Top

ಸಿನಿಮಾಗೂ ಮೊದಲೇ ಗಣೇಶ್ ಫ್ಯಾನ್ಸ್​ಗೆ ಸಖತ್​ ಸರ್ಪ್ರೈಸ್

ಸಿನಿಮಾಗೂ ಮೊದಲೇ ಗಣೇಶ್ ಫ್ಯಾನ್ಸ್​ಗೆ ಸಖತ್​ ಸರ್ಪ್ರೈಸ್
X

ಗೋಲ್ಡನ್​ ಸ್ಟಾರ್ ಗಣೇಶ್​ ಸಿನಿಮಾಗಳು ಎಂದರೇ ಎಲ್ಲರಿಗೂ ಕ್ಯೂರಿಯಾಸಿಟಿ ಇದ್ದೇ ಇರುತ್ತೆ. ಚಮಕ್​ ಸಿನಿಮಾ ಸೂಪರ್​ ಹಿಟ್ ಲಿಸ್ಟ್​ ಸೇರಿದ ಮೇಲೆ ಬರೋಬ್ಬರಿ ಒಂದು ವರ್ಷ ಕಳೆದರು ಗಣಿ ಅಭಿನಯದ ಯಾವ ಚಿತ್ರವೂ ತೆರೆಗೆ ಬಂದಿಲ್ಲ. ಇದೀಗ ಆರೆಂಜ್​ ಸಿನಿಮಾ ತೆರೆಗೆ ಬರೋಕ್ಕೆ ರೆಡಿಯಿದ್ದು, ಈಗಾಗ್ಲೇ ಚಿತ್ರದ ಟೀಸರ್ ಮತ್ತು ಲಿರಿಕರ್ ಸಾಂಗ್ಸ್​ ಸಖತ್​ ಸೌಂಡ್​ ಮಾಡ್ತಿವೆ.

ಲವ್​ ಸ್ಟೋರಿ ಜೊತೆಗೆ ಆ್ಯಕ್ಷನ್​ ಧಮಾಕ ಇರುವ ಔಟ್ ಅಂಡ್ ಔಟ್ ಫನ್​ ಎಂಟರ್​ಟೈನರ್ ಚಿತ್ರ. ಹೀಗಾಗಲ್ಚಿಲೇ, ಚಿತ್ರದ ಟೀಸರ್​ ಮತ್ತು ಲಿರಿಕಲ್​ ಸಾಂಗ್ಸ್​ ಮಿಲಿಯನ್ಸ್​ ವೀವ್ಸ್​ ಪಡೆದುಕೊಂಡಿದೆ. ಚಿತ್ರದಲ್ಲಿ ಗಣಿ ಕಲರ್​ಫುಲ್​​ ಕಾಸ್ಟ್ಯೂಮ್ ತೊಟ್ಟು, ಸಖತ್​ ಸ್ಟೈಲಿಶ್ ಲುಕ್​ನಲ್ಲಿ ಮಿಂಚಿದ್ದಾರೆ. ರಾಜಕುಮಾರ ಚಿತ್ರದಲ್ಲಿ ಪವರ್ ಸ್ಟಾರ್​ಗೆ ಜೋಡಿಯಾಗಿದ್ದ ಪ್ರಿಯಾ ಆನಂದ್​, ಗಣಿಗೆ ನಾಯಕಿಯಾಗಿ ಮಿಂಚಿರೋದು ಗೊತ್ತೇಯಿದೆ.

ಈ ಹಿಂದೆ ಪ್ರಶಾಂತ್​ ರಾಜ್​ ಮತ್ತು ಗಣಿ ಕಾಂಬಿನೇಷನ್​ನಲ್ಲಿ ತೆರೆಕಂಡಿದ್ದ ಜೂಮ್​ ಸಿನಿಮಾ ಕೂಡ ಹಿಟ್ ಆಗಿದ್ದು, ಇದೀಗ ಆರೆಂಜ್​ ಮೂಲಕ ಈ ಜೋಡಿ ಮತ್ತೆ ಒಂದಾಗಿದ್ಧಾರೆ. ಹಾಗಾಗಿ ಸಿನಿಮಾ ಮೇಲಿನ ಕ್ಯೂರಿಯಾಸಿಟಿ ಮತ್ತಷ್ಟು ಜಾಸ್ತಿಯಾಗಿದೆ. ಚಮಕ್​ ನಂತರ ಗಣಿ ಆರೆಂಜ್​ ಸಿನಿಮಾಗಾಗಿ ಒಂದು ವರ್ಷ ಟೈಮ್​ ಕೊಟ್ಟಿದ್ದು,ಸಿನಿಮಾ ಅದ್ಬೂತವಾಗಿ ಮೂಡಿಬಂದಿದ್ಯಂತೆ.

