Top

ತಪ್ಪು ವಿಳಾಸ​, ನಕಲಿ ಬಿಲ್​, 7 ಶಾಸಕರ ವಿರುದ್ಧ FIR

ತಪ್ಪು ವಿಳಾಸ​, ನಕಲಿ ಬಿಲ್​, 7 ಶಾಸಕರ ವಿರುದ್ಧ FIR
X

ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ವೇಳೆ ತಪ್ಪು ವಿಳಾಸ ನೀಡಿದ್ದೂ ಅಲ್ಲದೇ ತಪ್ಪು ಬಿಲ್ ಗಳನ್ನು ನೀಡಿ ಭತ್ಯೆಗಳನ್ನು ಪಡೆದ 7 ಹಾಲಿ ಹಾಗೂ ಒಬ್ಬ ಮಾಜಿ ಶಾಸಕರ ವಿರುದ್ಧ ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ.

ತೀವ್ರ ಕುತೂಹಲ ಮೂಡಿಸಿದ್ದ ಇತ್ತೀಚೆಗೆ ನಡೆದ ಬಿಬಿಎಂಪಿ ಚುನಾವಣೆ ವೇಳೆ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಈ ಶಾಸಕರು ತಪ್ಪು ವಿಳಾಸ ನೀಡಿ ಮತದಾನದ ಹಕ್ಕು ಪಡೆದಿದ್ದಾರೆ. ಅಲ್ಲದೇ ನಕಲಿ ಬಿಲ್ ಗಳನ್ನು ನೀಡಿ ಭತ್ಯೆಗಳನ್ನು ಪಡೆದಿದ್ದಾರೆ ಎಂದು ಆರೋಪಿಸಿ ಆರ್​.ಜೆ.ಎಚ್. ರಾಮಣ್ಣ ನ್ಯಾಯಾಲಯದ ಮೊರೆ ಹೋಗಿದ್ದರು.

ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ ಶಾಸಕರ ವಿರುದ್ಧ ಎಫ್​ಐಆರ್ ದಾಖಲಿಸುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ವಿಧಾನಸೌಧ ಪೊಲೀಸರು ಎಫ್​ಐಆರ್ ದಾಖಲಿಸಿ ನ್ಯಾಯಾಲಯಕ್ಕೆ ವಿವರ ಸಲ್ಲಿಸಿದ್ದಾರೆ.

ಶಾಸಕರಾದ ಬೋಸರಾಜು, ಲಕ್ಷ್ಮೀನಾರಾಯಣ, ಅಲ್ಲಂ ವೀರಭದ್ರಪ್ಪ, ಅಪ್ಪಾಜಿಗೌಡ, ಎಸ್​.ರವಿ, ಆರ್​.ಬಿ. ತಿಮ್ಮಾಪುರ, ಮನೋಹರ್ ಮತ್ತು ರಘು ಆಚಾರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ನ್ಯಾಯಾಲಯದ ಸೂಚನೆ ಮೇರೆಗೆ ಶಾಸಕರ ವಿರುದ್ದ ಐಪಿಸಿ, 420 (ವಂಚನೆ), 177 (ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುವುದು),149(ಅಪರಾದದ ಉದ್ದೇಶದಿಂದ ಗುಂಪು ಗೂಡೂವುದು) ಹಾಗೂ ಪ್ರಜಾಪ್ರತಿನಿಧಿ ಕಾಯ್ದೆಯಡಿ ದೂರು ದಾಖಲಾಗಿದೆ.

Next Story

RELATED STORIES