ನಿಮಿಷ 10, ವಾರ್ತೆ 50

1.ಗುಜರಾತ್ನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲರ ಅತ್ಯಂತ ಎತ್ತರದ ಪ್ರತಿಮೆ ನಿರ್ಮಾಣವಾಗಿದ್ದೇ ದೇಶದಲ್ಲಿ ಅತಿ ಎತ್ತರದ ಕಟ್ಟಡ, ಪ್ರತಿಮೆ ನಿರ್ಮಿಸುವ ಟ್ರೆಂಡ್ ಶುರುವಾಗಿದೆ. ಇದಕ್ಕೆ ಆಂಧ್ರವೂ ಹೊರತಾಗಿಲ್ಲ. ವಿಭಜನೆ ಬಳಿಕ ಆಂಧ್ರಪ್ರದೇಶಲ್ಲಿ ಹೊಸ ರಾಜಧಾನಿ ಮತ್ತು ವಿಧಾನಸಭೆ ಕಟ್ಟಡ ನಿರ್ಮಾಣವಾಗುತ್ತಿದೆ.
2. ಸತ್ಯಸಾಯಿ ಬಾಬಾರ 93ನೇ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿರೋ ಸತ್ಯಸಾಯಿ ಆಶ್ರಮಕ್ಕೆ ಭೇಟಿ ನೀಡಿದರು. ಈ ವೇಳೆ ಕನ್ನಡದಲ್ಲೇ ಭಾಷಣ ಆರಂಭಿಸಿದ ಅವರು, ರಾಜ್ಯದ ಜನತೆಗೆ ಧನ್ಯವಾದ ಸಲ್ಲಿಸಿದರು.
3.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ರಚನೆಯಾಗಿ 6 ತಿಂಗಳಾಗ್ತಾ ಬಂತು. ಸದಾ ರಾಜಕೀಯ ಜಂಜಾಟದಲ್ಲಿ ಮುಳುಗಿದ್ದ ಹೆಚ್ಡಿಕೆ ಕೊಂಚ ರಿಲ್ಯಾಕ್ಸ್ ಆಗೋಕೆ ನಿರ್ಧರಿಸಿದ್ದಾರೆ. ಚಳಿಗಾಲದ ಅಧಿವೇಶನದ ನಂತರ ವಿದೇಶಕ್ಕೆ ಹಾರಲು ಚಿಂತಿಸಿದ್ದಾರೆ ಎನ್ನಲಾಗಿದೆ.
4. ಮಂಡ್ಯ ಜಿಲ್ಲೆಯ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 717 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಈ ಸಂಬಂಧ ಮಂಡ್ಯದ ವಿ.ಸಿ.ಫಾರಂ ಹೆಲಿಪ್ಯಾಡ್ಗೆ ಮಧ್ಯಾಹ್ನ ಆಗಮಿಸಿದರು. ರೈತ ಸಂಘದ ಕಾರ್ಯಕರ್ತರು ಕಪ್ಪುಬಾವುಟ ಪ್ರದರ್ಶನ ನಡೆಸಿ ಘೋಷಣೆ ಕೂಗಲು ಮುಂದಾದರು.
5.ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡ್ಯ ಜಿಲ್ಲಾ ಪ್ರವಾಸ ವೇಳೆ ರೈತ ಆತ್ಮಹತ್ಯೆಯ ಸ್ವಾಗತ ಸಿಕ್ಕಿದೆ. ಮೇಲುಕೋಟೆ ಕ್ಷೇತ್ರದಲ್ಲಿ 717 ಕೋಟಿ ವೆಚ್ಚದ ವಿವಿಧ ಕಾಮಗಾರಿ ಚಾಲನೆಗೆಗಾಗಿ ಸಿಎಂ ಬಂದಿದ್ದರು. ಇದಕ್ಕೂ ಮುನ್ನವೇ ಮೇಲುಕೋಟೆ ದುದ್ದ ಗ್ರಾಮದ ರೈತ ಜೈ ಕುಮಾರ್ ಸಾವಿಗೆ ಶರಣಾಗಿದ್ದಾನೆ. ಸಾಲಭಾದೆ ಹಾಗೂ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ಜಯ ಕುಮಾರ್.. ಸಿಎಂ ಹೆಸರಿಗೆ ಡೆತ್ ನೋಟ್ ಬರೆದು ಸಾವನ್ನಪ್ಪಿದ್ದಾನೆ.
6.2019ರ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಅಂತಲೇ ಹೇಳಲಾಗುತ್ತಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗಳ ಪೈಕಿ ರಾಜಸ್ಥಾನ, ಮಿಜೋರಾಂ, ಮಧ್ಯಪ್ರದೇಶ ಮತ್ತು ತೆಲಂಗಾಣದಲ್ಲಿ ಪ್ರಚಾರದ ಭರಾಟೆ. ಮಧ್ಯಪ್ರದೇಶ ಮತ್ತು ಮಿಜೋರಾಂನಲ್ಲಿ ಮತದಾನಕ್ಕೆ ಕೇವಲ 5 ದಿನ ಮಾತ್ರ ಬಾಕಿ ಇದೆ. ಇಂದು ಮಿಜೋರಾಂನ ಲುಂಗ್ಲೈನಲ್ಲಿ ಪ್ರಚಾರ ನಡೆಸಿದ ಪ್ರಧಾನಿ ಮೋದಿ, ಈಶಾನ್ಯ ರಾಜ್ಯಗಳ ಉಡುಪಿನ ಬಗ್ಗೆ ಈ ಹಿಂದೆ ಕಾಂಗ್ರೆಸ್ ಮುಖಂಡ ಶಶಿ ತರೂರ್ ನೀಡಿದ್ದ ಹೇಳಿಕೆ ಪ್ರಸ್ತಾಪಿಸಿ ಟೀಕಿಸಿದ್ದಾರೆ.
7.ಪಾಕಿಸ್ತಾನದ ಕರಾಚಿಯಲ್ಲಿರುವ ಚೀನಾ ರಾಯಭಾರಿ ಕಚೇರಿ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಮುಂಜಾನೆ ನಾಲ್ವರು ಉಗ್ರರು ಗುಂಡಿನ ದಾಳಿ ನಡೆಸುತ್ತಾ, ರಾಯಭಾರಿ ಕಚೇರಿಗೆ ನುಗ್ಗಲು ಯತ್ನಿಸಿದ್ದಾರೆ.
8.ಜನಸಂಖ್ಯೆ ಹೆಚ್ಚಾದಂತೆ ವಾಹನಗಳ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ. ವಾಹನಗಳು ಹೆಚ್ಚಾದಂತೆ ವಾಯು ಮಾಲಿನ್ಯ, ಮಿತಿ ಮೀರುತ್ತಿದೆ. ಈ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಮಹತ್ವದ ಹೆಜ್ಜೆಯನ್ನಿಟ್ಟು ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ ಮಾಡಿತ್ತು. ಕಬ್ಬನ್ ಪಾರ್ಕ್ ಬಾಲ ಭವನದಲ್ಲಿ ವಿದ್ಯಾರ್ಥಿಗಳಿಗೆ ವಾಯುಮಾಲಿನ್ಯ ಬಗ್ಗೆ ಅರಿವು ಮೂಡಿಸಲಾಯಿತು.
