16 ಎಸೆತದಲ್ಲಿ 74 ರನ್ ಸಿಡಿಸಿದ ಆಫ್ಘಾನಿಸ್ತಾನದ ಶೆಹಜಾದ್!

ಆಫ್ಘಾನಿಸ್ತಾನದ ಸ್ಫೋಟಕ ಬ್ಯಾಟ್ಸ್ಮನ್ ಮೊಹಮದ್ ಶೆಹಜಾದ್ ಶಾರ್ಜಾದಲ್ಲಿ ನಡೆದ ಟಿ-20 ಕ್ರಿಕೆಟ್ ಪಂದ್ಯದಲ್ಲಿ 16 ಎಸೆತಗಳಲ್ಲಿ 74 ರನ್ ಸಿಡಿಸಿ ಅತೀ ವೇಗದ ಅರ್ಧಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ.
ಯುಎಇನಲ್ಲಿ ಟಿ-20 ಕ್ರಿಕೆಟ್ ಟೂರ್ನಿಯ ಎರಡನೇ ಆವೃತ್ತಿ ಆರಂಭಗೊಂಡಿದ್ದು, ಬುಧವಾರ ನಡೆದ ಪಂದ್ಯದಲ್ಲಿ ಆಫ್ಘಾನಿಸ್ತಾನದ ಮೊಹಮದ್ ಶೆಹಜಾದ್ 16 ಎಸೆತಗಳಲ್ಲಿ 8 ಸಿಕ್ಸರ್ ಹಾಗೂ 6 ಬೌಂಡರಿ ಸೇರಿದಂತೆ 74 ರನ್ ಚಚ್ಚಿ ಕ್ರಿಕೆಟ್ ಜಗತ್ತು ಬೆಚ್ಚಿ ಬೀಳುವಂತಹ ಸಾಧನೆ ಮಾಡಿದ್ದಾರೆ.
ಶೆಹಜಾದ್ ದಾಖಲಿಸಿದ ಟಿ-10 ಕ್ರಿಕೆಟ್ನಲ್ಲಿ ಇದು ಅತೀ ವೇಗದ ಅರ್ಧಶತಕದ ನೆರವಿನಿಂದ ರಜಪೂತ್ ತಂಡ 10 ವಿಕೆಟ್ಗಳಿಂದ ಸಿಂಧಿ ತಂಡದ ವಿರುದ್ಧ 6 ಓವರ್ಗಳು ಬಾಕಿ ಇರುವಂತೆಯೇ ಜಯಭೇರಿ ಬಾರಿಸಿತು.
ಮೊಹಮದ್ ನವಾಜ್, ಜೋಫ್ರಾ ಆರ್ಚರ್, ತಿಸರಾ ಪೆರೆರಾ ಮತ್ತು ಫವಾದ್ ಅಹ್ಮದ್ ತಲಾ ಒಂದು ಓವರ್ ಬೌಲಿಂಗ್ ಮಾಡಿದರು. ಆದರೆ ಪ್ರತಿಯೊಬ್ಬರೂ ಕನಿಷ್ಠ 20ಕ್ಕಿಂತ ಅಧಿಕ ರನ್ ಹೊಡೆಸಿಕೊಂಡರು.
ಬ್ರೆಂಡನ್ ಮೆಕಲಂ ಜೊತೆ ಇನಿಂಗ್ಸ್ ಆರಂಭಿಸಿದ ಶೆಹಜಾದ್ 96 ರನ್ ಜೊತೆಯಾಟ ನಿಭಾಯಿಸಿದರು. ಇದರಲ್ಲಿ ಮೆಕಂಲ 8 ಎಸೆತಗಳಲ್ಲಿ 21 ರನ್ ಗಳಿಸಿದರೆ ಉಳಿದೆಲ್ಲಾ ರನ್ ಶೆಹಜಾದ್ ಬ್ಯಾಟ್ನಿಂದ ಹರಿದು ಬಂದಿತು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಸಿಂಧಿ ತಂಡ 10 ಓವರ್ ಗಳಲ್ಲಿ 94 ರನ್ ಗಳಿಸಿತ್ತು. ನಾಯಕ ಶೇನ್ ವ್ಯಾಟ್ಸನ್ 20 ಎಸೆತಗಳಲ್ಲಿ 42 ರನ್ ಗಳಿಸಿದರು.