Top

ಮತ್ತೆ ಅಭಿಮಾನಿಗಳೇ ನಮ್ಮನೆ ದೇವ್ರು ಅಂದ್ರು ರಾಜರತ್ನ ಅಪ್ಪು..!

ಮತ್ತೆ ಅಭಿಮಾನಿಗಳೇ ನಮ್ಮನೆ ದೇವ್ರು ಅಂದ್ರು ರಾಜರತ್ನ ಅಪ್ಪು..!
X

ದೊಡ್ಮನೆ ರಾಜಕುಮಾರರು, ತಂದೆಯ ಹಾದಿಯಲ್ಲಿ ಅಭಿಮಾನಿಗಳನ್ನು ಪ್ರೀತಿಸುತ್ತಾ ಬರ್ತಿದ್ದಾರೆ. ಅಭಿಮಾನಿಗಳ ಅಭಿಮಾನಕ್ಕೆ ಕರಗಿ ನೀರಾಗಿ ಹೋಗ್ತಾರೆ. ಅಭಿಮಾನಿಗಳ ಜೊತೆ ಬೆರತು ಖುಷಿ ಪಡ್ತಾರೆ. ಅಭಿಮಾನಿಗಳನ್ನು ಎಂದಿಗೂ ಮರೆಯೋದಿಲ್ಲ.

ಮತ್ತೆ ಅಭಿಮಾನಿಗಳೇ ನಮ್ಮನೆ ದೇವ್ರು ಅಂದ್ರು ರಾಜರತ್ನ ಅಪ್ಪು..!

ಅಭಿಮಾನಿಗಳಿಗಾಗಿ ಪವರ್ ಸ್ಟಾರ್ ನಟಸಾರ್ವಭೌಮ ಚಾಲೆಂಜ್..!

ಪವನ್ ಒಡೆಯರ್- ಪುನೀತ್ ಕ್ರೇಜಿ ಕಾಂಬಿನೇಷನ್​ನಲ್ಲಿ ನಟಸಾರ್ವಭೌಮ ಸಿನಿಮಾ ಬರ್ತಿರೋದು ಗೊತ್ತೇಯಿದೆ. ಇತ್ತೀಚೆಗೆ ಶೂಟಿಂಗ್ ಕಂಪ್ಲೀಟ್ ಮಾಡಿದ ಚಿತ್ರತಂಡ ಸದ್ಯ ಪೋಸ್ಟ್​​ ಪ್ರೊಡಕ್ಷನ್​ನಲ್ಲಿ ಬ್ಯುಸಿಯಿದ್ದು, ಆಡಿಯೋ ಲಾಂಚ್​ಗೆ ಭರ್ಜರಿ ಪ್ಲಾನ್ ಮಾಡ್ತಿದೆ. ಅಭಿಮಾನಿಗಳಿಂದಲೇ ನಟಸಾರ್ವಭೌಮ ಆಲ್ಬಮ್ ಲಾಂಚ್​ಗೆ ಪ್ಲಾನ್ ನಡೀತಿದೆ. ನಟಸಾರ್ವಭೌಮ ಚಾಲೆಂಜ್​ನಲ್ಲಿ ಗೆದ್ದವರು, ಅಪ್ಪು ಜೊತೆ ಆಡಿಯೋ ಲಾಂಚ್ ವೇದಿಕೆ ಹಂಚಿಕೊಳ್ಳಬಹುದು.

ಏನಿದು ನಟಸಾರ್ವಭೌಮ ಸಿನಿಮಾ ಟೈಟಲ್ ಚಾಲೆಂಜ್ ..?

ಅಪ್ಪು ಚಾಲೆಂಜ್​​ಗೆ ಹೇಗಿದೆ ಗೊತ್ತಾ ಅಭಿಮಾನಿಗಳ ರೆಸ್ಪಾನ್ಸ್..?