9.ಸ್ಯಾಂಡಲ್ವುಡ್ನಲ್ಲಿ ಬಹುದಿನಗಳಿಂದ ಸುದ್ದಿ ಮಾಡ್ತಿರೋ ಮೀಟೂ ಪ್ರಕರಣದ ಬಗ್ಗೆ ಇಲ್ಲೊಬ್ಬ ನಿರ್ದೇಶಕ ಸಿನಿಮಾ ಮಾಡೋಕ್ಕೆ ರೆಡಿಯಾಗಿದ್ದಾನೆ. ಆತನ ಹೆಸರೇ ಕಿರಿಕ್ ಕೀರ್ತನ್ ಶೆಟ್ಟಿ. ಈ ಹಿಂದೆ ಫೇಸ್ ಬುಕ್ ಲವ್ ಅಂತ ಚಿತ್ರವೊಂದನ್ನ ಶುರುಮಾಡಿ, ಆ ನಂತರ ಈ ಚಿತ್ರಕ್ಕೆ ಹುಚ್ಚ ವೆಂಕಟ್ರನ್ನು ಆಯ್ಕೆ ಮಾಡಿಕೊಂಡು, ಶೂಟಿಂಗ್ ಶುರುಮಾಡಿದ್ದನು.
10.ಸಿಲಿಕಾನ್ಸಿಟಿಯಲ್ಲಿ ಭೂಮಿಗೆ ಬಂಗಾರದ ಬೆಲೆಯೇ ಇದೆ. ಖಾಲಿ ಜಾಗ ಕಂಡ್ರೆ ಸಾಕು ಬಡಿದು ಬಾಯಿಗಾಕಿಕೊಳ್ಳೋರೇ ಹೆಚ್ಚು. ಗಾಯತ್ರಿ ನಗರದ 7 ನೇ ಅಡ್ಡರಸ್ತೆಯಿಂದ ವಿವೇಕಾನಂದ ಕಾಲೇಜ್ಗೆ ಸಂಪರ್ಕ ಕಲ್ಪಿಸೋ ರಸ್ತೆ ವಿವಾದಿತ ರೋಡ್. ಕೆಲ ವರ್ಷಗಳ ಹಿಂದೆ ಪ್ರದೀಪ್ ಎಂಬಾತ ಈ ಜಾಗವನ್ನ ಸಾರ್ವಜನಿಕ ಕಾರ್ಯಕ್ಕೆ ಬಳಸಿಕೊಳ್ಳಲಿ ಅಂತ ಸಿದ್ದರಮಣ ಯೋಗಾಶ್ರಮ ಸೇವಾ ಟ್ರಸ್ಟ್ಗೆ ನೀಡಿದರು. ಆದ್ರೆ ಸಿದ್ದರಮಣ ಸೇವಾ ಟ್ರಸ್ಟ್ನವರು ಈ ಜಾಗವನ್ನ ಬೇರೊಬ್ಬರಿಗೆ ಲೀಜ್ಗೆ ನೀಡಿದ್ದಾರೆ.
11. ಪದವಿ ಪೂರ್ವ ಶಿಕ್ಷಣ ಇಲಾಖೆ ಒಂದಲ್ಲೊಂದು ವಿವಾದಾತ್ಮಕ ಸುತ್ತೊಲೆ ಹೊರಡಿಸ್ತಿದೆ. ಕಳೆದ ವಾರವಷ್ಟೇ ಲ್ಯಾಬ್ಗಳಲ್ಲಿ ಕೀಟ, ಪ್ರಾಣಿ, ಪಕ್ಷಿ ಬ್ಯಾನ್ ಮಾಡುವ ಮೂಲಕ ವಿಜ್ಞಾನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಕೆಂಗಣ್ಣಿಗೆ ಗುರಿಯಾಗಿತ್ತು. ಇದರ ಬೆನ್ನಲ್ಲೇ ಸಿಎಂ ಆದೇಶದ ಮೇರೆೆಗೆ ತರಗತಿಯಲ್ಲಿ ಮೊಬೈಲ್, ಲ್ಯಾಪ್ ಟಾಪ್ ಬ್ಯಾನ್ ಮಾಡಲಾಗಿದೆ ಎಂಬ ಆದೇಶ ಹೊರಡಿಸಿದೆ. ಇದು ಸಾಕಷ್ಟು ವಿವಾದಕ್ಕೆ ಕಾರಣವಾಯ್ತು.
12.ಹಸೆಮಣೆ ಏರಲು ಸಿದ್ಧರಾಗಿರುವ ನಟ ಧ್ರುವ ಸರ್ಜಾಗೆ ಈಗ ವಾಸ್ತುದೋಷ ಕಾಡುತ್ತಿದೆಯಂತೆ. ಈ ಕಾರಣಕ್ಕಾಗಿ ಧ್ರುವ ಎಂಗೇಜ್ಮೆಂಟ್ ಆಗ್ತಿದ್ದಂಗೆ ಮನೆ ಶಿಫ್ಟ್ ಮಾಡೋ ಪ್ಲಾನ್ನಲ್ಲಿದ್ದಾರೆ. ಬೆಂಗಳೂರಿನ ಕೆ.ಆರ್.ರಸ್ತೆಯಲ್ಲಿರುವ ಮನೆಯಿಂದ ಧ್ರುವ ಸದಾಶಿವನಗರದತ್ತ ಪಯಣ ಬೆಳೆಸಲಿದ್ದಾರೆ. ಸದ್ಯ ಸದಾಶಿವನಗರದಲ್ಲಿ 2 ಲಕ್ಷ ಬಾಡಿಗೆ ಇರುವ ಹೊಸ ಬಂಗಲೆ ನೋಡಿದ್ದು, ಆರತಕ್ಷತೆ ನಂತರ ಹೊಸ ಮನೆಗೆ ಧ್ರುವ ಶಿಫ್ಟ್ ಆಗಲಿದ್ದಾರೆ.
13.ಬೆಂಗಳೂರು ನಗರ ಕೆ.ಆರ್.ಪುರ, ವೈಟ್ ಫೀಲ್ಡ್, ಮಾರತ್ಹಳ್ಳಿ ಸೇರಿದಂತೆ ಹಲವಡೇ ಗಜ ಸೈಕ್ಲೋನ್ ಎಫೆಕ್ಟ್ ತಟ್ಟಿದೆ. ಸಂಜೆಯಿಂದ ಸತತವಾಗಿ ಜಡಿ ಮಳೆ ಆಗಾಗ ಜೋರು ಮಳೆ ಆಗುತ್ತಿದ್ದು, ಸಾರ್ವಜನಿಕರು ತತ್ತರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಮಳೆಯಿಂದಾಗಿ ಓಲ್ಡ್ ಮದ್ರಾಸ್ ರಸ್ತೆಯಲ್ಲಿ ವಾಹನ ಸವಾರರು ಪರದಾಡುವಂತಾಗಿದೆ.
