Top

ಟ್ರೆಂಡ್ ಕ್ರಿಯೇಟ್​ ಮಾಡಿತ್ತು ಶಿವಣ್ಣನ ಗೆಟಪ್ಪು, ಸ್ಟೈಲು

ಟ್ರೆಂಡ್ ಕ್ರಿಯೇಟ್​ ಮಾಡಿತ್ತು ಶಿವಣ್ಣನ ಗೆಟಪ್ಪು, ಸ್ಟೈಲು
X

ಕರುನಾಡ ಚಕ್ರವರ್ತಿ ಡಾ. ಶಿವರಾಜ್​ಕುಮಾರ್ ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ. ಯಾವುದೇ ಪಾತ್ರ ಆದರು ಪರಕಾಯ ಪ್ರವೇಶ ಮಾಡಿ ಬಿಡುವ ಚತುರ. ಕಣ್ಣುಗಳಲ್ಲೇ ಮಾತನಾಡುವ ಸಮರ್ಥ ನಟ. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ಮಫ್ತಿ ಚಿತ್ರದ ಭೈರತಿ ರಣಗಲ್ಲು ಪಾತ್ರ. ಇಂತ ಶಿವಣ್ಣ ಕಣ್ಣುಗಳಿಲ್ಲದೇ ಅಂಧನಾಗಿ ನಟಿಸಿದರು, ಅದು ಮತ್ತೊಂದು ಅದ್ಭುತ.

ಕನ್ನಡ ಚಿತ್ರರಂಗದ ಅದ್ಭುತ ನಟ ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್. 100ಕ್ಕೂ ಅಧಿಕ ಸಿನಿಮಾಗಳಲ್ಲಿ ತರಹೇವಾರಿ ಪಾತ್ರಗಳನ್ನು ಮಾಡಿ ಸೈ ಅನ್ನಿಸಿಕೊಂಡಿರೋ ಅಭಿಮಾನಿಗಳ ನೆಚ್ಚಿನ ಕರುನಾಡ ಚಕ್ರವರ್ತಿ. ಶಿವಣ್ಣನ ಅಭಿನಯ ಚಾಕಚಕ್ಯತೆಗೆ ಶಿವಣ್ಣನೇ ಸಾಟಿ. ಕಣ್ಣುಗಳಲ್ಲೇ ಭಾವನೆಗಳನ್ನು ವ್ಯಕ್ತಪಡಿಸುವ ಅವರು ಪ್ರತಿಭೆಗೆ ಅಭಿಮಾನಿಗಳು ಫಿದಾ ಆಗೋಗಿದ್ದಾರೆ.

ಕಣ್ಣುಗಳಲ್ಲೇ ಚಮತ್ಕಾರ ಮಾಡಿದ್ದ ಭೈರತಿ ರಣಗಲ್ಲು

ಟ್ರೆಂಡ್ ಕ್ರಿಯೇಟ್​ ಮಾಡಿತ್ತು ಶಿವಣ್ಣನ ಗೆಟಪ್ಪು, ಸ್ಟೈಲು

ಇತ್ತೀಚಿನ ವರ್ಷಗಳಲ್ಲಿ ಪ್ರೇಕ್ಷಕರನ್ನು ಬಹಳ ಕಾಡಿದ ಶಿವಣ್ಣನ ಪಾತ್ರ ಭೈರತಿ ರಣಗಲ್ಲು. ನರ್ತನ್ ನಿರ್ದೇಶನ ಮಫ್ತಿ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯಿತು. ಅದ್ರಲ್ಲೂ ಶಿವಣ್ಣನ ಭೈರತಿ ರಣಗಲ್ಲು ಪಾತ್ರ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಶಿವಣ್ಣ ನೆಗೆಟಿವ್ ಶೇಡ್​ ರೋಲ್​ನಲ್ಲಿ ಕಾಣಿಸಿಕೊಂಡ ಸಿನಿಮಾ ಅದು. ಶಿವಣ್ಣನ ಗೆಟಪ್, ಸ್ಟೈಲ್, ಕಣ್ಣುಗಳಲ್ಲೇ ಎದುರಾಳಿಗಳನ್ನ ಕೊಲ್ಲುವ ಪರಿ ವಾಹ್.

ಭೈರತಿ ರಣಗಲ್ಲು ಪಾತ್ರಕ್ಕೆ ಕಡಿಮೆ ಡೈಲಾಗ್​ಗಳನ್ನ ಕೊಟ್ಟು, ಬರೀ ಶಿವಣ್ಣನ ಕಣ್ಣುಗಳೇ ನಟಿಸುವಂತೆ ಮಾಡಿದ್ರು.. ನರ್ತನ್​ ಐಡಿಯಾ ವರ್ಕ್​ಔಟ್ ಆಗಿತ್ತು. ಶಿವಣ್ಣ ಕಣ್ಣುಗಳಲ್ಲೇ ವಿಲನಿಸಂ ಮತ್ತು ಹೀರೋಯಿಸಂ ಪ್ರದರ್ಶಿಸಿ, ಸೂಪರ್ ಸಕ್ಸಸ್​ ಕಂಡರು. ಭೈರತಿ ರಣಗಲ್ಲು ಪಾತ್ರಕ್ಕೆ ಅಭಿಮಾನಿಗಳು ಹುಟ್ಟಿಕೊಂಡ್ರು ಅಂದರೆ ತಪ್ಪಾಗಲ್ಲ.

