Top

ಕೈ ಮುಗಿಯುತ್ತಿರುವಾಗಲೇ ಕದಿಯುತ್ತಿದ್ದ ಕಳ್ಳಿ...!

ಕೈ ಮುಗಿಯುತ್ತಿರುವಾಗಲೇ ಕದಿಯುತ್ತಿದ್ದ ಕಳ್ಳಿ...!
X

ಜನರ ದೈವತ್ವವನ್ನೇ ಟಾರ್ಗೆಟ್​ ಮಾಡಿ, ಹಲವರು ಹೆಸರಿಟ್ಟುಕೊಂಡು ದೇವಸ್ಥಾನಕ್ಕೆ ನುಗ್ಗಿ, ಕಳ್ಳತನ ಮಾಡಿ ಅಲ್ಲಿಂದ ಎಸ್ಕೇಪ್​ ಆಗುತ್ತೀದ್ದ ಚಾಲಾಕಿ ಕಳ್ಳಿಯನ್ನು ಪೊಲೀಸರು ಬಂಧಿಸಿದ್ದಾರೆ.

ವಾರಕ್ಕೆ ಮೂರು ಬಾರಿ ದೇವಸ್ಥಾನಕ್ಕೆ ಬಂದು ಕಳ್ಳತನ ಮಾಡುತ್ತೀದ್ದ ಹಿನ್ನಲೆ ಅಲರ್ಟ್​ ಆದ ಪೊಲೀಸರು ಮಫ್ತಿಯಲ್ಲಿ ವುಮನ್​ ಪಿಸಿಯನ್ನು ಬಿಟ್ಟ ಆರೋಪಿಯನ್ನು ಬಂಧಿಸಲಾಗಿದೆ. ಬನಶಂಕರಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಇಷ್ಟು ದಿನ ಮಹಿಳೆಯರ ಕತ್ತಿಗೆ ಕೈ ಹಾಕುತ್ತಿದ್ದವಳು ಈ ಬಾರಿ ಮಗುವಿನ ಸರ ಕಳ್ಳತನ ಮಾಡುವಾಗ ಸಿಕ್ಕಿಬಿದ್ದಿದ್ದಾಳೆ.

ಭಕ್ತಿಯಲ್ಲಿ ಮುಳುಗಿರುತ್ತಿದ್ದ ಭಕ್ತರ ಬೆನ್ನ ಹಿಂದೆ ಬಂದು ಸರಕಳವು ಮಾಡುತ್ತೀದ್ದಳು. ಈ ತರಹದ ದೂರು ಸಾಕಷ್ಟು ಸಾರಿ ಬಂದ ಹಿನ್ನಲೆ ಮಫ್ತಿಯಲ್ಲಿ ಪೊಲೀಸರನ್ನ ನಿಯೋಜನೆ ಮಾಡಲಾಗಿತ್ತು. ಇದೇ ತರ ಗಸ್ತಿನಲ್ಲಿದ್ದಂತಹ ಸಂಧರ್ಭದಲ್ಲಿ ಸಿಸಿವಿಯನ್ನ ವಾಚ್​ ಮಾಡುತ್ತಿದ್ದ ಮಹಿಳಾ ಸಿಬ್ಬಂಧಿಗಳು ಕಳ್ಳಿ ಉಮಾಳನ್ನು ರೆಡ್​ ಹ್ಯಾಂಡಾಗಿ ಬಂಧಿಸಿದ್ದಾರೆ.

2014 ರಲ್ಲಿ ಇದೇ ರೀತಿ ಕೃತ್ಯ ಎಸಗಿ ಜೈಲಿಗೆ ಹೋಗಿದ್ದವಳು ಈಗ ಮತ್ತೆ ಬಂದು ತನ್ನ ಹಳೆ ಚಾಳಿ ಮುಂದುವರೆಸಿದ್ದಾಳೆ. ಇನ್ನು ಬಂಧಿತಳಿಂದ 190 ಗ್ರಾಂ ಗೂ ಹೆಚ್ಚು ಚಿನ್ನಾಭರಣವನ್ನ ವಶಕ್ಕೆ ಪಡೆದಿದ್ದಾರೆ. ಸದ್ಯ ಆರೋಪಿತೆಯನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿಲಾಗಿದೆ. ಈ ಹಿಂದೆ ಕೃತ್ಯ ಎಸಗಿರುವ ಹಿನ್ನಲೆ ಕದ್ದ ಮಾಲನ್ನು ಪಡೆದುಕೊಳ್ಳುತ್ತಿದ್ದವರನ್ನೂ ಬಂಧಿಸುವ ಸಾಧ್ಯತೆ ಇದೆ . ಈ ಪ್ರಕರಣ ಕುಮಾರಸ್ವಾಮಿ ಲೇಔಟ್​ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದೆ.

Next Story

RELATED STORIES