14.ಗ್ರಾಮದ ಯುವತಿಯರಿಗೆ ಚುಡಾಯಿಸುತ್ತಿದ್ದ ಬೀದಿ ಕಾಮುಕರಿಗೆ ಗ್ರಾಮಸ್ಥರು ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಗೆದ್ದಲಹಳ್ಳಿಯ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಾಕಷ್ಟು ಬಾರಿ ಈ ಬಗ್ಗೆ ಎಚ್ಚರಿಕೆ ನೀಡಿದ್ದರೂ ಸಹ, ಈ ಮೂವರು ಪುಂಡರು ತಮ್ಮ ಚೆಷ್ಟೆಯನ್ನ ಮುಂದುವರಿಸಿದ್ದಾರೆ. ಈ ಬೀದಿ ಕಾಮುಕರನ್ನು ಹಿಡಿದು ಕಂಬಕ್ಕೆ ಕಟ್ಟಿ ಬಟ್ಟೆ ಬಿಚ್ಚಿ, ಗ್ರಾಮದ ದೇವಾಲಯಕ್ಕೆ ಕಟ್ಟಿ ಥಳಿಸಿ ಪುಂಡರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
15.ಆಂಬಿಡೆಂಟ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯ್ನ ಮತ್ತಷ್ಟು ತೀವ್ರಗೊಳ್ಳಿಸಿರುವ ಸಿಸಿಬಿ ಅಧಿಕಾರಿಗಳು. ಪ್ರಕರಣದಲ್ಲಿ ಕೇಳಿಬಂದಿದ್ದ ಮತ್ತು ಇಡಿ ಡಿಲ್ ನಲ್ಲಿ ಭಾಗಿಯಾಗಿದ್ದ ಎನ್ನಲಾದ ಅಲಿಖಾನನ್ನು ಸಿಸಿಬಿ ಅಧಿಕಾರಿಗಳು ಇಂದು ತೀವ್ರ ವಿಚಾರಣೆ ಗೆ ಒಳಪಡಿಸಿದ್ದಾರೆ
16.ಕಾನೂನುಬದ್ಧವಾಗಿ ನಡೆಸುವ ಬಾರ್ ಅಂಡ್ ರೆಸ್ಟೋರೆಂಟ್ ವ್ಯವಹಾರ ನಡೆಸುವವರನ್ನು ಹೆದರಿಸಬೇಡಿ ಎಂದು ಸಿಸಿಬಿ ಪೊಲೀಸರಿಗೆ ಹೈಕೋರ್ಟ್ ಸೂಚಿಸಿದೆ. ಬಾರ್, ರೆಸ್ಟೋರೆಂಟ್ ಗಳಲ್ಲಿ ಮಹಿಳಾ ನೌಕರರ ನೇಮಕ ಮಾಡಿದ ಬಾರ್ ಗಳ ಮೇಲೆ ಸಿಸಿಬಿ ಪೊಲೀಸರ ದಾಳಿ ಪ್ರಶ್ನಿಸಿ 27 ಕ್ಕೂ ಹೆಚ್ಚು ಬಾರ್ ಮಾಲೀಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ. ವೀರಪ್ಪ ಸೂಚಿಸಿದರು.ಇದಕ್ಕೂ ಮುನ್ನ ಅರ್ಜಿದಾರ ಪರ ವಕೀಲರು ವಾದ ಮಂಡಿಸಿ, ಮಹಿಳಾ ನೌಕರರನ್ನು ನೇಮಿಸಿಕೊಳ್ಳದಂತೆ ಪೊಲೀಸರು ಒತ್ತಡ ಹಾಕುತ್ತಿದ್ದಾರೆ.
17.ಬೆಂಗಳೂರು ಸಿಸಿಬಿ ಪೊಲೀಸರು ಫುಲ್ ಆಕ್ಟಿವ್ ಆಗಿದ್ದಾರೆ. ಜೂಜಾಟದ ಅಡ್ಡೆಗೆ ಬ್ರೇಕ್ ಹಾಕೋ ನಿಟ್ಟಿನಲ್ಲಿ ಪೊಲೀಸರು ಫುಲ್ ಆಕ್ಟಿವ್ ಆಗಿದ್ದಾರೆ. ಆಲ್ ಮೋಸ್ಟ್ ವೇಶ್ಯಾವಾಟಿಕೆ ಅಡ್ಡೆ, ಡೈಸ್ ಗೇಮ್, ವೀಡಿಯೋ ಗೇಮ್, ಲೇವಾದೇವಿ, ಲೇಡಿಸ್ ಬಾರ್ ಹೆಸರಲ್ಲಿ ಜನರ ಜೇಬಿಗೆ ಕತ್ತರಿ ಹಾಕೋ ಎಲ್ಲಾ ಬ್ಯುಸಿನಸ್ ಗೂ ಪರ್ಮನೆಂಟ್ ಬ್ರೇಕ್ ಹಾಕಲು ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಆಂಡ್ ಟೀಂ ಯಶಸ್ವಿಯಾಗಿದೆ. ನಿನ್ನೆ ಕೂಡ ಕೆ.ಆರ್ ಪುರಂ ಹಾಗೂ ಅವಲಹಳ್ಳಿ ಬಳಿಯ ಕ್ಯಾಸಿನೋ ಬಾರ್ ಸೇರಿದಂತೆ ಹಲವು ಭಾಗದಲ್ಲಿ ಸಿಸಿಬಿ ಪೊಲೀಸರು ದಾಳಿನಡೆಸಿದ್ದಾರೆ.
18. ರಿಮೋಟ್ ರೌಡಿ ರಂಜೀತ್ ಇನ್ಫಾರ್ಮೇಷನ್ ಮೆರೆಗೆ ತಯಾರಾದ ಬಿಟಿಎಸ್ ಗ್ಯಾಂಗ್ ಕೆಲವೇ ಕ್ಷಣಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಹುಡುಗರನ್ನ ಹತಾರಿಗಳೊಂದಿಗೆ ತಯಾರಾಗಿ ನಿಂತಿತ್ತು . ಬರ್ತ್ಡೇ ಪಾರ್ಟಿ ಗೆ ಪಳನಿ ಮುರುಗ ಮತ್ತು ವೇಲು ಚೈತ್ರಾ ಬಾರ್ಗೆ ಬರುತ್ತಿದ್ದಂತೆ ಮೂರು ದಿಕ್ಕುಗಳಲ್ಲಿ ಆಟೋ ಬೈಕುಗಳಲ್ಲಿ ಬಂದ ಗುಂಪು ಏಕಾಎಕಿ ಮೂವರಿಗೆ ಮಚ್ಚು ಬೀಸಿತ್ತು. ಅದರಲ್ಲಿ ವೇಲು ಮಿಸ್ಸಾಗಿ ಎಸ್ಕೇಪ್ ಆದ್ರೆ ಇನ್ನುಳಿದವರು ಬೀದಿ ಹೆಣವಾದರು.
19.ಇನ್ಸ್ ಪೆಕ್ಟರ್ ಹಾಗೂ ಎಸಿಪಿ ಆಗಿದ್ದಾಗ ಅಮಾನತ್ತಾದರು ಇನ್ನೂ ಬುದ್ದಿಕಲ್ತಿಲ್ಲ. ಯಸ್, ಇದೀಗ ಚಿಕ್ಕಬಳ್ಳಾಪುರ ಡಿವೈಎಸ್ಪಿ ಪಿ.ಪ್ರಸಾದ್, ಗುಂಡ್ಲುಪೇಟೆ ಪ್ರೊಬೇಷನರಿ ತಹಶೀಲ್ದಾರ್ ಗೆ ಆವಾಜ್ ಹಾಕೋಕೆ ಹೋಗಿ ಇದೀಗ ಸಸ್ಪೆಂಡ್ ಆಗಿದ್ದಾರೆ.ನಿನ್ನೆ ಚಿಕ್ಕಬಳ್ಳಾಪುರದ ಸರ್ಕಾರಿ ಜಮೀನಿನಲ್ಲಿ ಬೀಟಿ ಮರ ಕಡಿಯುತ್ತಿದ್ದ ಬಗ್ಗೆ ಪ್ರೊಬೆಷನರಿ ತಹಶೀಲ್ದಾರ್ ಗೆ ಮಾಹಿತಿ ಬಂದಿತ್ತು. ಅದನ್ನ ತಿಳಿದ ಸುದರ್ಶನ್ ಗ್ರಾಮಸಹಾಯಕರನ್ನು ಮರಕಡಿಯುತ್ತಿದ್ದ ಸ್ಥಳಕ್ಕೆ ಕಳುಹಿಸಿಕೊಟ್ಟಿದ್ದರು.
