಳೂರಿಗೆ ಬಂದಿರುವ ಇಬ್ಬರು ಉಗ್ರರು ಜೈಶೆ-ಇ- ಮೊಹಮ್ಮದ್ ಸಂಘಟನೆಗೆ ಸೇರಿದವರು ಎಂದು ಹೇಳಲಾಗಿದ್ದು, ಮೈಸೂರಿನಲ್ಲಿ ಬಂಧಿಸಲಾದ ಫಹಾದ್ ಎಂಬ ಉಗ್ರರನ ವಿಚಾರಣೆ ನಡೆದಿದೆ.

ಪಾಕಿಸ್ತಾನ ಉಗ್ರ ಮೊಹಮದ್ ಆಲಿ ಹುಸೇನ್ ಜೊತೆ ಸಂಪರ್ಕ ಹೊಂದಿರುವ ಮೊಹಮದ್ ಫಯಾದ್, ಮಹಮದ್ ಕೋಯಾ ಆಲ್ ಬದರ್ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ. 2006 ಮೈಸೂರಿನಲ್ಲಿ ಈತನನ್ನು ಬಂಧಿಸಲಾಗಿದ್ದು, ಈತನ ಬಳಿ ಮಾಹಿತಿ ಸಂಗ್ರಹ ಕಾರ್ಯ ನಡೆದಿದೆ.

Next Story

RELATED STORIES