Top

ಆಂಧ್ರದ ಮೂಲೆ ಮೂಲೆಯಲ್ಲೂ KGF ‘ರಾಕಿ’ ಕನ್ನಡ ಕಹಳೆ..!

ಆಂಧ್ರದ ಮೂಲೆ ಮೂಲೆಯಲ್ಲೂ KGF ‘ರಾಕಿ’ ಕನ್ನಡ ಕಹಳೆ..!
X

ಸ್ಟಾರ್ ಸ್ಟಾರ್ ರಾಕಿಂಗ್ ಸ್ಟಾರ್... ಹೀಗೆ ನಮ್ಮ ಕರ್ನಾಟಕದಲ್ಲಿ ಕನ್ನಡ ಸಿನಿಪ್ರಿಯರು ಕರಿಯೋದು ಕಾಮನ್. ಆದ್ರೆ ಪಕ್ಕದ ಆಂಧ್ರದ ಮೂಲೆ ಮೂಲೆಯಲ್ಲಿ ಈ ರೀತಿಯ ಕೂಗು ದಟ್ಟವಾಗಿ ಕೇಳಿಬರ್ತಿದೆ. ರಾಜಮೌಳಿಯ ಬಾಹುಬಲಿಯನ್ನ ಮೀರಿಸೋ ರೇಂಜ್​ಗೆ ಕ್ರೇಜ್ ಹುಟ್ಟಿಸ್ತಿದೆ ಯಶ್ ಕೆಜಿಎಫ್.

ಆಂಧ್ರದ ಮೂಲೆ ಮೂಲೆಯಲ್ಲೂ ‘ರಾಕಿ’ ಕನ್ನಡ ಕಹಳೆ

ಎಲ್ಲೆಲ್ಲೂ ಸ್ಟಾರ್ ಸ್ಟಾರ್ ರಾಕಿಂಗ್ ಸ್ಟಾರ್ ಘೋಷಣೆಯ ಜಪ

ಕನ್ನಡದಲ್ಲಿ ಯಶ್ ಸಿನಿಮಾಗಳ ಕ್ರೇಜ್, ಹೈಪ್, ಹವಾ ಇದ್ದದ್ದೇನೆ. ಆದ್ರೆ ಪಕ್ಕದ ಆಂಧ್ರದಲ್ಲಿ ಯಶ್ ಕ್ರೇಜ್ ಕರ್ನಾಟಕಕ್ಕಿಂತ ಜೋರಿದೆ. ಅದಕ್ಕೆ ಇಲ್ಲಿರೋ ವಿಡಿಯೋಗಳೇ ಸಾಕ್ಷಿ. ಹೌದು, ಬಹುಭಾಷೆಯಲ್ಲಿ ತಯಾರಾಗ್ತಿರೋ ಕೆಜಿಎಫ್ ತೆಲುಗಿನಲ್ಲೂ ತೆರೆಗೆ ಬರ್ತಿದೆ. ಅಂದಹಾಗೆ ಈ ಹಿಂದೆ ಮೌಳಿಯ ಬಾಹುಬಲಿ ಚಿತ್ರವನ್ನ ಡಿಸ್ಟ್ರಿಬ್ಯೂಟ್ ಮಾಡಿದ್ದ ಪ್ರತಿಷ್ಠಿತ ವಾರಾಹಿ ಚಲನಚಿತ್ರಂ ಈ ಸಿನಿಮಾನ ವಿಶಾಲ ಆಂಧ್ರಗೆ ವಿತರಿಸ್ತಿರೋದು ವಿಶೇಷ.

ರಾಮಾಚಾರಿ ಸಿನಿಮಾ ನೋಡಿ ಥ್ರಿಲ್ ಆಗಿದ್ದ ತೆಲುಗು ಸಿನಿಪ್ರಿಯರು, ಇದೀಗ ಕೆಜಿಎಫ್ ಸಿನಿಮಾ ತೆಲುಗು ಭಾಷೆಯಲ್ಲೇ ನೋಡೋಕೆ ಉತ್ಸುಕರಾಗಿದ್ದಾರೆ. ಅಷ್ಟೇ ಅಲ್ಲ, ಆಂಧ್ರದ ಮೂಲೆ ಮೂಲೆಗಳಲ್ಲಿ ವಾರಾಹಿ ಚನಲಚಿತ್ರಂ ಮಾಡ್ತಿರೋ ಪ್ರಮೋಷನ್ಸ್​ಗೆ ಸಿನಿಪ್ರಿಯರು ಸಖತ್ ಥ್ರಿಲ್ ಆಗಿದ್ದಾರೆ.

ಕನ್ನಡದ ನಂ.1 ಸಿನಿಮಾ ಆಗಲಿದೆ ಎಂದ ಆಂಧ್ರ ಫ್ಯಾನ್ಸ್..!!