20.ಬೀದಿ ನಾಯಿಗಳ ಸಂತಾನ ಹರಣದಲ್ಲಿ ಅಕ್ರಮ ನಡಿಸಿದ್ದಾರ ಎಂದು ಆರೋಪಿಸಿ ಬಿಬಿಎಂಪಿ ಜಂಟಿ ನಿರ್ದೇಶಕ ಡಾ.ಜಿ.ಆನಂದ್ ವಿರುದ್ಧ ಲೋಕಾಯುಕ್ತ ದೂರು ಸಲ್ಲಿಕೆಯಾಗಿದೆ. ಮಹದೇವಪುರ ವಲಯದಲ್ಲಿ 2015 ಹಾಗೂ 2016 ಸಾಲಿನ ಕೇವಲ ಐದು ತಿಂಗಳಲ್ಲಿ ಪ್ರತಿ ದಿನ ೬೦೦ ನಾಯಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು 2 ಕೋಟಿ 55 ಲಕ್ಷ ಬಿಲ್ ಪಾವತಿ ಮಾಡಿದ್ದಾರೆ.
21.ಪೊಲೀಸರು ಪಾಪಿಗಳ ಲೋಕಕ್ಕೆ ಬ್ರೇಕ್ ಹಾಕೋಕೆ ರೌಡಿಪರೇಡ್, ಸ್ಲಂ ರೈಡ್, ಗಡಿಪಾರಿನಂತಹ ಕೆಲ್ಸಕ್ಕೆ ಕೈಹಾಕ್ತಿದ್ರು. ಆದ್ರೆ, ಇದೀಗ ರೌಡಿಗಳ ಎದೆನಡುಗಿಸಲು ಸರ್ವಿಸ್ ರಿವಾಲ್ವಾರ್ ಹಿಡಿದು ನಿಂತಿದ್ದಾರೆ. ಮೊನ್ನೆ ತಡರಾತ್ರಿ ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಬಲ್ ಮರ್ಡರ್ ನಡೆದಿತ್ತು. ರೌಡಿಶೀಟರ್ ಪಳನಿ ಹಾಗೂ ಮುರುಗನ್ ಎಂಬವರನ್ನ ರೌಡಿ ಬಿಟಿಎಸ್ ಮಂಜನ ಟೀಂ ನೆಡುರಸ್ತೆಯಲ್ಲೇ ಕೊಚ್ಚಿ ಕೆಡವಿತ್ತು. ಈ ಘಟನೆಯಿಂದ ಇಡೀ ಕೋಣನಕೊಂಟೆಯ ಜನ ಭಯಭೀತರಾಗಿದ್ದರು.
22.ಕಾಮಿಕ್ ಕ್ಯಾನ್ ಎಂಬ ಸಂಸ್ಥೆ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ . ಮಕ್ಕಳಿಗೆ ನೀಡುವ ಪುಸ್ತಕದಲ್ಲಿ ಅಶ್ಲೀಲ ಫೋಟೋಗಳನ್ನ ಮುದ್ರಿಸಿ ಹಂಚಿದೆ. ಹೀಗಾಗಿ ಮಕ್ಕಳ ಪೋಷಕರು ಬೈಯಪ್ಪನ ಹಳ್ಳಿ ಮತ್ತು ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
23. ಚಳಿಗಾಲದ ಅಧಿವೇಶನದಲ್ಲಿ ಸಮರ್ಪಕ ರಾಜ್ಯ ಶಿಕ್ಷಣ ನೀತಿ ಜಾರಿಗೆ ತರುವಂತೆ ಆಗ್ರಹಿಸಿ ಸರ್ಕಾರಿ ಶಾಲೆ ಉಳಿಸಿ ಆಂದೋಲನ ಸಮಿತಿ ಸುದ್ದಿಗೋಷ್ಟಿ ನಡೆಸಿತು .ಸದ್ಯದ ಸಮ್ಮಿಶ್ರ ಸರ್ಕಾರ ಹಲವಾರು ಕಾರಣಗಳನ್ನು ನೀಡಿ ಸಂಪುಟ ವಿಸ್ತರಣೆಯನ್ನು ಮುಂದೂಡುತ್ತಾ ಬಂದಿದೆ. ಇದರಿಂದಾಗಿ ಶಿಕ್ಷಣ ಇಲಾಖೆಯ ಹಲವಾರು ಕೆಲಸಗಳು ಬಾಕಿ ಉಳಿದಿವೆ. ಇನ್ನು ಈ ಬಗ್ಗೆ ಸಿಎಂ ಕುಮಾರಸ್ವಾಮಿ ಕೂಡ ನಿರ್ಲಕ್ಷ್ಯವನ್ನು ತೋರುತ್ತಿದ್ದಾರೆ.
24. ಲೋಕಸಭಾ ಚುನಾವಣೆ ಹತ್ತಿರವಾಗ್ತಿದ್ದಂತೆ ಚುನಾವಣಾ ಸಿದ್ಧತೆಗಳು ಗರಿಗೆದರಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ವಾಸವಿರುವ ಪ್ರತಿಯೊಬ್ಬ ನಾಗರೀಕನಿಗೂ ವೋಟರ್ ಐಡಿ ನೀಡಿ ಮತದನಾದ ಶೇಕಡಾವಾರು ಪ್ರಮಾಣ ಹೆಚ್ಚಿಸಲು ಬಿಬಿಎಂಪಿ ಕಸರತ್ತು ನಡೆಸಿದೆ. ಬೆಂಗಳೂರಿನಾದ್ಯಂತ 'ವಿಶೇಷ ನೊಂದಣಿ ಆಂದೋಲನ' ಮೂಲಕ ಮಿಂಚಿನ ಕಾರ್ಯಾಚರಣೆ ನಡೆಸಲು ಸಿದ್ಧತೆ ನಡೆಸಿದೆ. ಇಂದು ಸುದ್ದಿಗೋಷ್ಠಿ ನಡೆಸಿದ ಬಿಬಿಎಂಪಿ ಆಯುಕ್ತ ಹಾಗೂ ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಮಂಜುನಾಥ್ ಪ್ರಸಾದ್ , ಇದೇ ತಿಂಗಳ ದಿನಾಂಕ 23,24 ಮತ್ತು 25 ರಂದು ವಿಶೇಷ ನೊಂದಣಿ ಆಂದೋಲನದ ಮೂಲಕ ಮತದಾರರ ಒಟ್ಟಿಯಲ್ಲಿ ಹೆಸರಿಲ್ಲದವರು ಮತದಾನದ ಹಕ್ಕು ಪಡೆಯಲು ಅವಕಾಶ ಮಾಡಿರೋದಾಗಿ ತಿಳಿಸಿದರು.
25.ಮೇಯರ್ ಹಾಗೂ ಡೆಪ್ಯುಟಿ ಮೇಯರ್ ಚುನಾವಣೆ ಜೊತೆಗೆ ನಡೆಯಬೇಕಾದ ಸಮಿತಿ ಚುನಾವಣೆಗೆ ಇದೀಗ ಕಾಲ ಕೂಡಿ ಬಂದಿದೆ. ಈಗಾಗಲೇ ಚುನಾವಣಾ ದಿನಾಂಕ ನಿಗದಿಯಾಗಿದ್ದು, ಆಕಾಂಕ್ಷಿಗಳಿಂದ ಭರ್ಜರಿ ಪೈಪೋಟಿ ನಡೆದಿದೆ. ಆದರೆ ಹನ್ನೆರಡು ಸಮಿತಿಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರ ನಡುವೆ ಸಮಿತಿಗಳ ಹಂಚಿಕೆ ಮಾಡೋದು ತಲೆನೋವಾಗಿದೆ.