ಐಯ್ಯಾಮ್ ಬ್ಲೈಂಡ್​.. ಬಟ್ ನಾಟ್ ವೀಕ್..!!

ಕವಚ ಚಿತ್ರಕ್ಕಾಗಿ ಹೊಸ ಅವತಾರ ತಾಳಿದ ಶಿವಣ್ಣ

ಶಿವರಾಜ್​ಕುಮಾರ್ ಅಭಿನಯದ ಅಪ್​ಕಮ್ಮಿಂಗ್ ಸಿನಿಮಾ ಕವಚ.. ಜಿವಿಆರ್ ವಾಸು ನಿರ್ದೇಶನದ ಕ್ರೈಂ ಥ್ರಿಲ್ಲರ್. ಬಹಳ ವರ್ಷಗಳ ನಂತರ ಸ್ವತ: ಶಿವಣ್ಣ ಇಷ್ಟಪಟ್ಟು ಮಾಡಿರೋ ರೀಮೇಕ್ ಸಿನಿಮಾ. ಮಫ್ತಿ ಸಿನಿಮಾದಲ್ಲಿ ಬರೀ ಕಣ್ಣುಗಳಲ್ಲೇ ನಟಿಸಿ, ಸೈ ಅನ್ನಿಸಿಕೊಂಡಿದ್ದ ಶಿವಣ್ಣ ಕವಚ ಚಿತ್ರದಲ್ಲಿ ಅಂಧನಾಗಿ ದರ್ಶನ ಕೊಟ್ಟಿದ್ದಾರೆ. ಇಲ್ಲಿ ಕತೆಯ ನಾಯಕ ಅಂಧ. ಜಗತ್ತು ಕಾಣದಿದ್ದರೂ ಚಲನವಲನ, ದೈಹಿಕವಾಗಿ ಆತ ಬಲಶಾಲಿ.

ಮಫ್ತಿ ಸಿನಿಮಾದಲ್ಲಿ ಕಣ್ಣುಗಳನ್ನೇ ಅಭಿನಯದ ತೀವ್ರತೆಯನ್ನು ಪ್ರದರ್ಶಿಸಿದ್ದ ಶಿವಣ್ಣ ಇಲ್ಲಿ ಕಣ್ಣುಗಳಿಲ್ಲದೇ ಅಭಿನಯಿಸಿ ಗೆಲ್ಲೋ ಸೂಚನೆ ಕೊಟ್ಟಿದ್ದಾರೆ. ಈಪಾತ್ರವನ್ನು ಶಿವಣ್ಣ ಮಾತ್ರ ಮಾಡೋಕೆ ಸಾಧ್ಯ ಅಂತ ನಿರ್ದೇಶಕರು ಅವರನ್ನು ಒಪ್ಪಿಸಿ, ಸಿನಿಮಾ ಮಾಡಿದ್ದಾರೆ.. ಅಂಧನಾಗಿಯೋ ಆಕ್ಷನ್ ಸೀನ್​ಗಳಲ್ಲಿ ಅಬ್ಬರಿಸಿದ್ದಾರೆ.. ಟೀಸರ್​ನಲ್ಲಿ ಶಿವಣ್ಣನನ್ನ ನೋಡ್ತಿದ್ರೆ, ಕವಕ ಸಿನಿಮಾ ಹಿಟ್ ಲಿಸ್ಟ್ ಸೇರೋ ಸುಳಿವು ಸಿಕ್ಕಿದೆ..

ಎಂ.ವಿ.ವಿ. ಸತ್ಯನಾರಾಯಣ ಮತ್ತು ಎ. ಸಂಪತ್‌ ಕುಮಾರ್‌ ನಿರ್ಮಾಣದ ಕವಚ ಚಿತ್ರದಲ್ಲಿ ಇಶಾ ಕೊಪ್ಪಿಕರ್, ಬೇಬಿ ಮೀನಾಕ್ಷಿ, ತಬಲ ನಾಣಿ, ವಸಿಷ್ಠ ಸಿಂಹ, ರವಿ ಕಾಳೆ ಬಣ್ಣ ಹಚ್ಚಿದ್ದಾರೆ.. ಅರ್ಜುನ್​ ಜನ್ಯಾ ಕವಚ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದು ಈಗಾಗಲೇ ಲಿರಿಕಲ್ ಸಾಂಗ್ಸ್​​ ಧೂಳೆಬ್ಬಿಸಿದೆ.. ಡಿಸೆಂಬರ್​ನಲ್ಲಿ ಕವಚ ಸಿನಿಮಾ ತೆರೆಗೆ ಬರ್ತಿದ್ದು, ಪ್ರೇಕ್ಷಕರನ್ನ ರಂಜಿಸೋದು ಗ್ಯಾರೆಂಟಿ

Next Story

RELATED STORIES