ಬನಶಂಕರಿ to ಸದಾಶಿವನಗರದತ್ತ 'ಬಹದ್ದೂರ್ ಗಂಡು' ಧ್ರುವ..!!

ಬೆಂಗಳೂರು: ಸ್ಯಾಂಡಲ್ವುಡ್ ನ ಸ್ಟಾರ್ ನಟನಿಗೆ ವಾಸ್ತು ಸಮಸ್ಯೆ ಎದುರಾಗಿದೆಯಂತೆ. ಈ ಕಾರಣಕ್ಕಾಗಿ ಆ ನಟ ವಾಸ್ತು ಪ್ರಕಾರ ಮನೆ ಶಿಫ್ಟ್ ಮಾಡೋಕ್ಕೆ ನಿರ್ಧರಿಸಿದ್ದಾರಂತೆ. ಆ ನಟ ಬೇರಾರೂ ಅಲ್ಲ. ಸ್ಯಾಂಡಲ್ವುಡ್ನ ಅದ್ಧೂರಿ ಹುಡುಗ ಧ್ರುವ ಸರ್ಜಾ.
ಹಸೆಮಣೆ ಏರಲು ಸಿದ್ಧರಾಗಿರುವ ನಟ ಧ್ರುವ ಸರ್ಜಾಗೆ ಈಗ ವಾಸ್ತುದೋಷ ಕಾಡುತ್ತಿದೆಯಂತೆ. ಈ ಕಾರಣಕ್ಕಾಗಿ ಧ್ರುವ ಎಂಗೇಜ್ಮೆಂಟ್ ಆಗ್ತಿದ್ದಂಗೆ ಮನೆ ಶಿಫ್ಟ್ ಮಾಡೋ ಪ್ಲಾನ್ನಲ್ಲಿದ್ದಾರೆ.
ಬೆಂಗಳೂರಿನ ಕೆ.ಆರ್.ರಸ್ತೆಯಲ್ಲಿರುವ ಮನೆಯಿಂದ ಧ್ರುವ ಸದಾಶಿವನಗರದತ್ತ ಪಯಣ ಬೆಳೆಸಲಿದ್ದಾರೆ. ಸದ್ಯ ಸದಾಶಿವನಗರದಲ್ಲಿ 2 ಲಕ್ಷ ಬಾಡಿಗೆ ಇರುವ ಹೊಸ ಬಂಗಲೆ ನೋಡಿದ್ದು, ಆರತಕ್ಷತೆ ನಂತರ ಹೊಸ ಮನೆಗೆ ಧ್ರುವ ಶಿಫ್ಟ್ ಆಗಲಿದ್ದಾರೆ.
ಆದ್ರೆ ಇನ್ನೊಂದೆಡೆ ಹಸೆಮಣೆ ಏರಲು ಮುಂದಾಗಿರುವ ಧ್ರುವ ಖಾಸಗಿ ಜೀವನಕ್ಕಾಗಿ ಮನೆ ಚೇಂಜ್ ಮಾಡ್ತಿದ್ದಾರೆಂಬ ಮಾತು ಕೇಳಿಬಂದಿದೆ. ತಾವು ಮದುವೆಯಾಗಲಿರುವ ಹುಡುಗಿ ಪ್ರೇರಣಾ ಮನೆ ಕೂಡ ಧ್ರುವ ಮನೆ ಬಳಿಯೇ ಇದೆ. ಅಲ್ಲದೇ ಚಿರು- ಮೇಘನಾ ಮನೆ ಕೂಡ ಸಮೀಪದಲ್ಲೇ ಇದೆ. ಈ ಕಾರಣಕ್ಕಾಗಿ ಧ್ರುವ ಒಂದೇ ಕಡೆ ಎಲ್ಲರೂ ಇರೋದು ಬೇಡ ಎಂದು ಈ ನಿರ್ಧಾರ ಮಾಡಿದ್ದಾರಾ ಎಂಬ ಪ್ರಶ್ನೆ ಮೂಡಿದೆ.