26.ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತೊಂದು ವಿವಾದಾತ್ಮಕ ಸುತ್ತೊಲೆ ಹೊರಡಿಸುವ ಮೂಲಕ ಯಡವಟ್ಟು ಮಾಡಿಕೊಂಡಿದೆ. ಕಳೆದ ವಾರವಷ್ಟೇ ಪ್ರಾಯೋಗಿಕ ತರಗತಿಯಲ್ಲಿ ಕೀಟ ಪಕ್ಷಿ ಪಕ್ಷಿ ಬ್ಯಾನ್ ಮಾಡುವ ಮೂಲಕ ವಿಜ್ಞಾನ ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಇಲಾಖೆ ಈ ಬಾರಿ ಮೊಬೈಲ್ ಲ್ಯಾಪ್ ಟಾಪ್ ಬ್ಯಾನ್ ಮಾಡಲು ಹೋಗಿ ಪೇಚಿಗೆ ಸಿಲುಕಿದೆ.
27. ಗಾಯತ್ರಿನಗರದ 7ನೇ ಅಡ್ಡರಸ್ತೆಯಿಂದ ವಿವೇಕಾನಂದ ಕಾಲೇಜ್ಗೆ ಸಂಪರ್ಕ ಕಲ್ಪಿಸೋ ರಸ್ತೆಯೇ ವಿವಾದಿತ ರೋಡ್.. ಕೆಲ ವರ್ಷಗಳ ಹಿಂದೆ ಪ್ರದೀಪ್ ಅನ್ನೋರು ಈ ಜಾಗವನ್ನ ಸಾರ್ವಜನಿಕ ಕಾರ್ಯಕ್ಕೆ ಬಳಸಿಕೊಳ್ಳಲಿ ಅಂತ ಸಿದ್ದರಮಣ ಯೋಗಾಶ್ರಮ ಸೇವಾ ಟ್ರಸ್ಟ್ಗೆ ನೀಡಿದ್ದರು.. ಆದರೆ ಸಿದ್ದರಮಣ ಸೇವಾ ಟ್ರಸ್ಟ್ನವರು ಈ ಜಾಗವನ್ನ ಬೇರೊಬ್ಬರಿಗೆ ಲೀಜ್ಗೆ ನೀಡಿದ್ದಾರೆ.
28. ರೋಟರಿ ಕ್ಲಬ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಡಯಾಬಿಟಿಕ್ ರೆಟನೋಪತಿ ಬಗ್ಗೆ ಜಾಗೃತಿ ಮೂಡಿಸಿದರು. ಮೆಜೆಸ್ಟಿಕ್ ನಲ್ಲಿ ಪ್ರಯಾಣಿಕರಿಗೆ ಡಯಾಬಿಟಿಕ್ ರೆಟನೋಪತಿ ಬಗ್ಗೆ ಕರಪತ್ರಗಳನ್ನ ಹಂಚಿ ಜಾಗೃತಿ ಮೂಡಿಸಿದರು. ಸಕ್ಕರೆ ಕಾಯಿಲೆಯಿಂದ ಕಣ್ಣಿಗೆ ತೊಂದರೆಯಾಗದಂತೆ ಮುನ್ನೇಚ್ಚರಿಕೆಯಾಗಿ ಕೈಗೊಳ್ಳುವ ಕ್ರಮಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.
29. ಮಹಾನಗರಿ ಬೆಂಗಳೂರಲ್ಲಿ ಸುಮಾರು ಒಂದು ಕೋಟಿಗೂ ಅಧಿಕ ಜನ ವಾಸವಿದ್ದಾರೆ. ಜನಸಂಖ್ಯೆ ಹೆಚ್ಚಾದಂತೆ ವಾಹನಗಳ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ. ವಾಹನಗಳು ಹೆಚ್ಚಾದಂತೆ ವಾಯು ಮಾಲಿನ್ಯ,ಮಿತಿ ಮೀರುತ್ತಿದೆ. ಮಾಲಿನ್ಯ ಕಡಿಮೆ ಮಾಡೋ ನಿಟ್ಟಿನಲ್ಲಿ ಸರ್ಕಾರ ಕೂಡ ಕ್ರಮಗಳನ್ನ ಕೈಗೊಳ್ಳುತ್ತಲೇ ಇದೆ. ಆದ್ರೆ ಮಾಲಿನ್ಯ ಮಾತ್ರ ಕಡಿಮೆಯಾಗುತ್ತಿಲ್ಲ. ಈ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಇವತ್ತು ಮಹತ್ವದ ಹೆಜ್ಜೆಯನ್ನಿಟ್ಟು ವಾಹನಗಳಿಂದಂಟಾಗುವ ವಾಯುಮಾಲೀನ್ಯ ನಿಯಂತ್ರಣ ಮಾಸಾಚರಣೆ ಮಾಡಿತ್ತು.
30.ಇಂಜಿನೀರಿಂಗ್ ಕಾಲೇಜುಗಳಲ್ಲಿ ಓಪನ್ ಬುಕ್ ಎಕ್ಸಾಂ ಪರಿಚಯಿಸಲು ತಾಂತ್ರಿಕ ಶಿಕ್ಷಣ ಇಲಾಖೆ ಅನುಮತಿ ನೀಡಿದೆ. ಇಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಎರಡು ದಿನಗಳ ಟೆಕ್ ವಿಸಿ ಸಮ್ಮೇಳನ ಆಯೋಜಿಸಲಾಗಿತ್ತು. ಸಮ್ಮೇಳನದಲ್ಲಿ ರಾಜ್ಯಪಾಲ ವಜುಬಾಯಿ ವಾಲಾ,ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ,ಎಐಸಿಟಿಇ ಅದ್ಯಕ್ಷ ಅನಿಲ್ ಸಹಸ್ರಬುದ್ದೆ ಸೇರಿದಂತೆ ಹಲವು ಶಿಕ್ಷಣ ತಜ್ಞರು ಭಾಗವಹಿಸಿದ್ದರು.
31.ಆಸ್ಟ್ರೇಲಿಯಾ ವಿರುದ್ದ ನಡೆಯುತ್ತಿರುವ 2ನೇ ಟಿ20ದಲ್ಲಿ ಟೀಮ್ ಇಂಡಿಯಾ ಟಾಸ್ ಗೆದ್ದು ಫೀಲ್ಡಿಂಗ್ಆಯ್ಕೆ ಮಾಡಿಕೊಂಡಿದೆ. ಮೆಲ್ಬೋರ್ನಲ್ಲಿ ಈ ಪಂದ್ಯ ನಡೆಯುತ್ತಿದ್ದು ತಂಡದಲ್ಲಿ ಯಾವುದೇ ಬದಲಾವಣೆ ಮಾಡದೇ ಮುಂದುವರರೆಸಿದ್ದಾರೆ. ಇನ್ನು ಈಗಾಗಲೇ ಬ್ರಿಸ್ಬೇನ್ನಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಪಡೆ ಮುಗ್ಗರಿಸಿದ್ದು ಇಂದು ನಡೆಯುವ ಪಂದ್ಯ ಕೊಹ್ಲಿ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.
32.ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ-ಟ್ವೆಂಟಿ ಪಂದ್ಯ ಇಂದು ಮೆಲ್ಬರ್ನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಸರಣಿಯ ಮೊದಲ ಪಂದ್ಯದಲ್ಲೇ ಸೋಲು ಅನುಭವಿಸಿರುವ ಟೀಮ್ ಇಂಡಿಯಾ, ಇಂದು ಕಾಂಗರೂಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಭರ್ಜರಿ ತಯಾರಿ ನಡೆಸಿಕೊಂಡಿದೆ. ಈ ಪಂದ್ಯ ಗೆಲ್ಲಲು ಕ್ಯಾಪ್ಟನ್ ವಿರಾಟ್ ಕೊಹ್ಲಿ ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದು, ಅಲ್ಲದೇ ತಂಡದಲ್ಲೂ ಸಣ್ಣಪುಟ್ಟ ಬದಲಾವಣೆ ಮಾಡವ ಸಾಧ್ಯತೆ ಇದೆ.
