Top

ಸಂಯುಕ್ತಾ ಹೆಗ್ಡೆ ಕನ್ನಡದ ಸನ್ನಿ ಲಿಯೋನ್ ಅಂತ ವ್ಯಂಗ್ಯವಾಡಿರೋ ಕೀರ್ತನ್​ ಶೆಟ್ಟಿ

ಸಂಯುಕ್ತಾ ಹೆಗ್ಡೆ ಕನ್ನಡದ ಸನ್ನಿ ಲಿಯೋನ್ ಅಂತ ವ್ಯಂಗ್ಯವಾಡಿರೋ ಕೀರ್ತನ್​ ಶೆಟ್ಟಿ
X

ಸ್ಯಾಂಡಲ್​ವುಡ್​ನಲ್ಲಿ ಇದೀಗ ಮತ್ತೊಂದು ವಿವಾದ ಭುಗಿಲೆದ್ದಿದೆ. ಕನ್ನಡದ ಸೋ ಕಾಲ್ಡ್ ನಿರ್ದೇಶಕನೊಬ್ಬ ,ಕಿರಿಕ್​ ಪಾರ್ಟಿ ಚಿತ್ರದ ಸಂಯುಕ್ತಾ ಹೆಗ್ಡೆಯನ್ನ ಸನ್ನಿಲಿಯೋನ್​ಗೆ ಹೋಲಿಸಿದ್ದಾರೆ

ಸ್ಯಾಂಡಲ್​ವುಡ್​ನಲ್ಲಿ ಬಹುದಿನಗಳಿಂದ ಸುದ್ದಿ ಮಾಡ್ತಿರೋ ಮೀಟೂ ಪ್ರಕರಣದ ಬಗ್ಗೆ ಇಲ್ಲೊಬ್ಬ ನಿರ್ದೇಶಕ ಸಿನಿಮಾ ಮಾಡೋಕ್ಕೆ ರೆಡಿಯಾಗಿದ್ದಾನೆ. ಆತನ ಹೆಸರೇ ಕಿರಿಕ್ ಕೀರ್ತನ್​ ಶೆಟ್ಟಿ.ಈ ಹಿಂದೆ ಫೇಸ್​ ಬುಕ್​ ಲವ್​ ಅಂತ ಚಿತ್ರವೊಂದನ್ನು ಶುರುಮಾಡಿ, ಆ ನಂತರ ಈ ಚಿತ್ರಕ್ಕೆ ಹುಚ್ಚ ವೆಂಕಟ್​ರನ್ನು ಆಯ್ಕೆ ಮಾಡಿಕೊಂಡು, ಶೂಟಿಂಗ್​ ಶುರುಮಾಡಿದ್ದ ಈತ. ಆ ನಂತರ ಅದೇನಾಯ್ತೋ ಏನೋ. ಹುಚ್ಚ ವೆಂಕಟ್ ಜೊತೆ ಕಿರಿಕ್​ ಮಾಡಿಕೊಂಡ ಕೀರ್ತನ್​ ಈ ಚಿತ್ರವನ್ನ ಆರ್ಧಕ್ಕೆ ನಿಲ್ಲಿಸಿದರು.

ಇದೀಗ ಮೀಟೂ ಕಾನ್ಸೆಪ್ಟ್​ ಇಟ್ಕೊಂಡು ಮೀಟೂ ವಿತ್​ ಫೈಟೂ ಅಂತ ಟೈಟಲ್​ ಇಟ್ಕೊಂಡು ಸಿನಿಮಾ ಶುರುಮಾಡಿದ್ದಾರೆ. ಈ ಬಗ್ಗೆ ತಮ್ಮ ಫೇಸ್​ಬುಕ್ ಅಕೌಂಟ್​ನಲ್ಲಿ ಬರೆದುಕೊಂಡಿರೋ ಸೋ ಕಾಲ್ಡ್​ ನಿರ್ದೇಶಕ ಕೀರ್ತನ್​ ಶೇಟ್ಟಿ, ಚಿತ್ರದಲ್ಲಿ ತೆಲುಗಿನ ಶ್ರೀ ರೆಡ್ಡಿ ಮತ್ತು ಕನ್ನಡದ ಸಂಯುಕ್ತಾ ಹೆಗ್ಡೆಯನ್ನ ಹೋಲುವಂತ ಪಾತ್ರಗಳಿವೆ .ಮುಂದಿನ ದಿನಗಳಲ್ಲಿ ಆ ಪಾತ್ರಗಳನ್ನ ಯಾರು ಮಾಡ್ತಾರೆ ಅಂತ ರಿವೀಲ್ ಮಾಡೋದಾಗಿ ಹೇಳಿಕೊಂಡಿದ್ದಾನೆ.

ಇಷ್ಟೇ ಆಗಿದ್ರೆ , ಬಹುಶ ಇಷ್ಟು ದೊಡ್ಡ ಮಟ್ಟದ ಸುದ್ದಿ ಆಗ್ತಿರಲಿಲ್ವೇನೂ ಆದರೆ, ನಟಿ ಸಂಯುಕ್ತಾ ಹೆಗ್ಡೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾನೆ. ಸಂಯುಕ್ತಾ ಹೆಗ್ಡೆ ಎಣ್ಣೆ ಗಾಂಜಾ ಹೊಡೀತಾಳೆ. ಆಕೆ ಬಹಳ ಕೆಟ್ಟ ಹುಡುಗಿ, ಕನ್ನಡದ ಸನ್ನಿಲಿಯೋನ್​ ಸಂಯುಕ್ತಾ ಅಂತ ತನ್ನ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾನೆ.ಈ ಬಗ್ಗೆ ಆತನ ಪ್ರತಿಕ್ರಿಯೆ ಕೇಳಿದ್ರೆ,ಆತನ ಮಾತಿಗೂ, ಆತನ ಸ್ಟೇಟ್​ಮೆಂಟ್​ಗೂ ಸಂಬಂಧವೇ ಇಲ್ಲದಂತೆ ಮಾತನಾಡ್ತಾನೆ.

ಇನ್ನು ಈ ವಿಚಾರವಾಗಿ ನಟಿ ಸಂಯುಕ್ತಾ ಹೆಗ್ಡೆ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.ಒಟ್ನಲ್ಲಿ ಕಿರಿಕ್​ ಕೀರ್ತನ್​ ಶೆಟ್ಟಿ, ಹೆಸ್ರಿಗೆ ತಕ್ಕಂತೆ ಆಗಾಗ್ಗೆ ಕಿರಿಕ್ ಮಾಡಿಕೊಳ್ಳೋದೇ ಈತನ ಕೆಲಸ. ಕೇವಲ ಪಬ್ಲಿಸಿಟಿಗಾಗಿ ಆಗಾಗ್ಗೆ ಇಂಥ ಕೆಲಸಗಳನ್ನ ಮಾಡ್ತಾನೇ ಇರ್ತಾನೆ..ಈ ಬಗ್ಗೆ ನಟಿ ಸಂಯುಕ್ತಾ ಹೆಗ್ಡೆ ಕ್ರಮ ಕೈಗೊಂಡಿದ್ದೇ ಆದರೆ, ಇಂಥವರ ಪುಂಡಾಟಿಕೆಗಳಿಗೆ ಬ್ರೇಕ್​ ಬಿದ್ದಂತಾಗುತ್ತದೆ.

Next Story

RELATED STORIES