Top

ಹುಷಾರ್​.. ಬೆಂಗಳೂರಿಗೆ ಬಂದಿದೆ ಓಜಿಕುಪ್ಪಂ ಗ್ಯಾಂಗ್​!

ಹುಷಾರ್​.. ಬೆಂಗಳೂರಿಗೆ ಬಂದಿದೆ ಓಜಿಕುಪ್ಪಂ ಗ್ಯಾಂಗ್​!
X

ಹೊರ ರಾಜ್ಯಗಳಿಂದ ಬೆಂಗಳೂರಿಗೆ ಬಂದು ಕಳ್ಳತನ, ದರೋಡೆ ಮಾಡಿ ಹೋಗುವ ಹಲವಾರು ಗ್ಯಾಂಗ್​ಗಳ ಬಗ್ಗೆ ಕೇಳಿದ್ದೀರಿ. ಆದರೆ ಇದೀಗ ಓಜಿಕುಪ್ಪಂ ಎಂಬ 30 ಜನರ ಗ್ಯಾಂಗ್ ರಾಜಧಾನಿಗೆ ಕಾಲಿಟ್ಟಿದ್ದು, ಪೊಲೀಸರಿಗೆ ತಲೆನೋವು ತಂದಿದೆ.

ಹೊರರಾಜ್ಯದಿಂದ ಆಗಮಿಸಿರುವ 30 ಜನರ ಈ ಗ್ಯಾಂಗ್ ಬೆಂಗಳೂರಿಗೆ ಬರುತ್ತಿದ್ದಂತೆ ತಲಾ 6 ಜನರ 5 ಗುಂಪುಗಳಾಗಿ ನಗರದ ಬೇರೆ ಬೇರೆ ಕಡೆಗೆ ಹೋಗುತ್ತದೆ. ಹಣದ ಗಂಟು ಇರುವವರನ್ನು ಗುರುತಿಸಿ ಅವರ ಚಿತ್ತವನ್ನು ಬೇರೆಡೆಗೆ ಸೆಳೆದು ದೋಚಿ ಕ್ಷಣಾರ್ಧದಲ್ಲಿ ಪರಾರಿಯಾಗುತ್ತದೆ. ಒಂದು ವೇಳೆ ಸಿಕ್ಕಿಬಿದ್ದರೂ ಕೂಡಲೇ ವಕೀಲರು ಬಂದು ಜಾಮೀನಿನ ಮೇಲೆ ಬಿಡಿಸಿಕೊಂಡು ಹೋಗುತ್ತದೆ.

ಬೆಂಗಳೂರಿನ ಪ್ರತಿ ಬಡಾವಣೆಗಳನ್ನು ಗುರುತು ಹಾಕಿಕೊಂಡು ಬರುವ ಈ ಗ್ಯಾಂಗ್, ಪ್ರಮುಖವಾಗಿ ದಕ್ಷಿಣ ಭಾಗದ ಪ್ರದೇಶಗಳನ್ನು ಕೇಂದ್ರೀಕರಿಸಿ ದಾಳಿ ನಡೆಸುತ್ತದೆ. ಬೆಂಗಳೂರಿಗೆ ಕಾಲಿಡುತ್ತಿದ್ದಂತೆ ಹೊಸ ಸಿಮ್ ಕಾರ್ಡ್ ಖರೀದಿಸುತ್ತದೆ. ಹಣ ಇರುವವರನ್ನು ಗುರುತಿಸಿದೊಡನೆ ಅವರನ್ನು ಹಿಂಬಾಲಿಸಿ, ಅವರ ಕಾರು ಅಥವಾ ವಾಹನಗಳನ್ನು ಪಂಚರ್ ಮಾಡುತ್ತದೆ. ನಂತರ ಗಮನ ಬೇರೆ ಕಡೆ ಸೆಳೆದು ಹಣ ಲಪಟಾಯಿಸುತ್ತದೆ.

ಹಣ ಎಗಿರಿಸಿದ ಕೂಡಲೇ ತಮ್ಮ ರಾಜ್ಯಗಳಿಗೆ ವಾಪಸ್ ಹೋಗಿ ತಲೆ ಮರೆಸಿಕೊಂಡು ಬಿಡುತ್ತದೆ. ಪೊಲೀಸರು ಇದೀಗ ತಲೆನೋವಾಗಿರುವ ಓಜಿಕುಪ್ಪಂ ಗ್ಯಾಂಗ್​ ಪತ್ತೆಗೆ ಬಲೆ ಬೀಸಿದ್ದು, ವಿಶೇಷ ತಂಡ ರಚಿಸಿದೆ.

Next Story

RELATED STORIES