33.ಸ್ಯಾಂಡಲ್ವುಡ್ ಅಂಗಳದಲ್ಲಿ ಸೆನ್ಸೇಷನಲ್ ಸ್ಟಾರ್ ಆಗಿ ಶೈನ್ ಆಗ್ತಿರೋ ಹ್ಯಾಟ್ರಿಕ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಇದೀಗ ಪ್ರತೀ ದಿನ, ಪ್ರತೀ ಕ್ಷಣ ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಆಗ್ತಿದ್ದಾರೆ. ಮಾಡಿದ ಮೂರೇ ಸಿನಿಮಾಗಳಿಂದ ಎಲ್ಲಿಲ್ಲದ ಮನ್ನಣೆ, ಸ್ಟಾರ್ಡಮ್ ಪಡೆದಿರೋ ಧ್ರುವ, ಮಾಸ್ ಸಿನಿಪ್ರಿಯರ ಆ್ಯಕ್ಷನ್ ಗಾಡ್ ಆಗಿ ಪರಿಣಮಿಸಿದ್ದಾರೆ.
34.ನಟ ಅಜಯ್ರಾವ್ ಅಪ್ಪ ಆದ ಸಂತಸದಲ್ಲಿದ್ದಾರೆ. ಇಷ್ಟಪಟ್ಟ ಹುಡುಗಿಯನ್ನೇ ಮದುವೆ ಆಗಿದ್ದ ನಟ ಅಜಯ್ ರಾವ್ ಇದೀಗ ತಂದೆಯಾಗಿ ಬಡ್ತಿ ಪಡೆದಿದ್ದಾರೆ.ನಿನ್ನೆ ರಾತ್ರಿ ಅಜಯ್ ರಾವ್ ದಂಪತಿಗೆ ಹೆಣ್ಣು ಮಗು ಜನಿಸಿದೆ. ಈ ಬಗ್ಗೆ ಸಂತಸ ಹಂಚಿಕೊಂಡ ನಟ ಅಜಯ್, ಅಪ್ಪ ಆಗ್ತಿದ್ದೀನಿ, ನನಗೆ ಈ ಘಳಿಗೆ ಎಲ್ಲಿಲ್ಲದ ಖುಷಿ ಕೊಟ್ಟಿದೆ ಅಂತ ಟಿವಿ5 ಜೊತೆ ಸಂತಸ ಹಂಚಿಕೊಂಡಿದ್ದಾರೆ.
35.ಬಿಸಿಲ ನಾಡು ರಾಯಚೂರಿನಲ್ಲಿ ಬೇಸಿಗೆಗು ಮುನ್ನವೇ ನೀರಿಗಾಗಿ ಪರದಾಟ ಶುರುವಾಗಿದೆ. ಇಂಥ ನೀರಿನ ಬಿಸಿ ಈಗ ರಿಮ್ಸ್ ಆಸ್ಪತ್ರೆಗೆ ತಟ್ಟಿದ್ದು, ಆಸ್ಪತ್ರೆಯಲ್ಲಿ ರೋಗಿಗಳು ಮತ್ತು ಅವ್ರ ಸಂಬಂಧಿಕರು ನೀರಿಗಾಗಿ ಪರದಾಡುವಂತಾಗಿದೆ.
36.ಭಾನುವಾರ ಮಂಗಳೂರಿನಲ್ಲಿ ಹಿಂದೂ ಪರ ಸಂಘಟನೆಗಳು ನಡೆಸ್ತಿರೋ ಆಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣದ ಜನಾಗ್ರಹ ರ್ಯಾಲಿಗೆ ಉಚಿತವಾಗಿ ಖಾಸಗಿ ಬಸ್ಗಳನ್ನು ನೀಡಿರೋದಕ್ಕೆ ವ್ಯಾಪಕ ಆಕ್ರೋಶ ಕೇಳಿ ಬಂದಿದೆ. ವಿಶ್ವಹಿಂದೂ ಪರಿಷತ್, ಬಜರಂಗದಳದ ನೇತೃತ್ವದಲ್ಲಿ ಭಾನುವಾರ ಬೃಹತ್ ಜನಾಗ್ರಹ ಸಮಾವೇಶ ನಡೆಯಲಿದ್ದು, ಜಿಲ್ಲೆಯ ಮೂಲೆಮೂಲೆಗಳಿಂದಲೂ ಹಿಂದೂ ಕಾರ್ಯಕರ್ತರು ಆಗಮಿಸಲಿದ್ದಾರೆ.
37.ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಸಲುವಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇವತ್ತು ಮಂಡ್ಯಕ್ಕೆ ಆಗಮಿಸಿದ್ರು. ಆದ್ರೆ ಸಿಎಂಗೆ ಒಂದೆಡೆ ರೈತನ ಆತ್ಮಹತ್ಯೆಯ ಸ್ವಾಗತ ಸಿಕ್ಕಿದ್ರೆ, ಮತ್ತೊಂದು ಕಡೆ ಸಿಎಂ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತಸಂಘದ ಕಾರ್ಯಕರ್ತರ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಮುಗಿಬಿದ್ದ ಪರಿಣಾಮ ಅಕ್ಷರಶ: ದೊಡ್ಡ ಗಲಾಟೆಯೇ ಸಂಭವಿಸಿತು.
38. ಕೊಡಗಿನಲ್ಲಿ ಇಂದು ಸುಗ್ಗಿ ಹಬ್ಬ ಹುತ್ತರಿ ಸಂಭ್ರಮ. ರೈತರು ಬೆಳೆದ ಭತ್ತದ ಬೆಳೆ ಕಟಾವಿಗೆ ಬಂದಿದ್ದು,
ಧಾನ್ಯಲಕ್ಷ್ಮಿಯನ್ನ ಸಡಗರ ಸಂಭ್ರಮದಿಂದ ಮನೆ ಸೇರಿಸಿಕೊಳ್ಳೋಕೆ ಸಿದ್ಧತೆ ನಡೆಸಿದ್ದಾರೆ. ಹೊಸ ಭತ್ತದ ಪೈರನ್ನು ಪೂಜೆ ಪುನಸ್ಕಾರ ಒಡ್ಡೋಲಗ ಸಮೇತ ಕೊಯ್ಲು ಮಾಡಿ ಮನೆಗೆ ತರುವ ಹಬ್ಬವೇ ಹುತ್ತರಿ. ರಾಜ್ಯದ ಇತರೆಡೆ ಸುಗ್ಗಿ ಹಬ್ಬ ಆಚರಿಸುವಂತೆಯೇ ಇಲ್ಲಿ ಹುತ್ತರಿಯನ್ನ ಆಚರಿಸಲಾಗುತ್ತೆ. ತಮ್ಮ ಗದ್ದೆಯಲ್ಲಿ ಬೆಳೆದ ಬತ್ತದ ಗದ್ದೆಗೆ ಎಲ್ಲರೂ ಸಾಂಪ್ರದಾಯಿಕ ಉಡುಪಿನಲ್ಲಿ ತೆರಳಿ ಪೂಜೆ ಸಲ್ಲಿಸಿ ಪಟಾಕಿ ಸಿಡಿಸಿ ಬೆಳೆಯನ್ನ ಕೊಯ್ದು ಮನೆಗೆ ತುಂಬಿಸಿಕೊಳ್ಳುತ್ತಾರೆ. ಆದರೆ ಈ ಬಾರಿಯ ಪ್ರಕೃತಿ ವಿಕೋಪದಿಂದ ಬಹಳಷ್ಟು ಕಡೆಗಳಲ್ಲಿ ಭತ್ತದ ಗದ್ದೆಗಳೇ ಕೊಚ್ಚಿ ಹೋಗಿವೆ. ಹಾಗಾಗಿ ಭೂ ಕುಸಿತವಾದ ಗ್ರಾಮಗಳಲ್ಲಿ ಸೂತಕದ ಛಾಯೆ ಇದ್ದು ಹುತ್ತರಿ ಸಂಭ್ರಮ ಕಂಡು ಬರುತ್ತಿಲ್ಲ.
