ಜಾರಕಿಹೊಳಿ ಬ್ರದರ್ಸ್ ಕೋಟೆಯಲ್ಲಿ ಡಿಕೆಶಿ ಹವಾ..!

ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಜಾರಕಿಹೊಳಿ ಬ್ರದರ್ಸ್ ನಡುವೆ ಶುರುವಾಗಿದ್ದ ಪಿಎಲ್ಡಿ ಬ್ಯಾಂಕ್ ಫೈಟ್ ಜಲಸಂಪನ್ಮೂಲ ಸಚಿವ ಡಿ,ಕೆ.ಶಿವಕುಮಾರ್ ಮೇಲಿನ ಮುನಿಸಿಗೂ ಕಾರಣವಾಗಿದೆ.
ಜಲಸಂಪನ್ಮೂಲ ಸಚಿವರು ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಮುಂದಿಟ್ಟುಕ್ಕೊಂಡು ದಾಳ ಉರುಳಿಸ್ತಾ ಇದಾರೆ ಅಂತಾ ಆರೋಪಿಸಿದ್ದ ಜಾರಕಿಹೊಳಿ ಬ್ರದರ್ಸ್ಗೆ ಡಿಕೆಶಿ ಪವರ್ ಫುಲ್ ಶಾಕ್ನ್ನೇ ನೀಡಿದ್ದಾರೆ. ನಿನ್ನೆ ರಾತ್ರಿ ಬೆಳಗಾವಿಗೆ ಆಗಮಿಸಿದ್ದ ಡಿ ಕೆ ಶಿವಕುಮಾರ್, ನೇರವಾಗಿ ರೈತರ ಹೋರಾಟ ಸ್ಥಳಕ್ಕೆ ಎಂಟ್ರಿ ಕೊಟ್ಟರು. ರೈತರ ಅಹವಾಲು ಸ್ವೀಕರಿಸಿ, ಸಮಸ್ಯೆಯನ್ನ ಶೀಘ್ರದಲ್ಲೇ ಬಗೆಹರಿಸೋದಾಗಿ ಮನವಿ ಮಾಡೋದ್ರ ಹೋರಾಟಕ್ಕೆ ತಾತ್ಕಾಲಿಕ ಅಂತ್ಯ ಹಾಡಿದ್ದಾರೆ.
ಸರ್ಕಾರ ಕೊಟ್ಟ ಮಾತು ಮರೆತು ರೈತರ ಹಿತ ಕಾಪಾಡದಿದ್ದರೆ ಚಳಿಗಾಲದ ಅಧಿವೇಶನದಲ್ಲಿ ಮತ್ತೆ ಹೋರಾಟಕ್ಕಿಳಿಯೋದಾಗಿ ಹೋರಾಟಗಾರರು ಎಚ್ಚರಿಕೆ ನೀಡಿದರು.
ಆದ್ರೆ ಬೆಳಗಾವಿಯಲ್ಲಿ ರೈತರ ಜೊತೆ ಡಿಕೆಶಿ ಮಾಡಿಕೊಂಡ ಸಂಧಾನ ಜಾರಕಿಹೊಳಿ ಬ್ರದರ್ಸ್ ಕೋಪಕ್ಕೆ ಕಾರಣವಾಗಿದೆ. ಡಿಕೆಶಿ ಸಂಧಾನ ಮಾಡ್ತಿದ್ದಂತೆ. ಸಹೋದರರನ್ನ ತನ್ನ ನಿವಾಸಕ್ಕೆ ಕರೆಸಿಕೊಂಡು ರಮೇಶ್ ಜಾರಕಿಹೊಳಿ ಚರ್ಚೆ ನಡೆಸಿದ್ದಾರೆ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಂಧಾನ ಮಾತುಕತೆ ಮಾಡದೇ ಇರೋದು ರಮೇಶ್ ಮುನಿಸಿಗೆ ಕಾರಣವಾಗಿದೆ ಎನ್ನಲಾಗಿದೆ.
ಕಬ್ಬು ಬೆಳೆಗಾರರ ವಿಚಾರದಲ್ಲಿ ನಿನ್ನೆ ಕೊರವಂಜಿ ನುಡಿದ ಭವಿಷ್ಯವೇನೋ ನಿಜವಾಗಿದೆ. ಆದರೆ ಈ ಸಂಧಾನ ಡಿ ಕೆ ಶಿವಕುಮಾರ್ - ಜಾರಕಿಹೊಳಿ ಬ್ರದರ್ಸ್ ನಡುವೆ ಇನ್ಯಾವ ಕಾಳಗಕ್ಕೆ ಕಾರಣವಾಗುತ್ತಾ ಅನ್ನೋದನ್ನ ಕಾಲವೇ ಉತ್ತರಿಸಬೇಕಿದೆ.