ಫಿಕ್ಸ್ ಆಯ್ತು ಐಂದ್ರಿತಾ- ದಿಗಂತ್ ಮದುವೆ ಡೇಟ್

X
TV5 Kannada21 Nov 2018 5:38 AM GMT
ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಮತ್ತೊಂದು ಜೋಡಿ ಹಸೆಮಣೆ ಏರಲು ಸಿದ್ಧತೆ ನಡೆಸಿದೆ. ದಿಗಂತ್- ಐಂದ್ರಿತಾ ರೈ ಮದುವೆ ಡಿ.11-12ಕ್ಕೆ ನಿಗದಿಯಾಗಿದ್ದು, ಕೆಲ ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ಈ ಜೋಡಿ ಕೊನೆಗೂ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ.
ಸರಳವಾಗಿ ವಿವಾಹವಾಗಲು ದಿಗಂತ್-ಐಂದ್ರಿತಾ ನಿರ್ಧರಿಸಿದ್ದು, ಡಿ.15ಕ್ಕೆ ಸ್ನೇಹಿತರಿಗೆ ಪಾರ್ಟಿ ಕೊಡಲು ನಿರ್ಧರಿಸಿದ್ದಾರೆ.
ಮನಸಾರೆ ಚಿತ್ರದಲ್ಲಿ ಒಟ್ಟಿಗೆ ನಟಿಸುವ ಮೂಲಕ ದಿಗಂತ್ ಮತ್ತು ಐಂದ್ರಿತಾ ರೈ ಪರಿಚಯವಾಗಿದ್ದರು. ನಂತರ 2012ರ ಪಾರಿಜಾತ ಚಿತ್ರದಲ್ಲೂ ಈ ಜೋಡಿಯ ರೋಮ್ಯಾನ್ಸ್ ತೆರೆ ಮೇಲೆ ಮುಂದುವರೆದಿತ್ತು.
ಆ ಬಳಿಕ ಹೆಚ್ಚು ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳದಿದ್ದರೂ, ಈ ಜೋಡಿಯ ತೆರೆ ಹಿಂದಿನ ಕೆಮೆಸ್ಟ್ರಿ ಮಾತ್ರ ಮುಂದುವರೆದಿತ್ತು.
Next Story