ಮೈ ಕೊಡವಿಕೊಂಡು ಎದ್ದು ಬಂದ ನೋಡೋ 'ಯಜಮಾನ'..!

ಯಜಮಾನ. ಸ್ಯಾಂಡಲ್ವುಡ್ ಅಂಗಳದ ಈ ವರ್ಷದ ಒನ್ ಆಫ್ ದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ. ಟೈಟಲ್ನಿಂದಲೇ ಕನ್ನಡ ಸಿನಿಪ್ರಿಯರನ್ನ ಪುಳಕಿತಗೊಳಿಸಿರೋ ಔಟ್ ಅಂಡ್ ಔಟ್ ಫ್ಯಾಮಿಲಿ ಎಂಟ್ರಟೈನರ್. ಎಲ್ಲಕ್ಕಿಂತ ಹೆಚ್ಚಾಗಿ ಟೈಟಲ್ಗೆ ತಕ್ಕನಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯಭೂಮಿಕೆಯಲ್ಲಿರೋ ಮೆಗಾ ಪ್ರಾಜೆಕ್ಟ್.
ಇತ್ತೀಚೆಗೆ ಮೈಸೂರಿನಲ್ಲಾದ ಅಪಘಾತವೊಂದರಿಂದ ಕೈ ಪೆಟ್ಟು ಮಾಡಿಕೊಂಡಿದ್ದ ದರ್ಶನ್, ಅದಾದ ಬಳಿಕ ಜಿಮ್ ವರ್ಕೌಟ್ ಕೂಡ ಬಿಟ್ಟು, ಕಂಪ್ಲೀಟ್ ರೆಸ್ಟ್ನಲ್ಲಿದ್ದರು. ಶೂಟಿಂಗ್ಗೆ ಫುಲ್ ಸ್ಟಾಪ್ ಇಟ್ಟು, ಕೈ ಗುಣಮುಖವಾಗಿಸಿಕೊಳ್ಳೋದ್ರಲ್ಲಿ ಬ್ಯುಸಿ ಇದ್ದ ದಚ್ಚು, ಖಾಸಗಿ ಕಾರ್ಯಕ್ರಮಗಳಲ್ಲಿ ಬ್ಯಾಂಡೇಜ್ ಹಾಕಿಕೊಂಡೇ ಕಾಣಿಸಿಕೊಳ್ತಿದ್ರು. ಅದು ಅವರ ಸಿನಿಮೋತ್ಸಾಹದ ಸಂಕೇತವೂ ಹೌದು.
ಕಣ್ಣು ಕೋರೈಸೋ ಸ್ವೀಡನ್ನಲ್ಲಿ ದಚ್ಚು-ರಶ್ಮಿಕಾ ತಕಧಿಮಿತ..!!
ತಾರಕ್ ಸಿನಿಮಾದ ನಂತ್ರ ಈ ವರ್ಷ ದರ್ಶನ್ರ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಕುರುಕ್ಷೇತ್ರ, ಯಜಮಾನ ಸಿನಿಮಾಗಳು ಆಲ್ಮೋಸ್ಟ್ ಆಲ್ ಶೂಟಿಂಗ್ ಕಂಪ್ಲೀಟ್ ಮಾಡಿದ್ರೂ, ದಚ್ಚು ಆ್ಯಕ್ಸಿಡೆಂಟ್ನಿಂದ ತೆರೆಕಂಡಿಲ್ಲ. ಹಾಗಾಗಿ ತುಂಬಾ ಕಾತರದಿಂದ ಕಾಯ್ತಿದ್ದ ಅಭಿಮಾನಿಗಳಿಗೆ ದಚ್ಚು ಲೇಟ್ ಆದ್ರೂ ಲೇಟೆಸ್ಟ್ ಆಗಿ ಅವರ ಕಣ್ಮನ ಥಣಿಸೋ ಪ್ಲಾನ್ ಮಾಡಿದ್ದಾರೆ. ಅದ್ರಂತೆ ಈಗ ಕೈ ಸರಿ ಮಾಡಿಕೊಂಡು, ಮೈಕೊಡವಿಕೊಂಡು ಶೂಟಿಂಗ್ಗೆ ಎದ್ದು ಬಂದಿದ್ದಾರೆ ಅಭಿಮಾನಿಗಳ ಸುಲ್ತಾನ್ ದರ್ಶನ್.
ಅಂದಹಾಗೆ ಎರಡು ಹಾಡುಗಳ ಚಿತ್ರೀಕರಣ ಉಳಿಸಿಕೊಂಡಿದ್ದ ಯಜಮಾನ ಟೀಂ, ದಚ್ಚುಗಾಗಿ ಕಾಯ್ತಿತ್ತು. ಅದ್ರಂತೆ ನಿರ್ಮಾಪಕರನ್ನ ಕಾಯಿಸೋ ಜಾಯಮಾನ ದರ್ಶನ್ರದ್ದಲ್ಲ. ಹಾಗಾಗಿ ಮತ್ತೆ ಫೀನಿಕ್ಸ್ನಂತೆ ಎದ್ದು ಬಂದಿದ್ದಾರೆ ದಾಸ ದರ್ಶನ್. ಸದ್ಯ ಸ್ವೀಡನ್ನಲ್ಲಿ ಬೀಡುಬಿಟ್ಟಿರೋ ಯಜಮಾನ ಟೀಂ, ಹಾಡೊಂದರ ಶೂಟಿಂಗ್ನಲ್ಲಿ ಬ್ಯುಸಿ ಆಗಿದೆ.
