ಕೊಹ್ಲಿ ಪಡೆಗೆ ಮುಳುವಾದ ಮಳೆ: ಆಸ್ಟ್ರೇಲಿಯಾಗೆ ರೋಚಕ ಜಯ

ಆರಂಭಿಕ ಶಿಖರ್ ಧವನ್ ಏಕಾಂಗಿ ಹೋರಾಟದ ಹೊರತಾಗಿಯೂ ಭಾರತ ತಂಡ ಡಕವರ್ತ್ ಲೂಯಿಸ್ ನಿಯಮದಡಿ 4 ರನ್ ಗಳಿಂದ ಸೋಲುಂಡಿತು. ಈ ಮೂಲಕ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಆತಿಥೇಯ ಆಸ್ಟ್ರೇಲಿಯಾ 1-0ಯಿಂದ ಮುನ್ನಡೆ ಸಾಧಿಸಿತು.
ಬ್ರಿಸ್ಬೇನ್ನಲ್ಲಿ ಮಂಗಳವಾರ ನಡೆದ ಮೊದಲ ಟಿ-20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 17 ಓವರ್ಗಳಲ್ಲಿ 4 ವಿಕೆಟ್ಗೆ 158 ರನ್ ಗಳಿಸಿದ್ದಾಗ ಮಳೆ ಸುರಿಯಿತು. ಇದರಿಂದ ಭಾರತಕ್ಕೆ ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ 17 ಓವರ್ ಗಳಲ್ಲಿ 174 ರನ್ಗಳ ಪರಿಷ್ಕೃತ ಗುರಿ ನೀಡಲಾಯಿತು. ಭಾರತ ಓವರ್ ಪೂರ್ಣಗೊಂಡಾಗ 7 ವಿಕೆಟ್ ಕಳೆದುಕೊಂಡು 169 ರನ್ ಗಳಿಸಲಷ್ಟೇ ಶಕ್ತವಾಯಿತು.
ಭಾರತ ತಂಡ ಆರಂಭದಲ್ಲೇ ರೋಹಿತ್ ಶರ್ಮ ವಿಕೆಟ್ ಕಳೆದುಕೊಂಡರೂ ಶಿಖರ್ ಧವನ್ ಏಕಾಂಗಿಯಾಗಿ ತಂಡವನ್ನು ಮುನ್ನಡೆಸಿದರು. ಧವನ್ 42 ಎಸೆತಗಳಲ್ಲಿ 10 ಬೌಂಡರಿ ಹಾಗೂ 2 ಸಿಕ್ಸರ್ ಸೇರಿದ 72 ರನ್ ಗಳಿಸಿದರು. ಧವನ್ ಕ್ರೀಸ್ನಲ್ಲಿ ಇರುವವರೆಗೂ ಭಾರತ ಗೆಲುವಿನತ್ತ ಸುಲಭವಾಗಿ ಮುನ್ನಡೆಯುತ್ತಿತ್ತು. ಆದರೆ ಧವನ್ ಔಟಾಗುತ್ತಿದ್ಧಂತೆ ಭಾರತ ಮತ್ತೊಮ್ಮೆ ಕುಸಿತಕ್ಕೆ ಒಳಗಾಗಿ ಸೋಲಿನ ಹಾದಿ ಹಿಡಿಯಿತು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳ ನೆರವಿನಿಂದ ಉತ್ತಮ ಮೊತ್ತ ಕಲೆಹಾಕಿತು.
ಗ್ಲೆನ್ ಮ್ಯಾಕ್ಸ್ ವೆಲ್ 24 ಎಸೆತಗಳಲ್ಲಿ 4 ಸಿಕ್ಸರ್ ಸೇರಿದ 46 ರನ್ ಬಾರಿಸಿ ತಂಡದ ಪರ ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದರು. ಮ್ಯಾಕ್ಸ್ ವೆಲ್ ಮತ್ತು ಸ್ಟೋನಿಸಿಸ್ (ಅಜೇಯ 33ರನ್, 19 ಎಸೆತ, 3 ಬೌಂಡರಿ, 1ಸಿಕ್ಸರ್) 4ನೇ ವಿಕೆಟ್ಗೆ 82 ರನ್ಗಳ ಜೊತೆಯಾಟ ನಿಭಾಯಿಸಿ ತಂಡವನ್ನು 150ರ ಗಡಿ ದಾಟಿಸಿದರು. ಭಾರತದ ಪರ ಕುಲದೀಪ್ ಯಾದವ್ 2 ವಿಕೆಟ್ ಪಡೆದರು.
- ಸಂಕ್ಷಿಪ್ತ ಸ್ಕೋರ್
- ಆಸ್ಟ್ರೇಲಿಯಾ 20 ಓವರ್ 4 ವಿಕೆಟ್ 158 (ಮ್ಯಾಕ್ಸ್ವೆಲ್ 46, ಸ್ಟೊನಿಸಿಸ್ ಅಜೇಯ 33, ಕುಲದೀಪ್ 24/2).
- ಭಾರತ (ಧವನ್ 76, ಕಾರ್ತಿಕ್ 30, ರಿಷಭ್ 20, ಜಂಪಾ 22/2, ಸ್ಟೊನಿಸಿಸ್ 27/2).