Top

ಅಧಿಕಾರಕ್ಕಾಗಿ ಆಘಾತಕಾರಿ ಪ್ರಯತ್ನ: ಜಮ್ಮು-ಕಾಶ್ಮೀರ ವಿಧಾನಸಭೆ ವಿಸರ್ಜನೆಗೆ ಕಾರಣ?

ಅಧಿಕಾರಕ್ಕಾಗಿ ಆಘಾತಕಾರಿ ಪ್ರಯತ್ನ: ಜಮ್ಮು-ಕಾಶ್ಮೀರ ವಿಧಾನಸಭೆ ವಿಸರ್ಜನೆಗೆ ಕಾರಣ?
X

ಜಮ್ಮು-ಕಾಶ್ಮೀರದಲ್ಲಿ ಅಧಿಕಾರ ಪಡೆಯಲು ನಡೆದ ಏಕಾಏಕಿ ನಾಟಕೀಯ ಬೆಳವಣಿಗೆ ಬೆನ್ನಲ್ಲೇ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ವಿಧಾನಸಭೆಯನ್ನು ವಿಸರ್ಜಿಸಿ ಆಘಾತ ನೀಡಿದ್ದಾರೆ. ರಾಜ್ಯಪಾಲರ ಈ ನಡೆ ವಿವಾದ ಸೃಷ್ಟಿಸಿದ್ದು, ರಾಜಕೀಯ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಬುಧವಾರ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾಂಗ್ರೆಸ್ ಪಕ್ಷಗಳ ಬೆಂಬಲ ಪಡೆದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಸರಕಾರ ರಚನೆಗೆ ಅವಕಾಶ ಕೋರಿ ರಾಜ್ಯಪಾಲರಿಗೆ ಮನವಿ ಮಾಡಿದರು. ಇದರ ಬೆನ್ನಲ್ಲೇ ಬಿಜೆಪಿ ಹಾಗೂ ಪೀಪಲ್ಸ್ ಕಾನ್ಫರೆನ್ಸ್ ಪಕ್ಷದ ಬೆಂಬಲದೊಂದಿಗೆ ಸರಕಾರ ರಚನೆಗೆ ಅವಕಾಶ ಕೋರಿತು.

ಈ ಅನಿರೀಕ್ಷಿತ ಬೆಳವಣಿಗೆ ಬೆನ್ನಲ್ಲೇ ರಾಜ್ಯಪಾಲರು ಏಕಾಏಕಿ ವಿಧಾನಸಭೆಯನ್ನೇ ವಿಸರ್ಜಿಸಿ ತೀರ್ಮಾನ ಕೈಗೊಂಡಿತು. ಇದರೊಂದಿಗೆ ಲೋಕಸಭಾ ಚುನಾವಣೆ ಜೊತೆಗೆ ವಿಧಾನಸಭಾ ಚುನಾವಣೆಗೆ ಜಮ್ಮು-ಕಾಶ್ಮೀರ ಸಜ್ಜಾಗಲಿದೆ.

87 ಸ್ಥಾನಗಳ ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು 44 ಸ್ಥಾನಗಳ ಅವಶ್ಯಕತೆ ಇದೆ. ಮಾಜಿ ಸಿಎಂ ಮೆಹಬೂಬ್ ಮುಫ್ತಿ ಪೀಪಲ್ಸ್ ಡೆಮಾಕ್ರೆಟಿಕ್ ಪಕ್ಷ 29 ಸ್ಥಾನ ಹೊಂದಿದ್ದರೆ, ಕಾಂಗ್ರೆಸ್ ಮತ್ತು ನ್ಯಾಷನಲ್ ಕಾಂಗ್ರೆಸ್ ಪಕ್ಷಗಳು 13 ಹಾಗೂ 12 ಸ್ಥಾನಗಳನ್ನು ಪಡೆದಿದ್ದು ಒಟ್ಟಾರೆ 56 ಸದಸ್ಯರ ಬಲ ಹೊಂದಿರುವುದಾಗಿ ರಾಜ್ಯಪಾಲರಿಗೆ ಮನವಿ ಮಾಡಿತು. ಇದರ ಬೆನ್ನಲ್ಲೇ 26 ಸ್ಥಾನ ಗೆದ್ದಿರುವ ಬಿಜೆಪಿ ಇತರೆ ಪಕ್ಷಗಳ 18 ಸದಸ್ಯರ ಬಲ ಹೊಂದಿರುವುದಾಗಿ ಹೇಳಿಕೊಂಡಿತು.

ಸರಕಾರ ರಚನೆಗೆ ಎರಡು ಪಕ್ಷಗಳು ಮುಂದಾಗಿದ್ದರಿಂದ ರಾಜ್ಯಪಾಲರು ವಿಧಾನಸಭೆಯನ್ನೇ ವಿಸರ್ಜಿಸಿ ತೀರ್ಮಾನ ಕೈಗೊಂಡರು. ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡ ರಾಜ್ಯಪಾಲರು, ಅಧಿಕಾರ ಪಡೆಯಲು ನಡೆಸಿದ ಪ್ರಯತ್ನಗಳು ಆಘಾತಕಾರಿ ಆಗಿದೆ. ಇದನ್ನು ತಡೆಯಲು ಇದು ಸೂಕ್ತ ಕ್ರಮ ಎಂದಿದ್ದಾರೆ.

ರಾಜ್ಯಪಾಲರ ನಡೆಯನ್ನು ತೀವ್ರವಾಗಿ ಆಕ್ಷೇಪಿಸಿರುವ ನ್ಯಾಷನಲ್ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ, ಬಿಜೆಪಿ ಏಕಾಏಕಿ ಬೆಂಬಲ ವಾಪಸ್ ಪಡೆದು ಸರಕಾರ ಪತನಕ್ಕೆ ಕಾರಣವಾಗಿತ್ತು. ಆಗಲೇ ನಾವು ವಿಧಾನಸಭೆ ವಿಸರ್ಜಿಸಿ ಎಂದು ಮನವಿ ಮಾಡಿದ್ದೆವು. ಆಗ ಮಾಡದೇ ಇದ್ದ ವಿಸರ್ಜನೆ ಈಗ ಯಾಕೆ ಮಾಡಿದ್ದೀರಿ ಎಂದು ಪ್ರಶ್ನಿಸಿದರು.

Next Story

RELATED STORIES