ಪುನೀತ್​ ರಾಜ್​ಕುಮಾರ್ ಬರ್ತ್​ಡೇ ಸಂಭ್ರಮದಲ್ಲಿ ರಿಲೀಸ್​ ಆದ ನಟಸಾರ್ವಭೌಮ ಫಸ್ಟ್ ಲುಕ್ ಟೀಸರ್ ಎಲ್ಲರಿಗೂ ಗೊತ್ತೇಯಿದೆ.. ಪವರ್ ಸ್ಟಾರ್ ಕ್ಯಾಮರಾಗಳ ಮುಂದೆ ಖಡಕ್ ಲುಕ್​ನಲ್ಲಿ ಸನ್ ಕ್ಲಾಸ್​​ ಹಾಕಿಕೊಳ್ಳೊ ಸಣ್ಣ ಝಲಕ್ ಅದು.. ಥೇಟ್ ಇದೇ ಮಾದರಿಯಲ್ಲಿ ಅಭಿಮಾನಿಗಳು ವೀಡಿಯೋ ಮಾಡಿ ಶೇರ್ ಮಾಡುವಂತೆ ಅಪ್ಪು ಹೇಳಿದ್ದಾರೆ.

ನಟಸಾರ್ವಭೌಮ ಚಾಲೆಂಜ್​ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಅಭಿಮಾನಿಗಳು ಈಗಾಗಲೇ ತಮ್ಮದೇ ಸ್ಟೈಲ್​ನಲ್ಲಿ ನಟಸಾರ್ವಭೌಮ ರೀತಿ ಕಮಾಲ್ ಮಾಡ್ತಿದ್ದಾರೆ. ನಟಸಾರ್ವಭೌಮ ಪುನೀತ್​ ರೀತಿ ಹೇರ್​ ಸ್ಟೈಲ್​​ ಮಾಡ್ಕೊಡು ಅವ್ರನ್ನ ಇಮಿಟೇಟ್ ಮಾಡಿ ವೀಡಿಯೋ ಶೇರ್ ಮಾಡ್ತಿದ್ದಾರೆ.

ಪುಟಾಣಿ ಮಕ್ಕಳು ಕೂಡ ನಟಸಾರ್ವಭೌಮ ಅವತಾರದಲ್ಲಿ ಕಾಣಿಸಿಕೊಂಡಿರೋ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ಲಾಗಿದೆ. ಒಟ್ಟಾರೆ ಅಪ್ಪು ಚಾಲೆಂಜ್​ಗೆ ಭರ್ಜರಿ ಪ್ರತಿ ಸಿಕ್ಕಿದ್ದು, ಆಡಿಯೋ ಲಾಂಚ್​ನಲ್ಲಿ ವೇದಿಕೆಯಲ್ಲಿ ಕಾಣಿಸಿಕೊಳ್ಳೋ ಅದೃಷ್ಟ ಯಾರಿಗೆ ಸಿಗುತ್ತೋ ನೋಡ್ಬೇಕು.

ಇನ್ನೂ ಪವನ್ ಒಡೆಯರ್ ನಿರ್ದೇಶನದ ಆಕ್ಷನ್ ಎಂಟ್ರಟ್ರೈನರ್ ನಟಸಾರ್ವಭೌಮ.. ಚಿತ್ರದಲ್ಲಿ ರಚಿತಾ ರಾಮ್, ಅನುಪಮಾ ನಾಯಕಿಯರಾಗಿ ಮಿಂಚಿದ್ದು, ಚಿಕ್ಕಣ್ಣ, ರವಿಶಂಕರ್, ಬಿ. ಸರೋಜಾದೇವಿ ಸೇರಿ ಭಾರೀ ತಾರಾಗಣ ಚಿತ್ರದಲ್ಲಿ.. ರಾಕ್​ಲೈನ್​ ವೆಂಕಟೇಶ್ ನಿರ್ಮಾಣದ ಈ ಅದ್ದೂರಿ ಚಿತ್ರಕ್ಕೆ ಡಿ ಇಮ್ಮಾನ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.. ಜನವರಿ ವೇಳೆಗೆ ಸಿನಿಮಾ ತೆರೆಗೆ ಬರಲಿದೆ.

Next Story

RELATED STORIES