Top

ಏನು ಮಾತನಾಡಿದರೂ ತಪ್ಪು: ಮಾಧ್ಯಮಗಳ ವಿರುದ್ಧ ಸಿಎಂ ಗರಂ

ಏನು ಮಾತನಾಡಿದರೂ ತಪ್ಪು: ಮಾಧ್ಯಮಗಳ ವಿರುದ್ಧ ಸಿಎಂ ಗರಂ
X

ನಾನೇನೇ ಮಾಡಿದರೂ ಕೆಲವರು ಹಳದಿ ಕಣ್ಣಿನಿಂದ ನೋಡುತ್ತಾರೆ. ಅದಕ್ಕೆ ಎಲ್ಲಾ ವಿಚಾರದಲ್ಲೂ ನನ್ನ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಲಾಗುತ್ತಿದೆ. ಆದ್ದರಿಂದ ಇನ್ನು ಮುಂದೆ ಮಾಧ್ಯಮಗಳನ್ನು ಕರೆಯೋದೇ ಇಲ್ಲ. ಸಭೆ-ಸಮಾರಂಭಗಳಲ್ಲಿ ಮಾತನಾಡಿದ್ದಷ್ಟೇ ಬರೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ಬಡವರ ಬಂಧು ಯೋಜನೆಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಮಾಧ್ಯಮಗಳ ಮುಂದೆ ಮಾತನಾಡುವುದಕ್ಕೆ ಭಯವಾಗುತ್ತಿದೆ. ಏನು ಮಾತನಾಡಿದರೂ ಅದರಲ್ಲಿ ತಪ್ಪು ಹುಡುಕುವ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು.

ನಾನು ಮಾಡಿದ ಒಳ್ಳೆಯ ಕೆಲಸಗಳ ಬಗ್ಗೆ ಮಾತನಾಡುವುದೇ ಇಲ್ಲ. ತಪ್ಪು ಹುಡುಕಿ ಅದನ್ನೇ ದೊಡ್ಡದು ಮಾಡುತ್ತಿವೆ. ಸಕ್ಕರೆ ಕಾರ್ಖಾನೆಗಳ ಜೊತೆ ಒಪ್ಪಂದ ಮಾಡಿಕೊಂಡು ಈಗ ಸಮಸ್ಯೆ ಆಗಿದೆ ಎಂದು ನನ್ನ ಮುಂದೆ ಬಂದರೆ ಹೇಗೆ? ಸಕ್ಕರೆ ಕಾರ್ಖಾನೆ ದುಡ್ಡು ಕೊಡಲ್ಲ ಅಂತ ಪಟ್ಟು ಹಿಡಿದಿದ್ದಾರೆ. ರೈತರು ಕೊಡಿಸಿ ಅಂತ ಕೇಳುತ್ತಿದ್ದಾರೆ ಏನು ಮಾಡಲಿ ಎಂದು ಪ್ರಶ್ನಿಸಿದರು.

ಬಾಗಲಕೋಟೆ, ಹುಬ್ಬಳ್ಳಿ, ಬಿಜಾಪುರ ಅಲ್ಲೇಲ್ಲೋ ಈರುಳ್ಳಿ ಬೆಲೆ ಇಳಿದರೆ ನಾನೇನು ಮಾಡಲಿ. ಅದಕ್ಕೂ ನನ್ನನ್ನು ಹೊಣೆ ಮಾಡಿ ಪ್ರತಿಕೃತಿ ದಹಿಸುವುದು, ಫ್ಲೆಕ್ಸ್ ಸುಡುವುದು, ಕೊಡಲಿಯಿಂದ ಹೊಡೆಯುವುದು ಮಾಡುತ್ತಾರೆ. ಇದರಲ್ಲಿ ನನ್ನದು ಏನು ತಪ್ಪಿದೆ ಎಂದು ಕುಮಾರಸ್ವಾಮಿ ಕೇಳಿದರು.

Next Story

RELATED STORIES