ಸದ್ಯ ಆರೆಂಜ್​ ಚಿತ್ರದ ರಿಲೀಸ್​ ಡೇಟ್ ಫೀಕ್ಸ್ ಆಗಿದ್ದು, ಅದಕ್ಕೂ ಮೊದ್ಲು ಇದೇ ಶನಿವಾರ ಸಂಜೆ ಚಿತ್ರದ ಟ್ರೇಲರ್​ ರಿಲೀಸ್ ಆಗ್ತಿದೆ. ಸಿನಿಮಾ ರಿಲೀಸ್​ ಗೂ ಮೊದಲು ಆರೆಂಜ್​ ಚಿತ್ರದ ಟ್ರೇಲರ್​ಗಾಗಿ ಗಣಿ ಫ್ಯಾನ್ಸ್​ ಕಾಯ್ತಿದ್ದಾರೆ.

ಮುಂದಿನ ತಿಂಗಳು ಡಿಸೆಂಬರ್​ ಮೊದಲ ವಾರದಲ್ಲಿ ಆರೆಂಜ್ ಸಿನಿಮಾ ರಿಲೀಸ್ ಆಗ್ತಿದೆ. ಡಿಸೆಂಬರ್​ ಗಣಿಗೆ ಲಕ್ಕಿ ತಿಂಗಳು​ ಅನ್ನಿಸುತ್ತೆ. ಏಕೆಂದರೆ ಈ ಹಿಂದಿನ ಸಾಕಷ್ಟುಹಿಟ್​ ಸಿನಿಮಾಗಳು ಇದಕ್ಕೆ ಸಾಕ್ಷಿಯಾಗಿವೆ. ಗಣಿ ಸಿನಿಕರಿಯರ್​ನ ಬ್ಲಾಕ್​ ಬಸ್ಟರ್ ಹಿಟ್ ಮುಂಗಾರುಮಳೆ ಸಿನಿಮಾ ಡಿಸೆಂಬರ್​ನಲ್ಲಿ ರಿಲೀಸ್​ ಆಗಿದ್ದು ಗೊತ್ತೇಯಿದೆ. ಆ ನಂತರ ಮಳೆಯಲಿ ಜೊತೆಯಲಿ, ಶೈಲೂ, ಶ್ರಾವಣಿ ಸುಬ್ರಹ್ಮಣ್ಯ, ಸುಂದರಾಂಗ ಜಾಣ, ಚಮಕ್ ಸಿನಿಮಾಗಳು ಡಿಸೆಂಬರ್​ ತಿಂಗಳಲ್ಲೇ ತೆರೆಕಂಡಿದ್ದು,ಹಿಟ್ ಲಿಸ್ಟ್ ಸೇರಿವೆ.

ಇದೀಗ ಆರೆಂಜ್​ ಕೂಡ ಡಿಸೇಂಬರ್​ಗೆ ತೆರೆಕಾಣ್ತಿದ್ದು, ಬಾಕ್ಸಾಫೀಸ್​ನಲ್ಲಿ ಸೌಂಡ್​ ಮಾಡೋ ಸೂಚನೆ ಸಿಕ್ತಿದೆ. ಒಟ್ಟಿನಲ್ಲಿ ಒಂದು ವರ್ಷದ ನಂತರ ಗಣಿ ಮತ್ತೆ ತೆರೆಮೇಲೆ ಮಿಂಚ್ತಿದ್ದು, ಗೋಲ್ಡನ್​ ಫ್ಯಾನ್ಸ್​ ಸಿನಿಮಾ ನೋಡೋಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.

Next Story

RELATED STORIES