ರಾಮ್ ಚರಣ್ ರಂಗಸ್ಥಳಂ ಮೀರಿಸಲಿದೆಯಂತೆ ಕೆಜಿಎಫ್

ಮೌಳಿ ಬಾಹುಬಲಿಗೆ ಸೆಡ್ಡು ಹೊಡೀತಿದೆ KGF ಕ್ರೇಜ್..!

ಟಾಲಿವುಡ್ ಅಂಗಳದಲ್ಲೇ ದೊಡ್ಡ ದೊಡ್ಡ ಸ್ಟಾರ್ಸ್​ ಇರೋವಾಗ, ಅವ್ರ ಕಟ್ಟಾ ಅಭಿಮಾನಿಗಳೇ ಯಶ್​ಗೂ ಸಹ ತುಂಬಾ ಅದ್ಧೂರಿಯಾಗಿ ಸ್ವಾಗತ ಬಯಸ್ತಿದ್ದಾರೆ. ಅದ್ರಲ್ಲೂ ಕೆಜಿಎಫ್ ಯಶ್​ರ ಈ ಹಿಂದಿನ ರಾಮಾಚಾರಿಗಿಂತ ಮೂರು ನಾಲ್ಕು ಪಟ್ಟು ಹೆಚ್ಚಿನ ಮಟ್ಟದಲ್ಲಿ ಸಕ್ಸಸ್ ಆಗಲಿದೆ ಅಂತಿದ್ದಾರೆ. ಜೊತೆಗೆ ಕನ್ನಡದ ನಂ.1 ಸಿನಿಮಾ ಆಗೋ ಭವಿಷ್ಯ ನುಡಿದಿದ್ದಾರೆ.

ಇನ್ನು ಮೆಗಾ ಪವರ್ ಸ್ಟಾರ್ ರಾಮ್ ಚರಣ್​ ಅಭಿನಯದ ಇತ್ತೀಚೆಗಿನ ಬ್ಲಾಕ್ ಬಸ್ಟರ್ ರಂಗಸ್ಥಳಂ ಮೀರಿಸೋದ್ರಲ್ಲಿ ಡೌಟೇ ಇಲ್ಲ ಅಂತಾರೆ ತೆಲುಗು ಸಿನಿಪ್ರಿಯರು. ಇದೆಲ್ಲಾ ಒಂದ್ಕಡೆ ಆದ್ರೆ, ರಾಜಮೌಳಿಯ ಬಾಹುಬಲಿಯನ್ನ ಮೀರಿಸೋ ಕ್ರೇಜ್ ಕೆಜಿಎಫ್​ಗೆ ಸಿಗ್ತಿರೋದು ಮತ್ತೊಂದು ಖುಷಿಯ ವಿಚಾರ.

ಬಾಹುಬಲಿಯಲ್ಲಿ ಕಟ್ಟಪ್ಪ ಬಾಹುಬಲಿಯನ್ನ ಯಾಕೆ ಕೊಂದ ಅನ್ನೋ ಬಲಿಯನ್ ಡಾಲರ್ ಪ್ರಶ್ನೆ ರೀತಿ, ಮುಂಬೈನಿಂದ ರಾಕಿ ಕೆಜಿಎಫ್​ಗೆ ಯಾಕೆ ಬಂದ ಅನ್ನೋ ಪ್ರಶ್ನೆ ಕೂಡ ಕ್ಯೂರಿಯಾಸಿಟಿ ಹುಟ್ಟಿಸ್ತಿದೆ. ಇದರ ಜೊತೆಗೆ ಬಾಲಿವುಡ್​ನ ಸುನೀಲ್ ಶೆಟ್ಟಿ ಕೂಡ ಕೆಜಿಎಫ್ ಕುರಿತು ಟ್ವೀಟ್ ಮಾಡಿದ್ದು, ಟ್ರೈಲರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ನೂರುಕೋಟಿ ಬಜೆಟ್​ನಲ್ಲಿ ತಯಾರಾಗಿರೋ ಪೀರಿಯಾಡಿಕ್ ಡ್ರಾಮಾ ಇಂಡಿಯನ್ ಸಿನಿಮಾ ಆಗಿ ಯಶ್​ರನ್ನ ನ್ಯಾಷನಲ್ ಸ್ಟಾರ್ ಮಾಡೋದ್ರ ಜೊತೆಗೆ, ಹೊಸ ಸಂಚಲನ ಸೃಷ್ಠಿಸ್ತಿದೆ. ಇನ್ನು ಪ್ರಶಾಂತ್ ನೀಲ್ ನಿರ್ದೇಶನಾ ಕೌಶಲ್ಯ, ವಿಜಯ್ ಕಿರಗಂದೂರು ಸಿನಿಮಾ ಪ್ರೀತಿಗೆ ಈ ಸಿನಿಮಾ ಸಾಕ್ಷಿಯಾಗಲಿದ್ದು, ಎಲ್ಲರ ಚಿತ್ತ ಡಿಸೆಂಬರ್ 21ರ ಮೇಲೆ ನೆಟ್ಟಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್, ಟಿವಿ5

Next Story

RELATED STORIES