39.ಚಾಲಾಕಿತನದಿಂದ ಬೈಕ್ ಕಳ್ಳತನ ಮಾಡಿ, ಊರೂರು ಸುತ್ತುತ್ತಿದ್ದ ಬೈಕ್ ಕಳ್ಳ ಇದೀಗ ಬೈಕ್ ಸಮೇತ ಮಾಲಿಕರ ಕೈಗೆ ಸಿಕ್ಕಬಿದ್ದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳದ ಕಾರಟಗಿ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು,ಮ ಉಳೇನೂರು ಗ್ರಾಮದ ವೀರನಗೌಡ ಎನ್ನುವ ವ್ಯಕ್ತಿ ಕಳೇದ 16 ರಂದು,ಹನುಮರೆಡ್ಡಿ ಎನ್ನುವ ಮನೆಮುಂದೆ ನಿಲ್ಲಿಸಿದ್ದ ಬೈಕನ್ನು ಬೆಳಗಿನ ಜಾವವೇ ಕಳ್ಳತನ ಮಾಡಿಕೊಂಡು ಹೋಗಿದ್ದ. ಇನ್ನು ಶೋಂರಿಂದ ಬೈಕ್ ತಂದು ಮೂರೇ ದಿನದಲ್ಲಿ ಕಳ್ಳತನವಾಗಿದ್ದನ್ನು ಕಂಡು ಮಾಲಿಕರು ಬೆಚ್ಚಿಬಿದ್ದಿದರು.
40.ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಕಿರಗೇರಿ ಗ್ರಾಮದ ಬಳಿ ತುಂಗಭದ್ರಾ ನದಿ ಹಾದು ಹೋಗಿದೆ. ಅಲ್ಲಿ ಕಳೆದ ಕೆಲವು ದಿನಗಳ ಹಿಂದೆ ಅಧಿಕಾರಿಗಳು ಜೆಸಿಬಿ ಮೂಲಕ ನದಿಯಿಂದ ಮರಳು ತೆಗೆದು ಅಕ್ರಮವಾಗಿ ಸಾಗಿಸಿದ್ದಾರೆ.
41.ಮಾಜಿ ಸಿಎಂ ಸಿದ್ದರಾಮಯ್ಯ ಕನಸಿಗೆ ಇಲ್ಲಿ ಬೆಲೆಯೇ ಇಲ್ಲ. ಹಸಿವು ಮುಕ್ತ ರಾಜ್ಯ ಮಾಡುವ ಹಿನ್ನಲೆಯಲ್ಲಿ ಕಡಿಮೆ ಖರ್ಚಿನಲ್ಲಿ ಬಡವರಿಗೆ ಮೂರು ಹೊತ್ತು ಊಟ ಸಿಗಬೇಕೆಂದು ಜಾರಿಗೆ ತಂದ ಯೋಜನೆಯೇ ಈ ಇಂದಿರಾ ಕ್ಯಾಂಟೀನ್. ಆದರೆ ಆರು ತಿಂಗಳಿಂದ ಉದ್ಘಾಟನೆ ಭಾಗ್ಯ ಸಿಗದೆ ಇಂದಿರಾ ಕ್ಯಾಂಟೀನ್ ಸಾಮಾಗ್ರಿಗಳು ಚನ್ನಪಟ್ಟಣ ನಗರಸಭೆ ಸಭಾಂಗಣದಲ್ಲಿ ತುಕ್ಕು ಹಿಡಿಯುತ್ತಿವೆ.
42.ಹೊಸ ಅಟೋ ರಿಕ್ಷಾಗಳಿಗೆ ಪರಮಿಟ್ ನೀಡುತ್ತಿರುವುದನ್ನು ಖಂಡಿಸಿ ಆಟೋ ರಿಕ್ಷಾ ಚಾಲಕರು ಹಾಗೂ ಮಾಲೀಕರು ಪ್ರತಿಭಟನೆ ಮಾಡಿದರು. ಹುಬ್ಬಳ್ಳಿಯ ತಹಶೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿದ ಅವರು ಆರ್ಟಿಓ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹಲವು ಬಾರಿ ಮನವಿ ಮಾಡಿದರು ಹೊಸ ಆಟೋ ಪರಮಿಟ್ ನೀಡಲಾಗುತ್ತಿದೆ. ಆರ್ಟಿಓ ಅಧಿಕಾರಿಗಳು ಅಟೋ ರಿಕ್ಷಾಗಳ ಚಾಲಕರ ವಿರೋಧಿ ನೀತಿ ಅನುಸರಿಸುತ್ತಿದ್ದಾರೆಂದು ಆರೋಪ ಮಾಡಿದರು. ಅವಳಿ ನಗರದಾದ್ಯಂತ 150 ಕ್ಕೂ ಹೆಚ್ಚು ಆಟೋ ನಿಲ್ದಾಣಗಳನ್ನು ಜಿಲ್ಲಾಡಳಿತ ಮಾಡಿಕೊಡಬೇಕೆಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
43.ಶಬರಿ ಮಲೈ ದೇವಸ್ಥಾನಕ್ಕೆ ಸಂಸತ್ತಿನಲ್ಲಿ ಕಾನೂನು ಮಾಡಬೇಕೆಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿಯಿಂದ ಪ್ರತಿಭಟನೆ ಮಾಡಲಾಯಿತು. ಹುಬ್ಬಳ್ಳಿಯ ಮಿನಿ ವಿಧಾನ ಸೌದದ ಎದುರು ಪ್ರತಿಭಟನೆ ಮಾಡಿದ ಕಾರ್ಯಕರ್ತರು, ಕೇರಳದ ಶಬರಿಮಲೈ ದೇವಸ್ಥಾನದ ಧರ್ಮಪರಂಪರೆಗಳ ರಕ್ಷಣೆ ಮಾಡಬೇಕು ಅಂತಾ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ಗೆ ಆಗ್ರಹಿಸಿದರು.
44.ಹುಬ್ಬಳ್ಳಿಯಲ್ಲಿ ಇಂದಿರಾ ಕ್ಯಾಂಟೀನ್ಗಳ ನಿರ್ವಹಣೆಯ ಕುರಿತು ಅಸಮಾಧಾನ ಶುರುವಾಗಿದೆ. ಬಡವರ ಬದಲು ಗುತ್ತಿಗೆದಾರರ ಹೊಟ್ಟೆ ತುಂಬಿಸಲು ಕ್ಯಾಂಟೀನ್ಗಳನ್ನು ನಿರ್ಮಿಸಲಾಗಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಮಹಾನಗರ ಪಾಲಿಕೆಯಿಂದ ನಿರ್ವಹಣಾ ವೆಚ್ಚ ಕೊಡುವುದಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ.
