Top

ಧೂಳೆಬ್ಬಿಸಲಿದೆ ಚಿರು-ಉದಯ್ ಕಾಂಬಿನೇಷನ್ ಚಿತ್ರ

ಧೂಳೆಬ್ಬಿಸಲಿದೆ ಚಿರು-ಉದಯ್ ಕಾಂಬಿನೇಷನ್ ಚಿತ್ರ
X

ಉದಯ್ ಕೆ ಮೆಹ್ತಾ. ರಾವಣ, ಕೃಷ್ಣನ್ ಲವ್ ಸ್ಟೋರಿ, ಬಚ್ಚನ್ , ಜರಾಸಂಧ, ರಾಜರಾಜೇಂದ್ರ ಹಾಗೂ ಕೃಷ್ಣ ರುಕ್ಕು ರೀತಿಯ ವಿಭಿನ್ನ ಸಿನಿಮಾಗಳನ್ನ ಸ್ಯಾಂಡಲ್​​ವುಡ್​​​ಗೆ ನೀಡಿದವರು. ಕೃಷ್ಣ ರುಕ್ಕು ನಂತ್ರ ವಾಟ್ ನೆಕ್ಸ್ಟ್ ಉದಯ್ ಜೀ ಎಂದು ಗಾಂಧಿನಗರ ಕೇಳುತ್ತಿರುವಾಗಲೇ, ನನ್ನ ಮುಂದಿನ ಸಿನಿಮಾ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಅಂತಿದ್ರು. ಈ ಚಿತ್ರಕ್ಕೆ ಮದಗಜ ಎಂದು ಹೆಸರು ಇಟ್ಟಿದ್ದಾರೆ ಅನ್ನೋ ಸಮಾಚಾರ ಗಂಧದಗುಡಿಯಲ್ಲಿ ಸದ್ದು ಮಾಡಿತ್ತು.ಆದ್ರೆ ಈಗ ಒಂದು ಚೂರು ಬದಲಾವಣೆ ಆಗಿದೆ. ತಮ್ಮನ ಜಾಗಕ್ಕೆ ಅಣ್ಣ ಬಂದು ನಿಂತಿದ್ದಾರೆ. ಬಟ್ ಧ್ರುವ ಮಾಡುವ ಪ್ರೊಜೆಕ್ಟ್​​​ಗಲ್ಲ , ಈ ಸಿನಿಮಾವೇ ಬೇರೆ.. !!!

ತಮ್ಮನ ಸಿನಿಮಾಗಿಂತ ಮೊದಲು ಅಣ್ಣನ ಸಿನಿಮಾ ಶುರು..!!

ಮತ್ತೊಮ್ಮೆ ಚಿರು ಸರ್ಜಾ ಚಿತ್ರಕ್ಕೆ ಉದಯ್ ಬಂಡವಾಳ..!!

ಸದ್ಯ ಪೊಗರು ಸಿನಿಮಾಕ್ಕಾಗಿ ಶ್ರಮಿಸುತ್ತಿರುವ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈಗ ತಮ್ಮ ಬಾಳಿನ ಹೊಸ ಪಯಣಕ್ಕೆ ಸಜ್ಜಾಗುತ್ತಿದ್ದಾರೆ. ತಾವು ಮೆಚ್ಚಿದ ಹುಡ್ಗಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಅಲ್ಲಿಗೆ ಈ ವರ್ಷ ಧ್ರುವ ಸರ್ಜಾ ಫುಲ್​​ ಬ್ಯುಸಿ. ಈ ಕಾರಣಕ್ಕೆ ಹಾಗೂ ಚಿರು ಸರ್ಜಾರ ಮೇಲಿರುವ ಆತ್ಮೀಯ ಸ್ನೇಹಕ್ಕಾಗಿ ಹೊಸ ಚಿತ್ರವನ್ನು ಎತ್ತಿಕೊಂಡಿದ್ದಾರೆ ನಿರ್ಮಾಪಕ ಉದಯ್ ಕೆ ಮೆಹ್ತಾ.

