Top

ಇಂಗ್ಲೆಡ್ ವಿರುದ್ಧ ಮುಗ್ಗರಿಸಿದ ಭಾರತ

ಇಂಗ್ಲೆಡ್ ವಿರುದ್ಧ ಮುಗ್ಗರಿಸಿದ ಭಾರತ
X

ಐಸಿಸಿ ಮಹಿಳಾ ವಿಶ್ವ ಟಿ20 ಟೂರ್ನಿಯ ದ್ವಿತೀಯ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಎಂಟು ವಿಕೆಟುಗಳ ಅಂತರದ ಸೋಲನುಭವಿಸಿರುವ ಭಾರತ ತಂಡದ ವಿಶ್ವಕಪ್ ಕನಸು ಭಗ್ನಗೊಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ 19.3 ಓವರ್‌ಗಳಲ್ಲಿ 112 ರನ್‌ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿತು. ಒಂದು ಹಂತದಲ್ಲಿ 13.4 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 89 ರನ್ ಗಳಿಸಿ ಸುಸ್ಥಿತಿಯಲ್ಲಿದ್ದ ಭಾರತ 112 ರನ್‌ ಗಳಿಸುವುದೆರೆಡೆಗೆ ಸರ್ವ ಪತನವನ್ನು ಕಂಡಿತ್ತು. ಈ ಮೂಲಕ ಕೊನೆಯ 23 ರನ್ ಪೇರಿಸುವುದರೆಡೆಗೆ ಏಳು ವಿಕೆಟುಗಳನ್ನು ಕಳೆದುಕೊಂಡಿತು. ಭಾರತದ ಪರ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನಾ 23 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 34 ರನ್ ಗಳಿಸಿದರು.

ಇವರಿಗೆ ಉತ್ತಮ ಸಾಥ್ ನೀಡಿದ ಜೆಮಿಮಾ ರೊಡ್ರಿಗಸ್ ಎಸೆತಕ್ಕೊಂದರಂತೆ ಮೂರು ಬೌಂಡರಿಗಳಿಂದ 26 ರನ್ ಗಳಿಸಿದರು. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲೂ ಇಂಗ್ಲೆಂಡ್ ವಿರುದ್ಧ ಭಾರತ ಮುಗ್ಗರಿಸಿತ್ತು. ಇದರೊಂದಿಗೆ ಸತತ ಎರಡನೇ ಸಾಲಿನಲ್ಲೂ ವಿಶ್ವಕಪ್ ನಷ್ಟವಾಗಿದೆ. ಕಳೆದ ವರ್ಷ ನಡೆದ 50 ಓವರ್‌ಗಳ ವಿಶ್ವಕಪ್‌ ಫೈನಲ್‌ನಲ್ಲಿ ಇಂಗ್ಲೆಂಡ್‌ ತಂಡವು 9 ರನ್‌ಗಳಿಂದ ಭಾರತ ತಂಡವನ್ನು ಸೋಲಿಸಿ ಪ್ರಶಸ್ತಿಗೆ ಭಾಜನವಾಗಿತ್ತು.

Next Story

RELATED STORIES