Top

ವಿವಾದ ಇಲ್ಲ ಅದಕ್ಕೆ ಕಾಣಿಸಿಕೊಳ್ತಿಲ್ಲ: ಸಚಿವ ಜಾರ್ಜ್​

ವಿವಾದ ಇಲ್ಲ ಅದಕ್ಕೆ ಕಾಣಿಸಿಕೊಳ್ತಿಲ್ಲ: ಸಚಿವ ಜಾರ್ಜ್​
X

ನಾನು ಮಾಧ್ಯಮಗಳಲ್ಲಿ ಕಾಣಿಸಿಕೊಂಡಿಲ್ಲ ಎಂದರೇ ವಿವಾದ ಇಲ್ಲ ಎಂದರ್ಥ ಎಂದು ಸಕ್ಕರೆ ಖಾತೆ ಸಚಿವ ಕೆ.ಜೆ.ಜಾರ್ಜ್​ ಮಾರ್ಮಿಕವಾಗಿ ಹೇಳಿದ್ದಾರೆ.

ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಮಂಗಳವಾರ ಕಬ್ಬು ಬೆಳೆಗಾರರೊಂದಿಗೆ ನಡೆದ ಸಭೆಯ ನಂತರ ಮಾಧ್ಯಮಗಳು, ಇತ್ತೀಚೆಗೆ ನೀವು ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. ನಿಮ್ಮ ಖಾತೆ ಕೆಲಸದಲ್ಲಿ ವಿಫಲರಾಗಿದ್ದೀರಾ ಎಂಬ ಪ್ರಶ್ನೆಗೆ ಈ ರೀತಿ ಉತ್ತರಿಸಿದರು.

ನಾನು ಯಾವ ಖಾತೆಯನ್ನು ಕೇಳಿಲ್ಲ. ಯಾರನ್ನೂ ಕೇಳಿಲ್ಲ. ಕೊಟ್ಟ ಕೆಲಸವನ್ನು ಆಸಕ್ತಿಯಿಂದಲೇ ಮಾಡುತ್ತೇನೆ. ನಾನು ಮಾಧ್ಯಮಗಳಲ್ಲಿ ಕಾಣಿಸಿಕೊಂಡಿಲ್ಲ ಅಂದರೆ ವಿವಾದ ಇಲ್ಲ ಎಂದು ಅರ್ಥ. ನನ್ನ ಖಾತೆಯಲ್ಲಿ ವಿವಾದಗಳು ಇರುವುದಿಲ್ಲ ಎಂದು ಜಾರ್ಜ್ ಸ್ಪಷ್ಟಪಡಿಸಿದರು.

ನಮ್ಮ ಸರ್ಕಾರ ಬಂದ ಹೊಸದರಲ್ಲಿ ಸಕ್ಕರೆ ಕಾರ್ಖಾನೆಗಳಿಂದ ಎರಡು ಸಾವಿರ ಕೋಟಿ ಬಾಕಿ ಇತ್ತು. ಈಗ 38 ಕೋಟಿ ಇದೆ. ನಾವು ಮೊನ್ನೆ ಶುಗರ್ ಕಂಟ್ರೊಲ್ ಬೋರ್ಡ್ ಮೀಟಿಂಗ್ ಮಾಡಲಾಗಿದೆ. ಯಾವ ಕಾರ್ಖಾನೆಗಳಿಂದ ಯಾವ ರೈತರಿಗೆ ಹಣ ಸಿಗಬೇಕೋ ಆ ಬಗ್ಗೆ ಮಾಹಿತಿ ಕೊಡಲಿ. ಆ ಮಾಹಿತಿ ಪರಿಶೀಲಿಸಿ, ಕಾರ್ಖಾನೆಗಳಿಂದ ಬರಬೇಕಿರುವ ಹಣ ಬಿಡುಗಡೆ ಮಾಡಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಾದೆ ಎಂದರು.

ಮುಖ್ಯಮಂತ್ರಿಗಳನ್ನು ನಾಲಾಯಕ್ ಸಿಎಂ ಅನ್ನೋದು ಸರೀನಾ? ಈ ಮಾತು ಮುಖ್ಯಮಂತ್ರಿಗಳನ್ನು ಕೆರಳಿಸಿದೆ. ಅಲ್ಲದೆ ಸುವರ್ಣಸೌಧದ ಗೇಟಿನ ಬೀಗ ಒಡೆಯುವುದು ಎಷ್ಟು ಸರಿ? ಮುಖ್ಯಮಂತ್ರಿ ಪ್ರತಿಕ್ರಿಯೆ ನೀಡುವಾಗ ಇಷ್ಟು ದಿನ ಎಲ್ಲಿ ನಿದ್ದೆ ಮಾಡಿದ್ದಾರ ಎಂಬ ಭಾವನೆಯಲ್ಲಿ ಹೇಳಿದ್ದಾರೆ ಅಷ್ಡೇ, ಕುಮಾರಸ್ವಾಮಿ ಹೇಳಿಕೆಯನ್ನು ಕೆ.ಜೆ. ಜಾರ್ಜ್ ಸಮರ್ಥಿಸಿಕೊಂಡರು.

ಕಬ್ಬಿಗೆ ಈಗ 2750 ರೂಪಾಯಿಯನ್ನು ಕೇಂದ್ರ ನಿಗಧಿ ಮಾಡಿದೆ. ರಾಜ್ಯ ಸರ್ಕಾರ ಈಗ ಕಬ್ಬಿನ ಇಳುವರಿ

ಹಾಗು ಉಪ ಉತ್ಪನ್ನಗಳನ್ನು ಆಧಾರಿಸಿ ಸ್ಥಳೀಯ ದರವನ್ನು ನಿಗಧಿ ಮಾಡುತ್ತೆ. ಈ ಬಗ್ಗೆ ಈಗಾಗಲೇ ಪ್ರಸ್ತಾವನೆಯನ್ನು ಸಿದ್ದಪಡಿಸಿದ್ದೇವೆ, ಈ ಬಗ್ಗೆ ಸಕ್ಕರೆ ಕಾರ್ಖಾನೆಗಳ ಅಭಿಪ್ರಾಯವನ್ನು ಕೇಳಿದ್ದೇವೆ, ಶೀಘ್ರವೇ ಅಂತಿಮ ತೀರ್ಮಾನವನ್ನು ಕೈಗೊಳ್ಳುತ್ತೇವೆ. ರೈತರು ಸಂಕಷ್ಷದಲ್ಲಿದ್ದಾರೆ .ರೈತರಿಗೆ ಸರಿಯಾದ ಬೆಲೆ ಕೊಡಬೇಕು ಎಂದು ಕೆ ಜೆ ಜಾರ್ಜ್​ ಹೇಳಿದರು.

Next Story

RELATED STORIES