ಫಾರಿನ್ ಹಾಡಿಗೆ ಹರಿ ಟ್ಯೂನ್, ನಾಗೇಂದ್ರ ಪ್ರಸಾದ್ ಪದಪುಂಜ
ಮನಮುಟ್ಟೋ ಡ್ಯುಯೆಟ್ ಹಾಡಿಗೆ ಗಣೇಶ್ ಕೊರಿಯೋಗ್ರಾಫಿ..!
ಕರ್ನಾಟಕ ಕ್ರಶ್ ರಶ್ಮಿಕಾ ಮಂದಣ್ಣ ಕೂಡ ಡಿ ಬಾಸ್ ಜೊತೆಗಿನ ಡ್ಯುಯೆಟ್ ಹಾಡಿನಲ್ಲಿ ಭಾಗಿಯಾಗಿದ್ದು, ಸ್ವೀಡನ್ನ ಕಣ್ಣುಕೋರೈಸೋ ಸುಂದರ ತಾಣಗಳಲ್ಲಿ ಶೂಟಿಂಗ್ ನಡೆಸ್ತಿದೆ. ಅಂದಹಾಗೆ ರಶ್ಮಿಕಾ-ದಚ್ಚು ಕಾಂಬಿನೇಷನ್ನ ಈ ಹಾಡಿಗೆ ವಿ ಹರಿಕೃಷ್ಣ ಮ್ಯೂಸಿಕ್ ಕಂಪೋಸ್ ಮಾಡಿದ್ದು, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ. ಇನ್ನು ಈ ಹಾಡಿಗೆ ಖ್ಯಾತ ಕೊರಿಯೋಗ್ರಾಫರ್ ಗಣೇಶ್ ಮಾಸ್ಟರ್ ಕೊರಿಯೋಗ್ರಾಫಿ ಮಾಡ್ತಿರೋದು ಮತ್ತೊಂದು ವಿಶೇಷ.
ಇನ್ನು ಬ್ಯಾಕ್ ಟು ಬ್ಯಾಕ್ ತೆಲುಗು ಸಿನಿಮಾಗಳಲ್ಲಿ ಬ್ಯುಸಿ ಇದ್ದ ರಶ್ಮಿಕಾ ಮಂದಣ್ಣ, ಇದೀಗ ಯಜಮಾನನ ಜೊತೆ ಹೆಜ್ಜೆ ಹಾಕೋಕೆ ಕನ್ನಡಕ್ಕೆ ವಾಪಸ್ಸಾಗಿದ್ದು, ಮುಂದಿನ ವಾರದವರೆಗೂ ಸ್ವೀಡನ್ ಟೂರ್ನಲ್ಲಿರಲಿದ್ದಾರೆ. ಅದಾದ ಬಳಿಕ ಧ್ರುವ ಜೊತೆಗಿನ ಪೊಗರು ಚಿತ್ರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ .
ಹೊಸ ವರ್ಷಕ್ಕೆ ಫ್ಯಾನ್ಸ್ಗೆ ಸಿಗುತ್ತಾ ಸುಲ್ತಾನ್ ಅಸಲಿ ದರ್ಶನ..?
ಬರಹಗಾರ ಕಮ್ ನಿರ್ದೇಶಕ ಪಿ ಕುಮಾರ್ ಆ್ಯಕ್ಷನ್ ಕಟ್ ಹೇಳ್ತಿರೋ ಯಜಮಾನ ಚಿತ್ರಕ್ಕೆ ಶೈಲಜಾ ನಾಗ್ ಹಾಗೂ ಬಿ ಸುರೇಶ್ ಬಂಡವಾಳ ಹಾಕಿದ್ದಾರೆ. ಶ್ರೀಶ ಕುದುವಳ್ಳಿ ಕ್ಯಾಮೆರಾದಲ್ಲಿ ಸೆರೆಯಾಗ್ತಿರೋ ಯಜಮಾನ, ಕನ್ನಡ ಚಿತ್ರರಂಗದ ಮಟ್ಟಿಗೆ ಟ್ರೆಂಡ್ ಸೆಟ್ ಸಿನಿಮಾ ಆಗಲಿದ್ದು, ಎಲ್ಲಾ ವಯೋಮಾನದವ್ರಿಗೂ ಇಷ್ಟವಾಗೋ ಸಿನಿಮಾ ಆಗಲಿದೆ ಅನ್ನೋದು ಟೀಸರ್ ಹಾಗೂ ಕಾಸ್ಟ್ಯೂಮ್ಸ್ನಿಂದ ಗೊತ್ತಾಗ್ತಿದೆ.
ಮೇಕಿಂಗ್ ಮತ್ತು ಟೀಸರ್ಗಳಿಂದಲೇ ಅತೀವ ಕುತೂಹಲ ಹುಟ್ಟಿಸಿರೋ ಯಜಮಾನ, ಸ್ವೀಡನ್ ಹಾಡಿನ ನಂತರ ಕರ್ನಾಟಕದಲ್ಲೇ ಮತ್ತೊಂದು ಹಾಡು ಚಿತ್ರಿಸೋದರ ಮೂಲಕ ಶೂಟಿಂಗ್ಗೆ ಫುಲ್ ಸ್ಟಾಪ್ ಇಡಲಿದೆ. ಅದಾದ ಬಳಿಕ ಆದಷ್ಟು ಬೇಗ ಪೋಸ್ಟ್ ಪ್ರೊಡಕ್ಷನ್ ಮುಗಿಸಿ, ಸಂಕ್ರಾಂತಿಗೆ ನಿಮ್ಮ ಮುಂದೆ ಬಂದರೂ ಅಚ್ಚರಿಯಿಲ್ಲ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್, ಟಿವಿ5.