ಶವದ ಮುಂದೆಯೇ ಜಗಳ: ಮೈಸೂರಿನಲ್ಲೊಂದು ಘಟನೆ!

X
TV5 Kannada22 Nov 2018 7:12 AM GMT
ಸತ್ತ ವ್ಯಕ್ತಿಯನ್ನು ಮಣ್ಣು ಮಾಡುವ ವೇಳೆ ಆರಡಿ ಮೂರು ಅಡ್ಡಿ ಜಾಗಕ್ಕೆ ಜಗಳ ಆದ ಘಟನೆ ಮೈಸೂರಿನ ಹೆಚ್.ಡಿ ಕೋಟೆಯ ಅಂಕನಾಥಪುರದಲ್ಲಿ ನಡೆದಿದೆ.
ಅಂಕನಾಥಪುರದ ಸರ್ವೆ ನಂಬರ್ 90 ಸರ್ಕಾರಿ ಜಾಗದಲ್ಲಿ ಹಲವಾರು ವರ್ಷದಿಂದ ಶವಸಂಸ್ಕಾರ ಮಾಡುತ್ತಿದ್ದ ಗ್ರಾಮಸ್ಥರು. ಆದರೆ ಅಂಕನಾಥಪುರದ ಚಂದ್ರು ಜಾಗದ ಮೇಲೆ ಕಣ್ಣು ಹಾಕಿದ್ದು. ಶವಸಂಸ್ಕಾರವನ್ನು ಮಾಡಲು ಹೋದಾಗ ಶವದ ಮುಂದೆಯೇ ಚಂದ್ರು ಜಾಗ ನನ್ನದು ಎಂದು ಜಗಳ ನಡೆಸಿದ್ದಾನೆ. ಇದರಿಂದ ಗ್ರಾಮಸ್ಥರು ಹಾಗೂ ಚಂದ್ರು ನಡುವೆ ಕೈ ಕೈ ಮೀಲಾಯಿಸಿರುವ ಘಟನೆ ನಡೆದಿದೆ.
ಇನ್ನೂ ಶಿವಪ್ಪನ ಶವಸಂಸ್ಕಾರ ಮಾಡಲು ಸೂಕ್ತವಾದ ಜಾಗವಿಲ್ಲದೆ ಪರದಾಟ ಮಾಡುವಂತ ಪರಿಸ್ಥಿತಿ ನಿರ್ಮಾಣವಾಯಿತು.ಇತ್ತ ಗುಂಡಿ ತೆಗೆಯಲು ಗ್ರಾಮಸ್ಥರು ಮುಂದಾದರೆ ಇತ್ತ ಗುಂಡಿ ಮುಚ್ಚಲು ಚಂದ್ರು ಯತ್ನಿಸಿದ. ಇತ್ತ ಸತ್ತ ನಂತರವು ಶಿವಪ್ಪನ ಸಂಸ್ಕಾರ ಮಾಡಲು ಸಂಕಟ ಶುರುವಾದ ಪರಿಸ್ಥಿತಿ ಕೆಲಕಾಲ ನಿರ್ಮಾಣವಾಗಿತ್ತು.
Next Story