Top

ಸಿಎಂ ಅನುಪಸ್ಥಿತಿಯಲ್ಲಿ ಬದಲಾಗುತ್ತಾ ರಾಜ್ಯ ರಾಜಕಾರಣ..?

ಸಿಎಂ ಅನುಪಸ್ಥಿತಿಯಲ್ಲಿ ಬದಲಾಗುತ್ತಾ ರಾಜ್ಯ ರಾಜಕಾರಣ..?
X

ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ರಚನೆಯಾಗಿ 6 ತಿಂಗಳಾಗ್ತಾ ಬಂತು. ಸದಾ ರಾಜಕೀಯ ಜಂಜಾಟದಲ್ಲಿ ಮುಳುಗಿದ್ದ ಮುಖ್ಯಮಂತ್ರಿ ಕೊಂಚ ರಿಲ್ಯಾಕ್ಸ್ ಆಗೋಕೆ ನಿರ್ಧರಿಸಿದ್ದಾರೆ. ಚಳಿಗಾಲದ ಅಧಿವೇಶನದ ನಂತರ ವಿದೇಶಕ್ಕೆ ಹೋಗುವ ಚಿಂತೆಯಲಿದ್ದಾರೆ.

ಎರಡು ಬಾರಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಕುಮಾರಸ್ವಾಮಿ, ಸದ್ಯ ವೈಧ್ಯರ ಸಲಹೆಯಂತೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಇತ್ತೀಚೆಗಿನ ರಾಜಕೀಯ ಜಂಜಾಟದಿಂದ ಹೆಚ್ ಡಿಕೆಗೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಲು ಆಗ್ತಿರ್ಲಿಲ್ವಂತೆ. ಹೀಗಾಗಿ ವೈದ್ಯರ ಸಲಹೆ ಮೆರೆಗೇ ಇನ್ನಷ್ಟು ಚಿಕಿತ್ಸೆಗಾಗಿ ಕುಟುಂಬ ಸಮೇತರಾಗಿ ವಿದೇಶಕ್ಕೆ ತೆರಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇನ್ನು ಡಿಸೆಂಬರ್ 2 ನೇ ವಾರದಿಂದ ಬೆಳಗಾವಿ ಚಳಿಗಾಲದ ಅಧಿವೇಶನ ನಡೆಸೋಕೆ ಸರ್ಕಾರ ಈಗಾಗಲೇ ನಿರ್ಧರಿಸಿದೆ. ವಿಪಕ್ಷ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಯುತ್ತಿರೋದ್ರಿಂದ ಸಧ್ಯ ಎದುರಾಗಿರುವ ರಾಜಕೀಯ ಜಂಜಾಟಗಳನ್ನು ಮುಗಿಸಿ, ನಂತರ ಆರೋಗ್ಯ ದ ಕಡೆ ಗಮನ ಹರಿಸಲು ನಿರ್ಧರಿಸಿದ್ದಾರೆ. ಹೀಗಾಗಿ ಬೆಳಗಾವಿಯಲ್ಲಿ ನಡೆಯಲಿರುವ 10 ದಿನದ ಚಳಿಗಾಲದ ಅಧಿವೇಶನದಲ್ಲಿ ಭಾಗಿಯಾದ ನಂತರ ವಿದೇಶಕ್ಕೆ ತೆರಳಲಿದ್ದಾರೆ ಎನ್ನಲಾಗಿದೆ.

ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ನಡೆಸ್ತಿದರು, ಕಾಂಗ್ರೆಸ್ ನಾಯಕರ ಮಧ್ಯೆಯೇ ಅಸಮಧಾನದ ಹೊಗೆಯಾಡ್ತಿದೆ. ಸಿಎಂ ಕುಮಾರಸ್ವಾಮಿ ಉಪಸ್ಥಿತಿಯಲ್ಲೇ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸೋ ನಾಯಕರು, ಇನ್ನು ತಮ್ಮ ಅನುಪಸ್ಥಿತಿಯಲ್ಲಿ ಸರ್ಕಾರದ ಬುಡವನ್ನು ಅಲ್ಲಾಡಿಸುತ್ತಾರಾ ಅನ್ನೋ ಆತಂಕ ಕುಮಾರಸ್ವಾಮಿಯವ್ರದ್ದು. ಒಟ್ನಲ್ಲಿ ಇನ್ನಷ್ಟು ಚಿಕಿತ್ಸೆಗೆ ಪಡೆಯಲು ವೈಧ್ಯರು ಸಲಹೆ ನೀಡಿದ್ದು, ಅಮೇರಿಕಾದಲ್ಲಿ ಚಿಕಿತ್ಸೆ ಪಡೆದ ನಂತರ ಮತ್ತೆ ಕುಮಾರಸ್ವಾಮಿ ರಾಜ್ಯಕ್ಕೆ ಮರಳಲಿದ್ದಾರೆ.

Next Story

RELATED STORIES