ಬುಡುಬುಡಿಕೆ ಸಮುದಾಯ ದೂರು: ತಾರಕಾಸುರನಿಂದ ಸಂಕಷ್ಟ

X
TV5 Kannada21 Nov 2018 1:02 PM GMT
ಇದೇ ಶುಕ್ರವಾರ ತೆರೆಗೆ ಬರಲು ಸಜ್ಜಾಗಿರುವ ತಾರಕಾಸುರ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ಚಿತ್ರದಲ್ಲಿ ತಮ್ಮ ಜನಾಂಗದ ಬಗ್ಗೆ ಅವಹೇಳನಕಾರಿಯಾಗಿ ತೋರಿಸಲಾಗಿದೆ ಎಂದು ಬುಡಬುಡಿಕೆ ಸಮುದಾಯ ಆರೋಪಿಸಿ ಪ್ರತಿಭಟನೆ ನಡೆಸಿತು.
ರಥಾವರ ಚಿತ್ರದ ಖ್ಯಾತಿಯ ಚಂದ್ರಶೇಖರ ಬಂಡಿಯಪ್ಪ ನಿರ್ದೇಶಿರುವ ತಾರಕಾಸುರ ಚಿತ್ರದಲ್ಲಿ ಬುಡುಬುಡಿಕೆ ಜನಾಂಗದವರ ಕುರಿತ ಕಥೆ ಹೊಂದಿದೆ ಎಂದು ಹೇಳಲಾಗಿದೆ.
ಬುಡು ಬುಡಿಕೆ ಜನಾಂಗದವರನ್ನ ಅವಹೇಳನಕಾರಿಯಾಗಿ ತೋರಿಸಲಾಗಿದೆ ಎಂದು ಆರೋಪಿಸಿದ ಬುಡುಬುಡಿಕೆ ಜನಾಂಗದ ಪ್ರತಿನಿಧಿಗಳು ಮಂಗಳವಾರ ವಾಣಿಜ್ಯ ಮಂಡಳಿ ಮುಂದೆ ಪ್ರತಿಭಟನೆ ನಡೆಸಿದರು.
ತಾರಕಾಸುರ ಚಿತ್ರ ಬಿಡುಗಡೆಗೂ ಮುನ್ನ ತೋರಿಸಬೇಕು ಹಾಗೂ ಅವಹೇಳನಕಾರಿ ದೃಶ್ಯಗಳಿಗೆ ಕತ್ತರಿ ಹಾಕಬೇಕು ಎಂದು ಬುಡುಬುಡಿಕೆ ಜನಾಂಗದ ಅಧ್ಯಕ್ಷ ಕರಿಯಪ್ಪ ವಾಣಿಜ್ಯ ಮಂಡಳಿಗೆ ಆಗ್ರಹಿಸಿದ್ದಾರೆ.
Next Story