45.ಆಗತಾನೇ ಜನಿಸಿದ ಗಂಡು ಮಗುವನ್ನ ಹೆತ್ತತಾಯಿಯೇ ರಸ್ತೆಯಲ್ಲಿ ಬಿಟ್ಟು ಹೋಗಿರೋ ಅಮಾನವೀಯ ಘಟನೆ ಕಲಬುರಗಿಯಲ್ಲಿ ನಡೆದಿದೆ. ನಗರದ ಆಯ್ ವಾನ್ ಶಾಹಿ ರಸ್ತೆಯಲ್ಲಿ ರಾತ್ರಿ ಘಟನೆ ನಡೆದಿದ್ದು ಮಗು ಬಿಟ್ಟು ಹೋದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ಯಾರು ಆತಾಯಿ ಮತ್ತು ಯಾಕೆ ಈ ಕೃತ್ಯಕ್ಕೆ ಮುಂದಾದಳು ಅನ್ನೋದು ಮಾತ್ರ ತನಿಖೆಯಾಗಬೇಕಿದೆ.
46. ಧಾರವಾಡ ತಾಲೂಕಿನ ಮುಗದ ಗ್ರಾಮದ ರೈಲ್ವೇ ನಿಲ್ಧಾಣ. ಈ ನಿಲ್ದಾಣ ನೋಡಿದರೆ ಇದು ರೈಲ್ವೆ ನಿಲ್ದಾಣವೋ ಅಥವಾ ಉದ್ಯಾನವನವೋ ಅನ್ನೋ ರೀತಿಯಲ್ಲಿದೆ. ಅಷ್ಟೇ ಅಲ್ಲ ಸ್ವಚ್ಚತೆಗೆ ಮೊದಲ ಆದ್ಯತೆ ನೀಡಲಾಗಿದೆ. ಇದು ಕೇಂದ್ರ ರೈಲ್ವೆ ಸಚಿವರ ಗಮನವನ್ನೂ ಸೆಳೆದಿದೆ. ಈ ರೈಲು ನಿಲ್ದಾಣ ಉಳಿದ ರೈಲ್ವೆ ನಿಲ್ದಾಣಗಳಿಗೆ ಮಾದರಿ ಅಂತಾ ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಟ್ವೀಟ್ ಮಾಡಿದ್ದಾರೆ.
47.ದಾವಣಗೆರೆ ತಾಲ್ಲೂಕಿನ ಕಬ್ಬೂರು ಗ್ರಾಮದಲ್ಲಿ. ಗ್ರಾಮದ ಕೆರೆ ಇದೀಗ ಪಕ್ಷಿಧಾಮವಾಗಿ ಮಾರ್ಪಟ್ಟಿದೆ. ಚಳಿಗಾಲ ಆರಂಭವಾದರೆ ಸಾಕು ಕಬ್ಬೂರು ಕೆರೆಗೆ ಪಕ್ಷಿಗಳ ಗುಂಪು ಲಗ್ಗೆ ಇಡುತ್ತದೆ. ವಿವಿಧ ಜಾತಿಯ ಸಾವಿರಾರು ಪಕ್ಷಿಗಳು ಈ ಕೆರೆಗೆ ಬರುತ್ತಿದ್ದು ಕೆರೆ ಇದೀಗ ಪಕ್ಷಿಧಾಮವಾಗಿ ಮಾರ್ಪಟ್ಟಿದೆ. ದೂರದ ಊರುಗಳಿಗೆ ತೆರಳಿ ಪಕ್ಷಿಗಳನ್ನು ಕಣ್ ತುಂಬಿ ಕೊಂಡು ಬರುತ್ತಿದ್ದ ಜನರು ಇದೀಗ ಕಬ್ಬೂರು ಕೆರೆಗೆ ಬಂದು ವಿವಿಧ ಜಾತಿಯ ಪಕ್ಷಿಗಳನ್ನು ನೋಡಿ ಸಖತ್ ಎಂಜಾಯ್ ಮಾಡ್ತಾ ಇದ್ದಾರೆ.
48.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ 19.3 ಓವರ್ಗಳಲ್ಲಿ 112 ರನ್ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿತು. ಒಂದು ಹಂತದಲ್ಲಿ 13.4 ಓವರ್ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 89 ರನ್ ಗಳಿಸಿ ಸುಸ್ಥಿತಿಯಲ್ಲಿದ್ದ ಭಾರತ 112 ರನ್ ಗಳಿಸುವುದೆರೆಡೆಗೆ ಸರ್ವ ಪತನವನ್ನು ಕಂಡಿತ್ತು. ಈ ಮೂಲಕ ಕೊನೆಯ 23 ರನ್ ಪೇರಿಸುವುದರೆಡೆಗೆ ಏಳು ವಿಕೆಟುಗಳನ್ನು ಕಳೆದುಕೊಂಡಿತು. ಭಾರತದ ಪರ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನಾ 23 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 34 ರನ್ ಗಳಿಸಿದರು.
49.ಕ್ರಿಶ್ಚಿಯನ್ ಧರ್ಮ ಪ್ರಚಾರಕ ಮತ್ತು ಸಾಹಸಿ ಎನ್ನಿಸಿಕೊಂಡಿದ್ದ ಯುವಕನೊಬ್ಬ ಬುಡಕಟ್ಟು ಜನರನ್ನು ಭೇಟಿಯಾಗಲು ಹೋಗಿ ಪ್ರಾಣತೆತ್ತ ಘಟನೆ ನಡೆದಿದೆ.ಎಲ್ಲರಿಂದ ದೂರವಿದ್ದ ಬುಡಕಟ್ಟು ಜನಾಂಗದವರನ್ನು ಭೇಟಿಯಾಗಲು ಹೋಗಿದ್ದ ಜಾನ್ ಅಲೆನ್ ಚೈ(26) ಬುಡಕಟ್ಟು ಜನಾಂಗದವರು ಬಿಟ್ಟ ಬಾಣಕ್ಕೆ ಪ್ರಾಣ ತೆತ್ತಿದ್ದಾನೆ.
50.ಕಿಚ್ಚ ಸುದೀಪ್ ಅಭಿಮಾನಿ ಲಕ್ಷ್ಮಣ್ ಗೌಡ ಎಂಬಾತ ಟ್ವೀಟರ್ನಲ್ಲಿ ತನ್ನ ತಾಯಿಯ ಫೋಟೋ ಹಾಕಿ, ತನ್ನ ತಾಯಿ ಮಂಗಳಮ್ಮ ನಾಲ್ಕು ವರ್ಷದಿಂದ ಬ್ರೀಸ್ಟ್ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಎರಡು ಬಾರಿ ಆಪರೇಷನ್ ಆಗಿದೆ. ಮತ್ತೆ ಆಪರೇಷನ್ ಮಾಡಬೇಕು. ಕಷ್ಟದಲ್ಲಿರೋದ್ರಿಂದ ಸಹಾಯದ ಅವಶ್ಯಕತೆ ಇದೆ ಎಂದು ಸುದೀಪ್ ಬಳಿ ಸಹಾಯ ಹಸ್ತ ಚಾಚಿದ್ದಾನೆ.ಇದಕ್ಕೆ ಸ್ಪಂದಿಸಿದ ಕಿಚ್ಚ ಸುದೀಪ್, ಆಸ್ಪತ್ರೆಯ ವಿಳಾಸ ತಿಳಿಸಿ. ಕೈಲಾದ ಸಹಾಯ ಮಾಡುವೆ ಎಂದು ಹೇಳಿದ್ದಾರೆ. ಈ ಮೂಲಕ ಸುದೀಪ್ ತನ್ನ ಅಭಿಮಾನಿಯ ನೆರವಿಗೆ ಮುಂದಾಗಿದ್ದಾರೆ.