ಅಮ್ಮ ಐ ಲವ್​ಯೂ ಚಿತ್ರದ ನಂತರ ರಾಜಮಾರ್ತಾಂಡನಾಗಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿರುವ ಚಿರು ಸರ್ಜಾ ಹೊಸ ಗೆಟಪ್​​ನಲ್ಲಿ ಬರೋದಕ್ಕೆ ಸಜ್ಜಾಗುತ್ತಿದ್ದಾರೆ. ಆ ಸಿನಿಮಾವೇ ಉದಯ್ ಕೆ ಮೆಹ್ತಾ ನಿರ್ಮಾಣದ ಅದ್ಧೂರಿ ಸಿನಿಮಾ. ರಾಮಲೀಲಾ ಸಿನ್ಮಾವನ್ನು ನಿರ್ದೇಶಿಸಿದ್ದ ವಿಜಯ್ ಕಿರಣ್, ಚಿರು ನಟನೆ ಮುಂದಿನ ಸಿನಿಮಾಕ್ಕೆ ಒನ್​ ಆಂಡ್ ಒನ್ಲಿ ಸೂತ್ರಧಾರ.

ಚಿರು-ಉದಯ್ ಕಾಂಬೀನೆಷನ್ ಚಿತ್ರ ವಾಯುಪುತ್ರ-2..!!

ಈ ವರ್ಷದ ಡಿಸೆಂಬರ್ ಮೊದಲನೇ ವಾರ ಶೂಟಿಂಗ್..!!

ವಾಯುಪುತ್ರ. ಚಿರಂಜೀವಿ ಸರ್ಜಾಗೆ ಒಳ್ಳೆಯ ಹೆಸರು ತಂದು ಕೊಟ್ಟ ಸಿನಿಮಾ. ಈಗ ಉದಯ್ ಕೆ ಮೆಹ್ತಾ ನಿರ್ಮಾಣದ ಹೊಸ ಚಿತ್ರಕ್ಕೆ ಇದೇ ಹೆಸರನ್ನು ಇಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆ್ಯಕ್ಷನ್,ಲವ್ ಆಂಡ್ ಸೆಂಟಿಮೆಂಟ್​ ಕಥಾಹಂದರವನ್ನ ಚಿತ್ರ ಹೊಂದಿರಲ್ಲಿದ್ದು, ಪಕ್ಕಾ ಕನ್ನಡತನದ ಸ್ವಮೇಕ್ ಸಿನಿಮಾವಂತೆ.

ಈಗಾಗಲೇ ಚಿರು ಎದುರು ಘರ್ಜಿಸಲು ರವಿಶಂಕರ್​ರವನ್ನು ಫಿಕ್ಸ್ ಮಾಡಿದ್ದು, ಹೀರೋಯಿನ್ ಹುಡುಕಾಟದಲ್ಲಿ ಚಿತ್ರತಂಡ ಮಗ್ನವಾಗಿದೆ. ಈ ವರ್ಷದ ಡಿಸೆಂಬರ್​​​​ ಮೊದಲನೇ ವಾರ ಶೂಟಿಂಗ್​​ಗೆ ಇಳಿಯುವ ಯೋಜನೆಯಲ್ಲಿ ಚಿತ್ರತಂಡವಿದ್ದು ಮಂಡ್ಯ,ಶ್ರೀರಂಗಪಟ್ಟಣ,ಮೈಸೂರಿನ ಸುತ್ತ ಮುತ್ತ ಶ್ಯೆಡ್ಯೂಲ್ ನಿಗದಿ ಮಾಡಿಕೊಂಡಿದೆ.

ಒಟ್ಟಿನಲ್ಲಿ ತಮ್ಮ ಧ್ರುವ ಸರ್ಜಾ ಜೊತೆ ಕೆಲಸ ಮಾಡಬೇಕಿದ್ದ ಪ್ಯಾಷನೇಟ್ ಪ್ರೊಡ್ಯೂಸರ್ ಉದಯ್ ಕೆ ಮೆಹ್ತಾ ಅಣ್ಣ ಚಿರು ಜೊತೆ ಮತ್ತೊಮ್ಮೆ ಒಂದಾಗಿ ಕನ್ನಡ ಚಿತ್ರರಂಗಗಕ್ಕಾಗಿ ದುಡಿಯಲು ಸಜ್ಜಾಗುತ್ತಿದ್ದಾರೆ.

ಶ್ರೀಧರ್ ಶಿವಮೊಗ್ಗ_ಎಂಟರ್​​​ಟೈನ್ಮೆಂಟ್ ಬ್ಯೂರೋ_ಟಿವಿ5

Next Story

RELATED STORIES