Top

ದರ ಕುಸಿತದಿಂದ ಈರುಳ್ಳಿ ಬೆಳೆಗಾರರ ಕಣ್ಣಲ್ಲಿ ನೀರು!

ದರ ಕುಸಿತದಿಂದ ಈರುಳ್ಳಿ ಬೆಳೆಗಾರರ ಕಣ್ಣಲ್ಲಿ ನೀರು!
X

ರೈತರು, ಕಬ್ಬು ಬೆಳೆಗಾರರು ದರ ಕುಸಿತದಿಂದ ಕಂಗಾಲಾಗಿ ಬೆಂಬಲ ಬೆಲೆಗೆ ಪಟ್ಟು ಹಿಡಿದಿದ್ದಾರೆ. ಇದೀಗ ಈರುಳ್ಳಿ ಬೆಳೆಗಾರರು ಕೂಡ ದರ ಕುಸಿತದಿಂದ ಕಂಗೆಟ್ಟಿದ್ದಾರೆ. ಸರಕಾರ ಇದೀಗ ಈರುಳ್ಳಿ ಬೆಳೆಗಾರರ ನೆರವಿಗ ಬರಬೇಕಿದೆ.

ಕೆಲವು ದಿನಗಳಿಂದ ಈರುಳ್ಳಿಯ ಬೆಲೆ ಸತತವಾಗಿ ಇಳಿಯುತ್ತಿದೆ. ಇದರಿಂದ ರೈತರು ಕಂಗಲಾಗಿದ್ದಾರೆ. ಈರುಳ್ಳಿ ಬೆಲೆ ಕುಸಿತದಿಂದ ನೊಂದ ರೈತನೊಬ್ಬ ಮಧ್ಯಪ್ರವೇಶ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಗೆ ಟ್ವೀಟರ್​ನಲ್ಲಿ ಮನವಿ ಮಾಡಿದ್ದಾರೆ.

ಕೆಜಿಗೆ 35 ರಿಂದ 40 ರೂಪಾಯಿಗಳಿದ್ದ ಈರುಳ್ಳಿ ಬೆಲೆ ಇದೀಗ ಪ್ರತಿ ಕ್ವಿಂಟಲ್​ಗೆ 200 ರಿಂದ 700 ರೂ ಬೆಲೆಗೆ ಕುಸಿಇದೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಮೂಟೆಗೆ 100 ರೂ. ಕೊಟ್ಟರೂ ಕೊಳ್ಳುವವರಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಚಿಲ್ಲರೆ ಮಾರಾಟದಲ್ಲೂ 10 ರೂ.ಗೆ 3 ಕೆಜಿ ಮಾರಾಟ ಮಾಡಲಾಗುತ್ತಿದೆ.

ನಾಲ್ಕು ವರ್ಷಗಳ ಕಾಲ ಬರಗಾಲದಿಂದ ತತ್ತರಿಸಿದ್ದ ರೈತರು ಹೇಗೂ ಕಷ್ಟಪಟ್ಟು ಸಾಲ ಶೂಲ ಮಾಡಿ ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತೆಗೆದುಕೊಂಡು ಬಂದರೆ, ಸರಿಯಾದ ಬೆಲೆಯಿಲ್ಲದೆ ದಲ್ಲಾಳಿಗಳು ನಿಗದಿ ಮಾಡಿದ ಬೆಲೆಗೆ ಬೆಳೆಯನ್ನು ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕ್ವಿಂಟಲ್‌ಗೆ 200-700 ಬೆಲೆ ನಿಗದಿಯಾಗಿದೆ. 1400 ರೂ ಗಳಿಂದ 200 ರೂ ಗೆ ದಿಢೀರ್ ಕುಸಿತದಿಂದ ಸಾಲಮಾಡಿ ಬೆಳೆ ಬೆಳದ ರೈತರು ಮಾಡಿದ ಖರ್ಚು ಬರುತ್ತಾದೆಯೋ ಇಲ್ಲವೋ ಎನ್ನುವ ಆತಂಕದಲ್ಲಿದ್ದಾರೆ, ಇನ್ನೂ ಮಾರುಕಟ್ಟೆಗೆ ಟ್ರಾಕ್ಟರ್ ಮೂಲಕ ಹೊತ್ತು ತಂದ ಬಾಡಿಗೆಗೆ ನೀಡಲು ಹಣ ಸಾಲುತ್ತಿಲ್ಲ, ಬೆಂಬಲ ಬೆಲೆ ನೀಡಿ ಎಂದು ರೈತರು ಮನವಿಯನ್ನು ಮಾಡಿದ್ದರೆ.

ಇನ್ನು ಈರುಳ್ಳಿ ಕುಸಿತದಿಂದ ಕಂಗಾಲಾದ ಬಾಗಲಕೋಟೆ ರೈತ ಬೆನಕಟ್ಟಿ ಗ್ರಾಮದ ಪ್ರಶಾಂತ ದಾಸಪ್ಪ ಪ್ರಧಾನಿ ನರೇಂದ್ರ ಮೋದಿಗೆ ಟ್ವೀಟ್ ಮಾಡಿದ್ದು, ಈರುಳ್ಳಿ ಬೆಲೆ ಕುಸಿತದಿಂದ ಬೆಳೆದ ರೈತರ ಸಂಕಷ್ಟಕ್ಕೆ ಸಿಲಿಕಿದ್ದಾರೆ,ಕೊಡಲೇ ಸಮಸ್ಯೆಗೆ ಸ್ಫಂದಿಸುವಂತೆ ಮನವಿ‌ ಮಾಡಿದ್ದರೆ.

Next Story

RELATED STORIES